ETV Bharat / bharat

ಕಾಶ್ಮೀರದಲ್ಲಾಗುತ್ತಿರುವ ಹತ್ಯೆಗಳಿಗೆ ಜವಾಬ್ದಾರಿ ಯಾರು?: ಕೇಂದ್ರ ಪ್ರಶ್ನಿಸಿದ ಸಿಎಂ ಭೂಪೇಶ್​ ಬಘೇಲ್

author img

By

Published : Jun 3, 2022, 6:00 PM IST

ಆರ್ಟಿಕಲ್ 370 ಅನ್ನು ತೆಗೆದುಹಾಕುವುದರಿಂದ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು 3 ವಿಭಾಗಗಳಾಗಿ ವಿಂಗಡಿಸುವುದರಿಂದ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತಿದ್ದರು. ಈಗ ಪರಿಸ್ಥಿತಿ ಏಕೆ ಸಹಜವಾಗಿಲ್ಲ? ಹಿಂದೂಗಳು ಸಾಯುತ್ತಿದ್ದರೂ ಯಾಕೆ ಬಿಜೆಪಿ ಮತ್ತು ಆರ್​ಎಸ್​ಎಸ್​ ಮೌನವಾಗಿದೆ ಎಂದು ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್.

Chhattisgarh CM Bhupesh Baghel talked to press
ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್ ಮಾಧ್ಯಮದೊಂದಿಗೆ ಮಾತನಾಡಿದರು.

ಛತ್ತೀಸ್​ಗಢ: ಕಾಶ್ಮೀರದಲ್ಲಿ ನಡೆಯುತ್ತಿರುವ ಅಮಾಯಕ ಕಾಶ್ಮೀರಿ ಪಂಡಿತರು ಮತ್ತು ಇತರ ಅಲ್ಪಸಂಖ್ಯಾತರ ಉದ್ದೇಶ ಪೂರ್ವಕ ಹತ್ಯೆ ಪ್ರಕರಣದ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್​, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್​ 370ನ್ನು ತೆಗೆದುಹಾಕಿದರೂ ಇನ್ನೂ ಯಾಕೆ ಅಲ್ಲಿನ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್​ 370ನ್ನು ತೆಗೆದುಹಾಕಿ ಜಮ್ಮು ಕಾಶ್ಮೀರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಚುನಾಯಿತ ಸರ್ಕಾರವನ್ನು ತೆಗೆದುಹಾಕಿ, ರಾಷ್ಟ್ರಪತಿ ಆಳ್ವಿಕೆ ಸಹ ಹೇರಲಾಗಿದೆ. ಆದರೂ ಇಂದು ಕಾಶ್ಮೀರಿ ಪಂಡಿತರನ್ನು, ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿದೆ. 370ನ್ನು ತೆಗೆದುಹಾಕಿದಂತಹ ಉತ್ತಮ ಕೆಲಸ ನಮ್ಮಿಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತದೆ. ಹಾಗಾದರೆ ಇದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಕೇಂದ್ರ ಸರ್ಕಾರಕ್ಕೆ ಜಮ್ಮು ಕಾಶ್ಮೀರದಲ್ಲಿ ಯಾಕೆ ಭದ್ರತೆ ನೀಡಲು ಸಾಧ್ಯವಾಗುತ್ತಿಲ್ಲ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅವರಿಂದ ಅಧಿಕೃತ ಉದ್ಯೋಗಿಗಳಿಗೆ ಭದ್ರತೆ ನೀಡಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರನ್ನು ಹೇಗೆ ಸುರಕ್ಷಿತವಾಗಿರಿಸುತ್ತಾರೆ? ಆರ್ಟಿಕಲ್ 370 ಅನ್ನು ತೆಗೆದುಹಾಕುವುದರಿಂದ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು 3 ವಿಭಾಗಗಳಾಗಿ ವಿಂಗಡಿಸುವುದರಿಂದ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತಿದ್ದರು. ಈಗ ಪರಿಸ್ಥಿತಿ ಏಕೆ ಸಹಜವಾಗಿಲ್ಲ? ಹಿಂದೂಗಳು ಸಾಯುತ್ತಿದ್ದರೂ ಯಾಕೆ ಬಿಜೆಪಿ ಮತ್ತು ಆರ್​ಎಸ್​ಎಸ್​ ಮೌನವಾಗಿದೆ ಎಂದು ಹೇಳದರು.

ಭಾಷಣದಲ್ಲಿ ದೊಡ್ಡ ದೊಡ್ಡ ಭರವಸೆ ಆಶ್ವಾಸನೆಗಳನ್ನು ನೀಡಿದ್ದಾರೆ. ಆದರೆ, ಏನಾಗಿದೆ ಈಗ? ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಮೊದಲಿನಂತೆಯೇ ಇದೆ. ಮುಖ್ಯವಾಗಿ ಕೇಂದ್ರ ಸರ್ಕಾರದ ಎಲ್ಲ ತಂತ್ರಗಳು ವಿಫಲವಾಗಿದೆ ಎಂದು ಭೂಪೇಶ್​ ಬಘೇಲ್ ಕುಟುಕಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆ ಪ್ರಕರಣ: ಹೆಚ್ಚಿನ ಅರೆ ಸೇನಾಪಡೆ ನಿಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.