ಚೆನ್ನೈ: ಮೈಸೂರು ಚೆನ್ನೈ ಮಧ್ಯೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂದಿನಿಂದ ಟ್ರಯಲ್ ರನ್ ಆರಂಭಿಸಿದೆ. ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ರೈಲು ನಿರ್ಗಮಿಸಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ತಲುಪಲಿದೆ.
ಈ ಹೈಸ್ಪೀಡ್ ರೈಲು ಚೆನ್ನೈ ಮೈಸೂರು ಮಧ್ಯೆ 6 ಗಂಟೆ 30 ನಿಮಿಷದಲ್ಲಿ 504 ಕಿಮೀ ಸಂಚರಿಸಲಿದೆ. ಮಧ್ಯದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾತ್ರ ಒಂದು ಸ್ಟಾಪ್ ಇರಲಿದೆ.
-
So finally the good news is here - the #VandeBharatTrain rolls into the jurisdiction of Chennai division for tomorrow's trial run up to Mysuru! #IndianRailways #VandeBharat pic.twitter.com/Z5KHEPaUu2
— Ananth Rupanagudi (@Ananth_IRAS) November 6, 2022 " class="align-text-top noRightClick twitterSection" data="
">So finally the good news is here - the #VandeBharatTrain rolls into the jurisdiction of Chennai division for tomorrow's trial run up to Mysuru! #IndianRailways #VandeBharat pic.twitter.com/Z5KHEPaUu2
— Ananth Rupanagudi (@Ananth_IRAS) November 6, 2022So finally the good news is here - the #VandeBharatTrain rolls into the jurisdiction of Chennai division for tomorrow's trial run up to Mysuru! #IndianRailways #VandeBharat pic.twitter.com/Z5KHEPaUu2
— Ananth Rupanagudi (@Ananth_IRAS) November 6, 2022
ಟ್ರಯಲ್ಗಾಗಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಭಾನುವಾರ ಚೆನ್ನೈ ತಲುಪಿದ ಬಳಿಕ ವಿಭಾಗೀಯ ಹೆಚ್ಚುವರಿ ರೈಲ್ವೆ ಮ್ಯಾನೇಜರ್ ಭಾನುವಾರ ವಿಡಿಯೋ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. "ಕೊನೆಗೂ ಒಳ್ಳೆಯ ಸುದ್ದಿ ಬಂತು. ಟ್ರಯಲ್ ರನ್ಗಾಗಿ ವಂದೇ ಭಾರತ್ ಚೆನ್ನೈಗೆ ಬಂದಿದೆ" ಎಂದು ಬರೆದುಕೊಂಡಿದ್ದರು.
ಈ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಲಭ್ಯ ಇರಲಿದೆ. ಸ್ವಯಂಚಾಲಿತ ಡೋರ್, ವೈಫೈ ಇಂಟರ್ನೆಟ್ ಜೊತೆ ಸುಸಜ್ಜಿತ ತಂತ್ರಜ್ಞಾನದ 16 ಕೋಚ್ಗಳನ್ನು ಇದು ಹೊಂದಿರಲಿದೆ. ನ.11 ರಂದು ಬೆಂಗಳೂರಲ್ಲಿ ಈ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಚೆನ್ನೈ - ಬೆಂಗಳೂರು - ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು