ಚೆನ್ನೈ: 1933 ರ ಎಂ.ಆರ್.ರಾಜಾ ಮುತ್ತಯ್ಯ ಚೆಟ್ಟಿಯಾರ್ ಅವರು 105 (840 ಗ್ರಾಂ) ಸವರನ್ ಗೋಲ್ಡನ್ ಚೈನ್ ಧರಿಸಿ ಬೆಳ್ಳಿಯ ರಾಜದಂಡವನ್ನು ಹಿಡಿದುಕೊಂಡು ಚೆನ್ನೈ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಹಾಗೆಯೇ ತಮ್ಮದೇ ವೆಚ್ಚದಲ್ಲಿ ತೇಗದ ಮರದಿಂದ ಮಾಡಿದ ಪೀಠವನ್ನೂ ಮಾಡಿಸಿದ್ದರು. ಅವರು ತಮ್ಮ ಅಧಿಕಾರ ಮುಗಿದ ಬಳಿಕ ಎಲ್ಲವನ್ನೂ ಪಾಲಿಕೆಗೆ ಒಪ್ಪಿಸಿದ್ದರು.
1933 ರಿಂದ ಇಂದಿನವರೆಗೆ ಚೆನ್ನೈ ಮೇಯರ್ ಆಗಿ ಅಧಿಕಾರ ವಹಿಸಿಕೊಂಡವರು ಗೋಲ್ಡನ್ ಚೈನ್, ಕೋಟ್ ಧರಿಸುವುದು ಸಾಂಪ್ರದಾಯ. ಮುಖ್ಯಮಂತ್ರಿ ಅಥವಾ ಪ್ರಧಾನಿ ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಮೇಯರ್ ಈ ರೀತಿಯ ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದ ಸಮಯಗಳಲ್ಲಿ ಈ ಗೋಲ್ಡನ್ ಚೈನ್ ಅನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗುತ್ತದಂತೆ. ಇಂದು ಚೆನ್ನೈ ಮೇಯರ್ ಪ್ರಿಯಾ ರಾಜನ್ ಧರಿಸಿರುವ ಈ ಚಿನ್ನದ ಸರದ ಬೆಲೆ 48 ಲಕ್ಷ 48 ಸಾವಿರ ರೂ.
ಇದನ್ನೂ ಓದಿ:
28ನೇ ವರ್ಷಕ್ಕೆ ಮೇಯರ್ ಪಟ್ಟ! ಮಹತ್ವದ ಹುದ್ದೆ ಅಲಂಕರಿಸಿದ ದಲಿತ ಮಹಿಳೆ
ಪೊಲೀಸ್-ಅಗ್ನಿಶಾಮಕ ಸಿಬ್ಬಂದಿಗೆ ವಸತಿ, ವಿಮೆ ಸೇರಿದಂತೆ ಹಲವು ಸೌಲಭ್ಯಗಳ ಘೋಷಣೆ
ಇದರ ನಡುವೆ ಮಧುರೈ ಮೇಯರ್ ಅವರು 101(808 ಗ್ರಾಂ) ಸವರನ್ ಗೋಲ್ಡನ್ ಚೈನ್ ಧರಿಸುವುದರ ಮೂಲಕ ಅಧಿಕಾರ ವಹಿಸಿಕೊಂಡಿದ್ದಾರೆ. ಇದು ಸಹ ವರ್ಷಗಳಿಂದ ಅನುಸರಿಸುವ ಆರಾಧನಾ ಪದ್ಧತಿಯಾಗಿದೆಯಂತೆ. ಮಧುರೈ ಕಾರ್ಪೋರೇಶನ್‌ನ ಬಹುಪಾಲು ಸ್ಥಾನಗಳನ್ನು ಡಿಎಂಕೆ ಗೆದ್ದಿದ್ದರಿಂದ, ಇಂದ್ರಾಣಿಯನ್ನು ಮಧುರೈ ಮೇಯರ್ ಎಂದು ಘೋಷಿಸಲಾಗಿದೆ.