ETV Bharat / bharat

ರಾಜಕೀಯ ಪಕ್ಷಗಳ ಯೋಜನೆಗಳು 'ಉಚಿತ'ವಲ್ಲ: ಫ್ರೀ ಯೋಜನೆಗಳ ಬಗ್ಗೆ ಚುನಾವಣಾ ಆಯೋಗ ಅಸಮಾಧಾನ - ಪಂಚರಾಜ್ಯ ಚುನಾವಣೆ ಘೋಷಣೆ

ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಉಚಿತ ಯೋಜನೆಗಳನ್ನು ಘೋಷಣೆ ಮಾಡುವ ಬಗ್ಗೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪಕ್ಷಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದಿದೆ.

ಚುನಾವಣಾ ಆಯೋಗ
ಚುನಾವಣಾ ಆಯೋಗ
author img

By ANI

Published : Oct 9, 2023, 10:31 PM IST

Updated : Oct 9, 2023, 11:04 PM IST

ನವದೆಹಲಿ: ಕರ್ನಾಟಕದಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಚುನಾವಣೆ ಘೋಷಣೆಯಾಗಿರುವ ಪಂಚರಾಜ್ಯಗಳಲ್ಲೂ ಭರಪೂರ ಉಚಿತಗಳನ್ನು ಘೋಷಿಸಿದೆ. ರಾಜಕೀಯ ಪಕ್ಷಗಳು ಲಂಗುಲಗಾಮಿಲ್ಲದೇ ಪ್ರಕಟಿಸುತ್ತಿರುವ 'ಫ್ರೀ'ಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಇಂತಹ ಯೋಜನೆಗಳನ್ನು 'ಜನಪ್ರಿಯತೆಯ ಸರಕು' ಎಂದು ಟೀಕಿಸಿದೆ.

ಪಂಚರಾಜ್ಯ ಚುನಾವಣೆಯ ದಿನಾಂಕ ಪ್ರಕಟದ ವೇಳೆ ಈ ಬಗ್ಗೆ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣೆಗೆ ಮುನ್ನ ಘೋಷಿಸಲಾದ ಉಚಿತ ಕೊಡುಗೆಗಳು ಜನಪ್ರಿಯತೆಯ ಸರಕುಗಳಷ್ಟೆ. ರಾಜಕೀಯ ಪಕ್ಷಗಳು ಅಂತಹ ಭರವಸೆಗಳನ್ನು ಕಾರ್ಯಗತಗೊಳಿಸಲು ಕಷ್ಟಪಡುತ್ತವೆ. ಅಧಿಕಾರಕ್ಕೆ ಬಂದ ನಂತರ ಅದನ್ನು ಜಾರಿಗೆ ಮಾಡದೇ ನಿಲ್ಲಿಸುತ್ತವೆ ಎಂದು ಹೇಳಿದ್ದಾರೆ.

ಪ್ರಕಟಿಸಿ ಕೊನೆಯಲ್ಲಿ ಜಾರಿಗೆ ಯತ್ನ: ಚುನಾವಣಾ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಭರಪೂರ ಉಚಿತಗಳನ್ನು ಘೋಷಣೆ ಮಾಡಿವೆ. ಇವೆಲ್ಲವನ್ನೂ ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಅಧಿಕಾರಕ್ಕೆ ಬಂದ ಪಕ್ಷ ನಂತರದಲ್ಲಿ ಇಂತಹ ಘೋಷಣೆಯನ್ನು ಮರೆತು ಬಿಡುತ್ತವೆ. ಬಳಿಕ ಮುಂದಿನ ಚುನಾವಣೆಯ ಕೊನೆಯಲ್ಲಿ ಅವನ್ನು ಅನುಷ್ಠಾನಕ್ಕೆ ತರಲು ಮುಂದಾಗುತ್ತದೆ. ಇಂತಹ ಯೋಜನೆಗಳನ್ನು ಏಕೆ ಪ್ರಕಟಿಸುತ್ತಾರೆ ಎಂದು ತಿಳಿಯುತ್ತಿಲ್ಲ ಎಂದರು.

ಚುನಾವಣಾ ಆಯೋಗವು ಉಚಿತ ಯೋಜನೆಗಳನ್ನು ಹೇಗೆ ನಿಯಂತ್ರಿಸಬಹುದು ಎಂಬ ಪ್ರಶ್ನೆಗೆ, ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಭರವಸೆಗಳನ್ನು ನೀಡುವ ಅಧಿಕಾರ ಹೊಂದಿವೆ. ಉಚಿತಗಳೂ ಇದೇ ಸಾಲಿನಲ್ಲಿವೆ. ಹೀಗಾಗಿ ಜನರು ಏನನ್ನು ಆಯ್ಕೆ ಮಾಡಬೇಕು ಎಂಬ ವಿವೇಚನೆ ಹೊಂದಿರಬೇಕು. ರಾಜಕೀಯ ಪಕ್ಷಗಳೂ ಕೂಡ ಪ್ರಣಾಳಿಕೆ ಬಿಡುಗಡೆ ವೇಳೆ ಹಣಕಾಸಿನ ಜವಾಬ್ದಾರಿಯನ್ನೂ ಹೊಂದಿರಬೇಕು ಎಂದು ಸಲಹೆ ನೀಡಿದರು.

ಉಚಿತಗಳ ಬಗ್ಗೆ ಪಕ್ಷಗಳಿಗೆ ನೋಟಿಸ್​: ಉಚಿತ ಯೋಜನೆಗಳನ್ನು ಪ್ರಕಟಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಈಗಾಗಲೇ ನೋಟಿಸ್​ ಕಳುಹಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆಯನ್ನೂ ಕೋರಲಾಗಿದೆ. ಘೋಷಣೆ, ಜಾರಿ ಸಾಧ್ಯತೆಯ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ವಿಷಯದ ಸ್ಪಷ್ಟತೆ ಬಗ್ಗೆ ನಿಖರ ಮಾಹಿತಿ ಸಿಕ್ಕ ಬಳಿಕ ಆಯೋಗ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿದೆ ಎಂದು ತಿಳಿಸಿಸಿದರು.

ಪಂಚರಾಜ್ಯಗಳಲ್ಲಿ ಚುನಾವಣೆ ಘೋಷಣೆ: ಚುನಾವಣಾ ಆಯೋಗ ಇಂದು ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. ನವೆಂಬರ್ 7 ರಂದು ಮಿಜೋರಾಂ, 17 ಕ್ಕೆ ಮಧ್ಯಪ್ರದೇಶ, 23ಕ್ಕೆ ರಾಜಸ್ಥಾನ, 30 ಕ್ಕೆ ತೆಲಂಗಾಣ, ನವೆಂಬರ್ 7 ಮತ್ತು 17 ರಂದು ಎರಡು ಹಂತದಲ್ಲಿ ಛತ್ತೀಸ್‌ಗಢದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಎಲ್ಲಾ ರಾಜ್ಯಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ ಘೋಷಣೆ: ಸಿಎಂ, ಮಾಜಿ ಸಿಎಂ, ಸಂಸದ ಹುರಿಯಾಳುಗಳ ಬಿಜೆಪಿ ಪಟ್ಟಿ ಬಿಡುಗಡೆ

Last Updated : Oct 9, 2023, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.