ಛತ್ತರ್ಪುರ್(ಮಧ್ಯಪ್ರದೇಶ): ಇಂದಿನ ಧಾವಂತದ ಜೀವನದಲ್ಲಿ ಒತ್ತಡದಿಂದ ಮುಕ್ತವಾಗಿರಲು ಆರೋಗ್ಯವಾಗಿರುವುದು ತುಂಬಾ ಅವಶ್ಯ. ಅದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಅಗತ್ಯ. ಸಾಮಾನ್ಯ ಜನರು ಆರೋಗ್ಯವಾಗಿರಲು ಡಿಐಜಿ ವಿವೇಕ್ ರಾಜ್ ಸಿಂಗ್ ವಿಡಿಯೋವೊಂದು ಪ್ರೇರೇಪಿಸಿದೆ.
ಮಧ್ಯಪ್ರದೇಶದ ಪನ್ನಾದಲ್ಲಿ ಆಯೋಜನೆಗೊಂಡಿದ್ದ ಸಭೆಗೆ ಹಾಜರಾಗಲು ಡಿಐಜಿಯೋರ್ವರು ಛತ್ತರ್ಪುರ್ನಿಂದ ಎರಡೂವರೆ ಗಂಟೆಯಲ್ಲಿ 21 ಕಿಲೋ ಮೀಟರ್ ಓಡಿ, ಸಭೆಗೆ ಹಾಜರಾಗಿದ್ದು, ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಡಿಐಜಿ ಅವರ ಓಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 'ರಾಷ್ಟ್ರಪತಿ ಅಲ್ಲ, ಪ್ರಧಾನಿಯಾಗೋ ಕನಸು ಕಾಣುತ್ತಿದ್ದೇನೆ' ಅಖಿಲೇಶ್ಗೆ ಮಾಯಾವತಿ ಟಾಂಗ್
ಛತ್ತರ್ಪುರ್ ಡಿಐಜಿ ವಿವೇಕ್ ರಾಜ್ ಸಿಂಗ್ ಛತ್ತರ್ಪುರ್ನಿಂದ ಪನ್ನಾಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅರ್ಧದಾರಿಯಲ್ಲೇ ಕಾರಿನಿಂದ ಕೆಳಗೆ ಇಳಿದು, ಓಡಿ ಸಭೆಗೆ ಹಾಜರಾಗಿದ್ದಾರೆ. ಕೇವಲ ಎರಡೂವರೆ ಗಂಟೆಗಳಲ್ಲಿ ಅವರು ಇಷ್ಟೊಂದು ದೂರ ಓಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಬಿಡುವಿಲ್ಲದ ಜೀವನದಲ್ಲಿ ಆರೋಗ್ಯ ಮತ್ತು ಒತ್ತಡ ರಹಿತ ಜೀವನ ನಡೆಸಲು ವ್ಯಾಯಾಮ ಅತಿ ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಅತ್ಯಂತ ಬ್ಯುಸಿ ಜೀವನದಲ್ಲೂ ತಾವು ಫಿಟ್ನೆಸ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಹೇಳಿಕೊಂಡಿದ್ದಾರೆ.