ಅನ್ಷುಲಾ(ಛತ್ತೀಸ್ಗಢ): ಶ್ರಾದ್ಧ ಕಾರ್ಯಕ್ರಮದ ಆಹಾರ ಸೇವನೆ ಮಾಡಿರುವ ಪರಿಣಾಮ 50 ಮಕ್ಕಳು ಸೇರಿದಂತೆ 100 ಮಂದಿ ಅಸ್ವಸ್ಥಗೊಂಡಿರುವ ಘಟನೆ ಛತ್ತೀಸ್ಗಢದ ಅನ್ಷುಲಾದಲ್ಲಿ ನಡೆದಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶ್ರಾದ್ಧ ಕಾರ್ಯಕ್ರಮಕ್ಕೋಸ್ಕರ ತಯಾರು ಮಾಡಿದ್ದ ಆಹಾರ ಸೇವನೆ ಮಾಡಿರುವ ಇವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದಿದ್ದು, ಎಲ್ಲರೂ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗಾಗಿ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಥೋಮನ್ ಸಿಂಗ್ ಭೇಟಿ ನೀಡಿದ್ದು, ಅನಾರೋಗ್ಯಕ್ಕೊಳಗಾದವರ ಆರೋಗ್ಯ ವಿಚಾರಣೆ ನಡೆಸಿದ್ದಾರೆ. ಆದರೆ, ವಿಷಹಾರ ಸೇವನೆಯಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಚಿಕಿತ್ಸೆ ಪಡೆದುಕೊಂಡಿರುವ ಕಾರಣ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: Forbes 2021ರ ಶ್ರೀಮಂತರ ಲಿಸ್ಟ್ ರಿಲೀಸ್... ಮುಖೇಶ್ ಅಂಬಾನಿ ಭಾರತದ ನಂಬರ್ 1 ಶತಕೋಟ್ಯಾಧಿಪತಿ
ಶಾಲಾ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆದ ಕಾರಣ ಬಹುತೇಕ ಎಲ್ಲ ಮಕ್ಕಳು ಅಲ್ಲಿಗೆ ತೆರಳಿ ಊಟ ಮಾಡಿದ್ದರು ಎನ್ನಲಾಗಿದೆ. ಛತ್ತೀಸ್ಗಢದ ಮಹಾಸಮುಂಡ್ದಲ್ಲಿ ಕಳೆದ ಕೆಲ ದಿನಗಳ ಹಿಂದೆ ವ್ಯಕ್ತಿಯೋರ್ವ ಸಾವನ್ನಪ್ಪಿದ್ದನು. ಇದಾದ ಬಳಿಕ ಏರ್ಪಾಡು ಮಾಡಲಾಗಿದ್ದ ಆಚರಣೆಯೊಂದರಲ್ಲಿ ಊಟ ತಯಾರು ಮಾಡಿದ್ದರು.