ಜಾಂಜ್‌ಗಿರ್, ಛತ್ತೀಸ್‌ಗಢ: ಜಿಲ್ಲೆಯಲ್ಲಿ 4 ಜನರ ಹತ್ಯೆ ಸಂಚಲನ ಸೃಷ್ಟಿಸಿದೆ. ಮಾನಸಿಕ ರೋಗಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಘಟನೆ ಜುಲೈ 31 ರಂದು ನಡೆದಿದ್ದು, ಕೊಲೆ ಬಳಿಕ ಆರೋಪಿ ಪರಾರಿಯಾಗಿದ್ದ. ಬುಧವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಘಟನೆ ಎಲ್ಲಿ: ಜಿಲ್ಲೆಯ ದಿಯೋರಿ ಚೌಕಿ ಪಂತೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಅಲ್ಲಿ ವಾಸವಾಗಿರುವ ದೇಶರಾಜ್ ಕಶ್ಯಪ್ ಎಂಬಾತ ತನ್ನ 40 ವರ್ಷದ ಪತ್ನಿ ಮೊಂಗ್ರಾ ಬಾಯಿ, 16 ವರ್ಷದ ಮಗಳು ಪೂಜಾ, 10 ವರ್ಷದ ಪಿಹು ಮತ್ತು 6 ವರ್ಷದ ಮಗಳು ಯಾಚನಾಳನ್ನು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಈ ಕೊಲೆಗಳು ನಡೆದ ಬಳಿಕ ಆರೋಪಿ ಹೊರಗಿನಿಂದ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದರು.
ಕೊಲೆಗೆ ಕಾರಣವೇನು: ದೇಶರಾಜ್ ಕಶ್ಯಪ್ ಒಬ್ಬ ಮಾನಸಿಕ ರೋಗಿ ಎಂದು ಹೇಳಲಾಗುತ್ತಿದೆ. ಕಳೆದ 10 ವರ್ಷಗಳಿಂದ ಬಿಲಾಸ್‌ಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ 31 ರಂದು ಅವರು ತಮ್ಮ ಸೋದರ ಮಾವನೊಂದಿಗೆ ಚಿಕಿತ್ಸೆಗಾಗಿ ಬಿಲಾಸ್ಪುರಕ್ಕೆ ಹೋಗಿದ್ದರು. ಅಲ್ಲಿಂದ ವಾಪಸಾದ ಬಳಿಕ ಎಲ್ಲರನ್ನು ಕೊಲೆ ಮಾಡಿದ್ದ.
ನೆರೆಹೊರೆಯವರು ಪೊಲೀಸರಿಗೆ ಮಾಹಿತಿ: ಗ್ರಾಮದ ಸರಪಂಚ್ ಅವರು ಆಗಸ್ಟ್ 2 ರಂದು ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಪೊಲೀಸ್ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿದೆ. ಬಳಿಕ ನೆರೆಹೊರೆಯವರ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಓದಿ: Triple Murder: ಮನೆಯಲ್ಲೇ ತಾಯಿ, ಇಬ್ಬರು ಮಕ್ಕಳ ಕತ್ತು ಸೀಳಿ ಬರ್ಬರ ಹತ್ಯೆ
ಆರೋಪಿಗೆ ಮರಣ ದಂಡನೆ ಶಿಕ್ಷೆ: ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅಪರಾಧಿಗೆ ಗುಜರಾತ್ನ ಸೂರತ್ ನ್ಯಾಯಾಲಯವು ಮರಣ ದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ 23 ವರ್ಷದ ಅಪರಾಧಿಯು ಪುಟ್ಟ ಮಗುವನ್ನು ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯವು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದೆ. ಅಪರಾಧಿಯನ್ನು ಸೂರತ್ನ ಸಚಿನ್ ಪ್ರದೇಶದ ನಿವಾಸಿ ಇಸ್ಮಾಯಿಲ್ ಯೂಸುಫ್ (23) ಎಂದು ಗುರುತಿಸಲಾಗಿದೆ.
ಅತ್ಯಾಚಾರ ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ನಯನ್ ಸುಖ್ದವಾಲ್ ಮಾತನಾಡಿ, ಅಪರಾಧಿಗೆ ಯಾವುದೇ ಕರುಣೆಯನ್ನು ನ್ಯಾಯಾಲಯವು ತೋರಿಲ್ಲ. ಇದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದೆ. ಅಪರಾಧಿಗೆ ಮರಣದಂಡನೆ ವಿಧಿಸಲಾಗಿದೆ. ಇದೇ ವೇಳೆ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.