ETV Bharat / bharat

ಛತ್ತೀಸ್‌ಗಢ: ನಕ್ಸಲ್‌ಪೀಡಿತ ಪ್ರದೇಶದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆ - ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ

Officials on poll duty missing in Naxal affected Bijapur: ಛತ್ತೀಸ್‌ಗಢ ರಾಜ್ಯದ ಬಿಜಾಪುರದಲ್ಲಿ ಅತಿ ಕಡಿಮೆ (ಶೇ 40.98) ಮತದಾನ ದಾಖಲಾಗಿದೆ. ಇಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

Chhattisgarh elections
ಛತ್ತೀಸ್‌ಗಢ: ನಕ್ಸಲ್ ಪೀಡಿತ ಬಿಜಾಪುರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆ
author img

By ETV Bharat Karnataka Team

Published : Nov 9, 2023, 8:05 AM IST

ಬಿಜಾಪುರ(ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ಮಂಗಳವಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದು 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ನಕ್ಸಲ್‌ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆಯಾಗಿದ್ದು, ಈ ಬಗ್ಗೆ ಚುನಾವಣಾ ನಿಯಂತ್ರಣ ಕೊಠಡಿಗೆ ಮಾಹಿತಿ ದೊರೆತಿಲ್ಲ.

ಛತ್ತೀಸ್‌ಗಢದಲ್ಲಿ ಮಂಗಳವಾರ ನಡೆದ ಮೊದಲ ಹಂತದಲ್ಲಿ ಶೇ.71.48ರಷ್ಟು ಮತದಾನವಾಗಿದೆ. ನಕ್ಸಲೀಯರು ಹಿಂಸಾಚಾರ ಹಾಗೂ ಮತದಾನ ಬಹಿಷ್ಕರಿಸಲು ಕರೆ ನೀಡಿದ್ದರು. ಈ ಬೆದರಿಕೆಯನ್ನು ಗ್ರಹಿಸಿದ ಅಧಿಕಾರಿಗಳು ಪ್ರತ್ಯೇಕ ಸಮಯದ ಸ್ಲಾಟ್‌ಗಳಲ್ಲಿ ಮತದಾನಕ್ಕೆ ಅವಕಾಶ ನೀಡಿದ್ದರು. ಬಿಜಾಪುರದಲ್ಲಿ ಅತಿ ಕಡಿಮೆ (ಶೇ 40.98) ಮತದಾನ ದಾಖಲಾಗಿತ್ತು. ಮತಗಟ್ಟೆ ತಂಡದ 200ಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ ಈವರೆಗೂ ಚುನಾವಣಾ ನಿಯಂತ್ರಣ ಕೊಠಡಿಗೆ ವರದಿ ಸಲ್ಲಿಸಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ. ಭದ್ರತಾ ಕಾರಣಗಳಿಗಾಗಿ ಅವರಲ್ಲಿ ಹಲವರನ್ನು ಹೆಲಿಕಾಪ್ಟರ್ ಮೂಲಕ ಮತಗಟ್ಟೆಗಳ ಸಮೀಪ ಇಳಿಸಲಾಗಿತ್ತು.

ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ: ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಆಂಜನೇಯ ವೈಷ್ಣವ್ ಈಟಿವಿ ಭಾರತ್ ಜೊತೆ ಮಾತನಾಡಿ, ''ನಕ್ಸಲರು ಮತಗಟ್ಟೆ ಸಿಬ್ಬಂದಿಯನ್ನು ಅಪಹರಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ'' ಎಂದು ಹೇಳಿದರು. "ಸುಮಾರು 76 ಸ್ಥಳಗಳಲ್ಲಿ ನಾವು ಹೆಲಿಕಾಪ್ಟರ್‌ಗಳ ಮೂಲಕ ಸಿಬ್ಬಂದಿಯನ್ನು ಮತಗಟ್ಟೆಗೆ ಕಳುಹಿಸಿದ್ದೇವೆ. ಅವರ ಭದ್ರತೆಯ ಜವಾಬ್ದಾರಿ ನಮ್ಮ ಮೇಲಿದೆ" ಎಂದು ಹೇಳಿದರು.

ಮೊದಲ ಹಂತದ ಚುನಾವಣೆ: ಮೊದಲ ಹಂತದ ಚುನಾವಣೆಯು ಅನೇಕ ನಕ್ಸಲೀಯ ಘಟನೆಗಳಿಗೆ ಕಾರಣವಾಗಿದೆ. ಸುಕ್ಮಾ ಜಿಲ್ಲೆಯ ಚಿಂತಗುಫಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರೆ, ಅದೇ ಜಿಲ್ಲೆಯ ತೊಂಡಮಾರ್ಕಾ ಕ್ಯಾಂಪ್ ಬಳಿ ನಡೆದ ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಕಮಾಂಡೋ ಗಾಯಗೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ನಾರಾಯಣಪುರ, ಬಿಜಾಪುರ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ನಕ್ಸಲೀಯರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ, ಆ ಘಟನೆಗಳಲ್ಲಿ ಭದ್ರತಾ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಾನವ ಕಳ್ಳಸಾಗಣೆ: ಬೆಂಗಳೂರು ಸೇರಿ ದೇಶಾದ್ಯಂತ ಎನ್​ಐಎ ದಾಳಿ, 44 ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.