ETV Bharat / bharat

ಸೋಶಿಯಲ್​ ಮೀಡಿಯಾ 'ಪ್ರೇಮ' ಕೊಲೆಯಲ್ಲಿ ಅಂತ್ಯ: ನೀಟ್​ ತಯಾರಿಯಲ್ಲಿದ್ದ ಗೆಳತಿಯ ಕೊಂದ ಗೆಳೆಯ! - ನೀಟ್​ ಪರೀಕ್ಷೆ ತಯಾರಿಯಲ್ಲಿದ್ದ ಗೆಳತಿಯ ಕೊಲೆ

ಗುಜರಾತ್​ನ ಯುವಕ ಮತ್ತು ಛತ್ತೀಸ್​​ಘಡದ 17 ವರ್ಷದ ಯುವತಿ ನಡುವೆ ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿತ್ತು. ಈ ನಡುವೆ ಯುವಕ ಯುವತಿಯನ್ನು ಭೇಟಿ ಮಾಡಲೆಂದು ರಾಜಸ್ಥಾನದ ಕೋಟಾಗೆ ಬಂದಿದ್ದ. ಆಗ ಆಕೆಯನ್ನು ಅಪಹರಿಸಿ ಕೊಲೆಗೈದಿದ್ದಾನೆ.

Chhattisgarh girl preparing for NEET in Kota murdered by boyfriend
ಸೋಶಿಯಲ್​ ಮೀಡಿಯಾದಲ್ಲಿ ಚಿರುಗಿದ 'ಪ್ರೇಮ' ಕೊಲೆಯಲ್ಲಿ ಅಂತ್ಯ
author img

By

Published : Jun 9, 2022, 7:08 PM IST

ಜೈಪುರ (ರಾಜಸ್ಥಾನ): ಸೋಶಿಯಲ್​ ಮೀಡಿಯಾದಲ್ಲಿ ಬೆಳೆದ ಗೆಳೆತನ ಕೊಲೆಯಲ್ಲಿ ಅಂತ್ಯವಾಗಿದೆ. ಸ್ವತಃ ಗೆಳೆಯನೇ ತನ್ನ ಗೆಳತಿಯನ್ನು ಕಿಡ್ನಾಪ್​ ಮಾಡಿ ಕೊಲೆಗೈದು ಪೊಲೀಸರ ಅತಿಥಿ ಆಗಿದ್ದಾನೆ.

ಗುಜರಾತ್​ನ ಯುವಕ ಮತ್ತು ಛತ್ತೀಸ್​​ಘಡದ 17 ವರ್ಷದ ಯುವತಿಯ ನಡುವೆ ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿತ್ತು. ಯುವತಿ ನೀಟ್​ ಪರೀಕ್ಷೆ ತಯಾರಿಗೆಂದು ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನೆಲೆಸಿದ್ದಳು. ಈ ನಡುವೆ ಯುವಕ ಯುವತಿಯನ್ನು ಭೇಟಿ ಮಾಡಲೆಂದು ಕೋಟಾಗೆ ಬಂದಿದ್ದಾನೆ. ಆಗ ಆಕೆಯನ್ನು ಅಪಹರಿಸಿ ದುಷ್ಕೃತ್ಯವೆಸಗಿದ್ದಾನೆ.

ಗೆಳೆಯನೊಂದಿಗೆ ಹೋದಾಕೆ ಮರಳಿ ಬರಲಿಲ್ಲ: ನೀಟ್​ ಪರೀಕ್ಷೆ ತಯಾರಿ ನಡೆಸುತ್ತಿದ್ದ ಯುವತಿ ಕೋಟಾದ ನ್ಯೂ ರಾಜೀವ್​ ಗಾಂಧಿ ಕಾಲೋನಿಯಲ್ಲಿರುವ ಹಾಸ್ಟೆಲ್​​ನಲ್ಲಿ ವಾಸವಾಗಿದ್ದಳು. ಆಕೆಯ ಸಾವಿಗೂ ಎರಡು ದಿನ ಮುನ್ನ ಗೆಳೆಯ ಗುಜರಾತ್​​ನಿಂದ ಬಂದು ಹಾಸ್ಟೆಲ್ ಸಮೀಪದ ಹೋಟೆಲ್​ನಲ್ಲಿದ್ದ. ಅಂತೆಯೇ ಜೂ.5ರಂದು ಗೆಳೆಯನಿದ್ದ ಹೋಟೆಲ್​ಗೆ ತೆರಳಿದ್ದ ಯುವತಿ ಆತನನ್ನು ಹೊರಗಡೆಯೇ ಭೇಟಿ ಮಾಡಿ ಬಂದಿದ್ದಳು. ಅಲ್ಲದೇ, ಮರುದಿನ ಜೂ.6ರಂದು ಬೆಳಗ್ಗೆ ಗೆಳೆಯನ ಜೊತೆಗೆ ಕೋಚಿಂಗ್​​ ಕ್ಲಾಸ್​ಗೆ ತೆರಳಿದ್ದ ಯುವತಿ ಮರಳಿ ಬಂದಿಲ್ಲ.

ಕಲ್ಲಿನಿಂದ ಜಜ್ಜಿ ಕೊಲೆ: ಹಾಸ್ಟೆಲ್​ನಿಂದ ತೆರಳಿದ್ದ ಯುವತಿ ಮರಳಿ ಬಾರದ ಕಾರಣ ಹಾಸ್ಟೆಲ್​ನವರು ಪೊಲೀಸರು ಮತ್ತು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದರ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಬುಧವಾರ ಕೋಟಾ ಸಮೀಪದ ಜವಾಹರ್ ಸಾಗರ ಡ್ಯಾಂ ಸಮೀಪದ ಅರಣ್ಯದಲ್ಲಿ ಯುವತಿಯ ಶವ ಪತ್ತೆಯಾಗಿದೆ. ಕಲ್ಲಿನಿಂದ ಜಜ್ಜಿ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ, ಬಾಲಕಿಯ ಕಾಲ್​​ ಡಿಟೈಲ್ಸ್​​ ಪರಿಶೀಲಿಸಿದಾಗ ಆರೋಪಿ ಯುವಕ ಗುಜರಾತ್​ನಿಂದ ಬಂದಿರುವುದು ಖಚಿತವಾಗಿದೆ. ಅದರಂತೆ ಗುಜರಾತ್​ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಕೋಟಾಗೆ ಕರೆತರಲು ಪೊಲೀಸರು ಮುಂದಾಗಿದ್ದಾರೆ.

ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕಿಡ್ನಾಪ್​ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಕ್ಸೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಗುಡ್ಡವೇರಿ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯ ಮನವೊಲಿಸಿ ಪ್ರಾಣ ಕಾಪಾಡಿದ ಪೊಲೀಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.