ಚಂಡೀಗಢ, ಪಂಜಾಬ್: ಅಧಿಕಾರಿಗಳ ವರ್ಗಾವಣೆ ಮತ್ತು ಮರಳು ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
ಗಣಿಗಾರಿಕೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಮತ್ತು ಮರಳು ಮಾಫಿಯಾದಿಂದ 10 ಕೋಟಿ ರೂಪಾಯಿ ಹಣ ಪಡೆದಿರುವುದಾಗಿ ಕಸ್ಟಡಿ ವಿಚಾರಣೆ ವೇಳೆ ಭೂಪಿಂದರ್ ಸಿಂಗ್ ಹನಿ ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟನೆ ನೀಡಿದೆ.
ಪಂಜಾಬ್‌ನಲ್ಲಿ ಚುನಾವಣೆಗೆ 13 ದಿನಗಳು ಬಾಕಿ ಉಳಿದಿದ್ದು, ಅದಕ್ಕೂ ಮುನ್ನವೇ ಜಾರಿ ನಿರ್ದೇಶನಾಲಯ ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ವಿಚಾರದ ಪಂಜಾಬ್ ಸಿಎಂ ಮತ್ತು ಅವರ ಪಕ್ಷಕ್ಕೆ ಭಾರಿ ಹೊಡೆತವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ಹೆಚ್ಚಳ: ಯುಎನ್ ವರದಿ
ಪಂಜಾಬ್‌ನಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಜಲಂಧರ್ನಲ್ಲಿ ದಾಳಿ ನಡೆಸಿ, ಫೆಬ್ರವರಿ 3ರಂದು ಭೂಪಿಂದರ್ ಸಿಂಗ್ ಅವರನ್ನು ಬಂಧಿಸಿತ್ತು.