ETV Bharat / bharat

ಛತ್ತೀಸ್‌ಗಢ ಎನ್‌ಕೌಂಟರ್‌: ಮೋಸ್ಟ್​ ವಾಂಟೆಡ್ ​ಮಹಿಳಾ ನಕ್ಸಲರ ಹೊಡೆದುರುಳಿಸಿದ ಭದ್ರತಾ ಪಡೆ - ದಂತೇವಾಡ ಎನ್‌ಕೌಂಟರ್​ನಲ್ಲಿ ನಕ್ಸಲರ ಹತ್ಯೆ

Chhattisgarh Encounter: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮೋಸ್ಟ್​ ವಾಂಟೆಡ್ ​ಮಹಿಳಾ ನಕ್ಸಲರನ್ನು ಭದ್ರತಾ ಪಡೆ ಸದೆಬಡಿಯಲಾಗಿದೆ.

Chhattisgarh encounter
ಛತ್ತೀಸ್‌ಗಢ ಎನ್‌ಕೌಂಟರ್
author img

By

Published : Dec 18, 2021, 2:18 PM IST

ದಂತೇವಾಡ (ಛತ್ತೀಸ್‌ಗಢ): ಇಂದು ನಸುಕಿನ ಜಾವ 5.30ರ ವೇಳೆ ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮೋಸ್ಟ್​ ವಾಂಟೆಡ್ ​ಮಹಿಳಾ ನಕ್ಸಲರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ದಂತೇವಾಡದ ಗೊಂಡರಾಸ್ ಗ್ರಾಮದ ಬಳಿಯ ಕಾಡಿನಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರು ಹಾಗೂ ಡಿಆರ್‌ಜಿ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ.

ಎನ್​​ಕೌಂಟರ್​ ಅಂತ್ಯದ ವೇಳೆಗೆ ಇಬ್ಬರು ಮಹಿಳಾ ನಕ್ಸಲರನ್ನು ಸದೆಬಡಿಯಲಾಗಿತ್ತು. ಸ್ಥಳದಿಂದ ಮೂರು ರೈಫಲ್‌ಗಳು, ಮದ್ದುಗುಂಡುಗಳು, ಸಂವಹನ ಸಾಧನಗಳು, ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ಇದನ್ನೂ ಓದಿ: ಖಾಕಿ ಪಡೆ ನೋಡಿ ಪರಾರಿಯಾಗಲು ಯತ್ನಿಸಿದವರ ಬ್ಯಾಗ್​ನಲ್ಲಿ ರಾಶಿ ರಾಶಿ ಮೊಬೈಲ್​!

ಮೃತ ನಕ್ಸಲರನ್ನು ಹಿಡ್ಮೆ ಕೊಹ್ರಾಮೆ ಮತ್ತು ಪೊಜ್ಜೆ ಎಂದು ಗುರುತಿಸಲಾಗಿದೆ. ಹಿಂದಿನ ಕೃತ್ಯಗಳಿಗಾಗಿ ಇವರನ್ನು ಹುಡುಕುತ್ತಿದ್ದ ಪೊಲೀಸರು, ಇವರ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂ. ಮತ್ತು 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.