ETV Bharat / bharat

ಪಂಚರಾಜ್ಯ ಚುನಾವಣೆ: ಜೀವನದಲ್ಲೇ ಮೊದಲ ಬಾರಿಗೆ ಮತದಾನ ಮಾಡಿದ 93 ವರ್ಷದ ಶೇರ್​ಸಿಂಗ್​! - ಛತ್ತೀಸ್​ಗಢ ವಿಧಾನಸಭೆ ಚುನಾವಣೆ

Assembly Election 2023: ಛತ್ತೀಸ್​ಗಢದಲ್ಲಿ ಭಾನುಪ್ರತಾಪುರದ ಭೈಸಕನಹರ್ ಗ್ರಾಮದ ನಿವಾಸಿ ಶೇರ್​ಸಿಂಗ್​ ಹಿಡ್ಕೊ ಎಂಬ 93 ವರ್ಷದ ವೃದ್ಧ ತಮ್ಮ ಜೀವನದ ಮೊದಲ ಮತದಾನ ಮಾಡಿದ್ದಾರೆ.

Chhattisgarh polls: first-time-voting,  93 year old Sher Singh cast the first vote of his life
Assembly Election 2023: ತಮ್ಮ ಜೀವನದ ಮೊದಲ ಮತದಾನ ಮಾಡಿದ 93 ವರ್ಷದ ಶೇರ್​ಸಿಂಗ್​!
author img

By ETV Bharat Karnataka Team

Published : Nov 7, 2023, 3:06 PM IST

ಕಂಕೇರ್ (ಛತ್ತೀಸ್​ಗಢ): ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಇಂದು ಛತ್ತೀಸ್​ಗಢದ 20 ಕ್ಷೇತ್ರಗಳು ಹಾಗೂ ಮಿಜೋರಾಂನ ಎಲ್ಲ 40 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಛತ್ತೀಸ್​ಗಢದ ನಕ್ಸಲ್​ ಪೀಡಿತ ಪ್ರದೇಶದ ಕೆಲ ಅಹಿತಕರ ಘಟನೆಗಳ ನಡುವೆಯೂ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕೆಲವು ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆ ಸ್ಥಾಪಿಸಿರುವುದು ವಿಶೇಷವಾಗಿದ್ದರೆ, 93 ವರ್ಷದ ವಯೋವೃದ್ಧರೊಬ್ಬರು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.

ಛತ್ತೀಸ್​ಗಢದಲ್ಲಿ ಐಇಡಿ ಸ್ಫೋಟ: 90 ಸದಸ್ಯ ಬಲದ ಛತ್ತೀಸ್​ಗಢದಲ್ಲಿ ಎರಡು ಹಂತಗಳ ಮತದಾನ ನಿಗದಿಯಾಗಿದೆ. ಇಂದು ಮೊದಲ ಹಂತದಲ್ಲಿ 20 ಕ್ಷೇತ್ರದಲ್ಲಿ ಮತದಾನ ಜರುಗುತ್ತಿದೆ. ಇದರಲ್ಲಿ ನಕ್ಸಲ್​ ಪೀಡಿತ ಬಸ್ತಾರ್​ ವಿಭಾಗದಲ್ಲಿ 12 ಕ್ಷೇತ್ರಗಳು ಸೇರಿದ್ದು, ಪೊಲೀಸರು, ಸಿಆರ್​ಪಿಎಫ್​ ಸೇರಿದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣು ಇರಿಸಿವೆ. ಇದರ ನಡುವೆ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರು ಐಇಡಿ ಸ್ಫೋಟಿಸಿದ್ದಾರೆ. ಇದರಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ, ಇನ್ಸ್​ಪೆಕ್ಟರ್​ ಶ್ರೀಕಾಂತ್ ಎಂಬುವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: 32 ಚುನಾವಣೆಗಳಲ್ಲಿ ಸ್ಪರ್ಧೆ, 33ನೇ ಬಾರಿಗೆ ಅಖಾಡಕ್ಕಿಳಿದ ಹಠವಾದಿ

ಇಂದು ಬೆಳಗ್ಗೆ ಸಿಆರ್‌ಪಿಎಫ್ ಮತ್ತು 206ನೇ ಬೆಟಾಲಿಯನ್ ಕೋಬ್ರಾ ಸಿಬ್ಬಂದಿಯ ಜಂಟಿ ಪಡೆಯ ತೊಂಡಮಾರ್ಕ ಕ್ಯಾಂಪ್‌ನಿಂದ ಎಲ್ಮಗುಂದ ಗ್ರಾಮದ ಕಡೆಗೆ ಹೊರಟಿತ್ತು. ಇದೇ ವೇಳೆ ಕೋಬ್ರಾ ಇನ್ಸ್‌ಪೆಕ್ಟರ್​​ ಶ್ರೀಕಾಂತ್ ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಮೇಲೆ ಕಾಲಿಟ್ಟಿದ್ದಾರೆ. ಇದರಿಂದ ಅದು ಸ್ಫೋಟಗೊಂಡಿದ್ದರಿಂದ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಕೂಡ ನಾರಾಯಪುರದಲ್ಲಿ ನಕ್ಸಲರು ಐಇಡಿ ಸ್ಥಾಪಿಸಲು ಯೋಜಿಸಿದ್ದರು. ಆದರೆ, ಐಟಿಬಿಪಿ ತಂಡ ಸ್ಥಳಕ್ಕಾಗಮಿಸಿ ಐಇಡಿ ಬಾಂಬ್ ಪತ್ತೆ ಮಾಡಿತ್ತು. ಅದನ್ನು ನಿಷ್ಕ್ರಿಯಗೊಳಿಸುವಾಗ ಯೋಧಯೊಬ್ಬರಿಗೆ ಸಣ್ಣ-ಪುಟ್ಟ ಗಾಯಗಳು ಆಗಿದ್ದವು.

ಚಂದಮೇಟಾದಲ್ಲಿ ಪ್ರಥಮ ಬಾರಿಗೆ ಮತದಾನ: ಇದೇ ಬಸ್ತಾರ್ ವಿಭಾಗದ ಜಗದಲ್‌ಪುರ ಜಿಲ್ಲೆಯ ಚಂದಮೇಟಾ ಗ್ರಾಮದಲ್ಲಿ ಪ್ರಥಮ ಬಾರಿಗೆ ಮತದಾನ ನಡೆಯುತ್ತಿದೆ. ಛತ್ತೀಸ್‌ಗಢ ಮತ್ತು ಒಡಿಶಾದ ಗಡಿ ಪ್ರದೇಶದಲ್ಲಿರುವ ದರ್ಭಾ ಅಭಿವೃದ್ಧಿ ಬ್ಲಾಕ್‌ನ ಈ ಗ್ರಾಮವು ನಕ್ಸಲ್ ಪೀಡಿತ ಪ್ರದೇಶವಾಗಿದೆ. ಈ ಹಿಂದೆ ಈ ಪ್ರದೇಶದಲ್ಲಿ ನಕ್ಸಲರ ಉಪಟಳ ಸದಾ ಇರುತ್ತಿತ್ತು. ಇದೇ ಗ್ರಾಮದಲ್ಲಿ ನಕ್ಸಲೀಯರು ತಮ್ಮ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದರು.

ಈಗ ಒಂದು ವರ್ಷದ ಹಿಂದೆ ಭದ್ರತಾ ಪಡೆಗಳು ಇಲ್ಲಿನ ನಕ್ಸಲರ ಶಿಬಿರವನ್ನು ತೆರವು ಮಾಡಿದ್ದಾರೆ. ಅಲ್ಲದೇ, ಶಾಲೆಯನ್ನು ಆರಂಭಿಸಿದ್ದಾರೆ. ಈಗ ಶಾಲೆಯೂ ಮತಗಟ್ಟೆಯಾಗಿದೆ. ಗ್ರಾಮದಲ್ಲಿ ಒಟ್ಟು 337 ಮತದಾರರಿದ್ದು, ಮೊದಲ ಬಾರಿಗೆ ಮತಗಟ್ಟೆ ಸ್ಥಾಪಿಸಲಾಗಿದೆ. ಹೀಗಾಗಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಈ ಗ್ರಾಮದ ಜನರು ತಮ್ಮ ಗ್ರಾಮದಲ್ಲಿಯೇ ಮತ ಚಲಾಯಿಸಿದ್ದಾರೆ. ಮತದಾನ ಮಾಡಲು ಗ್ರಾಮಸ್ಥರು ಕೂಡ ಉತ್ಸಾಹ ತೋರುತ್ತಿದ್ದಾರೆ. ಈ ಹಿಂದೆ ಮತದಾನ ಮಾಡಲು 6ರಿಂದ 7 ಕಿಲೋಮೀಟರ್ ದೂರದ ಚಿಂದ್‌ಗೂರು ಗ್ರಾಮಕ್ಕೆ ನಡೆಯಬೇಕಿತ್ತು. ಈಗ ಗ್ರಾಮದಲ್ಲಿ ಮತದಾನ ಮಾಡುತ್ತಿರುವುದು ಖುಷಿ ತಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

93ರ ವೃದ್ಧನಿಂದ ಮೊದಲ ಬಾರಿಗೆ ಮತದಾನ: ಮತ್ತೊಂದೆಡೆ, ಭಾನುಪ್ರತಾಪುರದ ಭೈಸಕನಹರ್ ಗ್ರಾಮದ ನಿವಾಸಿ ಶೇರ್​ಸಿಂಗ್​ ಹಿಡ್ಕೊ ಎಂಬ 93 ವರ್ಷದ ವೃದ್ಧ ತಮ್ಮ ಜೀವನದ ಮೊದಲ ಮತದಾನ ಮಾಡಿದ್ದಾರೆ. ಶೇರ್​ಸಿಂಗ್​ ಅವರ ಮತದಾರರ ಗುರುತಿನ ಚೀಟಿ ಮಾಡದ ಕಾರಣ ಇಲ್ಲಿಯವರೆಗೆ ಅವರಿಗೆ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ.

ಈ ಬಾರಿ ಶೇ.100ರಷ್ಟು ಮತದಾನಕ್ಕಾಗಿ ಶ್ರಮಿಸುತ್ತಿರುವ ಚುನಾವಣಾ ಆಯೋಗಕ್ಕೆ ವಿಷಯ ಗೊತ್ತಾಗಿತ್ತು. ಅಂತೆಯೇ, ಆಯೋಗದ ತಂಡ ಭೈಸಕನಹರ್ ಗ್ರಾಮಕ್ಕೆ ಭೇಟಿ ಶೇರ್​ಸಿಂಗ್​ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದೆ. ಇಂದು ಬೆಳಗ್ಗೆ ಅವರನ್ನು ಕುಟುಂಬಸ್ಥರು ಮತಗಟ್ಟೆಗೆ ಕರೆದೊಯ್ದಿದ್ದರು. ಈ ವೇಳೆ ತಮ್ಮ ಅಮೂಲ್ಯ ಮತ ಚಲಾಯಿಸಿದ್ದಾರೆ. ವೃದ್ಧಾಪ್ಯದಿಂದಾಗಿ ಅವರಿಗೆ ಕೇಳಲು ಅಥವಾ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮಿಜೋರಾಂನಲ್ಲಿ ಶತಾಯುಷಿ ಮತದಾನ: ಮಿಜೋರಾಂನಲ್ಲೂ ಜನತೆ ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. 101 ವರ್ಷದ ಮತದಾರರೊಬ್ಬರು 24-ಚಂಫೈ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ. ಶತಾಯುಷಿಯಾದ ಪು ರುಅಲ್‌ನುಡಾಲಾ ಎಂಬುವರು ತಮ್ಮ 86 ವರ್ಷದ ಪತ್ನಿ ಪೈ ತಂಘ್‌ಲೀತ್ಲುಯಿ ಅವರೊಂದಿಗೆ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದರು. ಅಲ್ಲದೇ, 96 ವರ್ಷ ವಯಸ್ಸಿನ ದೃಷ್ಟಿದೋಷವುಳ್ಳ ಮತದಾರರೊಬ್ಬರು ಕೂಡ ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಮಿಜೊರಾಂ, ಛತ್ತೀಸ್‌ಗಢದಲ್ಲಿ ಬಿಗಿ ಭದ್ರತೆಯ ನಡುವೆ ಮತದಾನ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.