ETV Bharat / bharat

ಚೆನ್ನೈ: ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್​, 24 ವಿಮಾನ ಸೇವೆ ರದ್ದು - ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್​

Chennai Airport: ಚೆನ್ನೈ ಡೊಮೆಸ್ಟಿಕ್​ ವಿಮಾನ ನಿಲ್ದಾಣದಿಂದ ಚೆನ್ನೈ ಹಾಗೂ ತಿರುಚ್ಚಿ ನಡುವಿನ 24 ವಿಮಾನ ಸೇವೆಗಳನ್ನು ಎರಡು ದಿನಗಳವರೆಗೆ ರದ್ದುಗೊಳಿಸಲಾಗಿದೆ.

IndiGo AQirlines
ಇಂಡಿಗೋ ಏರ್​ಲೈನ್ಸ್​
author img

By ETV Bharat Karnataka Team

Published : Nov 21, 2023, 1:31 PM IST

ಚೆನ್ನೈ (ತಮಿಳುನಾಡು): ಇಂಡಿಗೋ ಏರ್​ಲೈನ್ಸ್​ ಎಟಿಆರ್​ ಪ್ರಯಾಣಿಕ ವಿಮಾನಕ್ಕೆ ಪ್ರಯಾಣಿಕರ ಲಗೇಜ್​ಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದ ಪರಿಣಾಮ ವಿಮಾನಕ್ಕೆ ಸ್ವಲ್ಪ ಹಾನಿಯಾಗಿರುವ ಘಟನೆ ಚೆನ್ನೈನ ಡೊಮೆಸ್ಟಿಕ್​ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್​ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ತಕ್ಷಣವೇ ಬ್ಯೂರೋ ಆಫ್​ ಸಿವಿಲ್​ ಏವಿಯೇಷನ್ಸ್​ ಸೆಕ್ಯುರಿಟಿ (ಬಿಸಿಎಎಸ್​) ಫ್ಲೈಟ್​ ಸುರಕ್ಷತಾ ಅಧಿಕಾರಿಗಳು ಹಾನಿಗೊಳಗಾದ ವಿಮಾನವನ್ನು ಪರಿಶೀಲನೆ ಮಾಡಿದ್ದು, ಆ ಕ್ಷಣಕ್ಕೆ ವಿಮಾನ ಹಾರಲು ಅನರ್ಹವಾಗಿದೆ ಎಂದು ವಿಮಾನ ಹಾರಾಟ ಅನುಮತಿ ನಿರಾಕರಿಸಿದ್ದಾರೆ. ಈ ಬಗ್ಗೆ ದೆಹಲಿಯ ನಾಗರಿಕ ವಿಮಾನ ಮಹಾನಿರ್ದೇಶನಾಲಯಗೂ (ಡಿಜಿಸಿಎ) ಮಾಹಿತಿ ನೀಡಲಾಗಿದ್ದು, ಘಟನೆ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದೆ. ಮುಂದಿನ ಆದೇಶದವರೆಗೆ ಏರ್​ಪೋರ್ಟ್​ನಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಘಟನೆ ಬಗ್ಗೆ ಇಂಡಿಗೋ ಏರ್​ಲೈನ್ಸ್, ಪ್ರಯಾಣಿಕರ ಸಾಮಾನುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ವಿಮಾನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದಾಗಿ ಚೆನ್ನೈನಿಂದ ತಿರುಚ್ಚಿಗೆ ಇಂಡಿಗೋ ವಿಮಾನದ 24 ಸೇವೆಗಳನ್ನು ರದ್ದುಗೊಳಿಸಲಾಗಿದೆ. ಹಾನಿಗೊಳಗಾದ ವಿಮಾನವನ್ನು ಈಗಾಗಲೇ ದುರಸ್ತಿ ಮಾಡಲಾಗಿದ್ದು, ನವೆಂಬರ್​ 22 ರಿಂದ ವಿಮಾನ ಸೇವೆ ಪುನಾರಂಭವಾಗಲಿದೆ. ಪ್ರಯಾಣ ರದ್ದುಗೊಂಡಿರುವ ಪ್ರಯಾಣಿಕರಿಗೆ ಅವರ ಟಿಕೆಟ್​ ದರವನ್ನು ಮರು ಪಾವತಿಸಲಾಗುವುದು ಎಂದು ಇಂಡಿಗೋ ಏರ್​ಲೈನ್ಸ್​ ಹೇಳಿದೆ.

ಅಪಘಾತದ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ಬಿಸಿಎಎಸ್​ ಹಾಗೂ ಡಿಜಿಸಿಎಯಿಂದ ವಿಮಾನದ ಸಂಪೂರ್ಣ ದುರಸ್ತಿ ಹಾಗೂ ವಿಮಾನ ಹಾರಾಟಕ್ಕೆ ಅನುಮತಿ ದೊರೆತ ನಂತರವೇ ವಿಮಾನ ಮತ್ತೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರನ್‌ವೇಯಿಂದ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದ ಅಮೆರಿಕ ನೌಕಾಪಡೆ ವಿಮಾನ-ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.