ETV Bharat / bharat

ಏಪ್ರಿಲ್ 1 ಬರ್ತಿದೆ.. ಬ್ಯಾಂಕಿಂಗ್, ಅಂಚೆ ಕಚೇರಿ, ಟ್ಯಾಕ್ಸ್​ ನಿಯಮಗಳಲ್ಲಿ ಬದಲಾವಣೆಗಳಿಗೆ ಸಿದ್ಧರಾಗಿ.. - changes in pnb bank rules from April 1

ನೂತನ ಹಣಕಾಸು ವರ್ಷ ಆರಂಭವಾಗುತ್ತಿದ್ದು, ಆರ್ಥಿಕ ವಲಯಗಳ ಹಲವಾರು ಕ್ಷೇತ್ರಗಳಲ್ಲಿ ಬದಲಾವಣೆಯಾಗಲಿದೆ. ಆ ಬದಲಾವಣೆಗಳು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

changes-from-1-april-2022-in-banking-post-office-and-mutual-investment
ಏಪ್ರಿಲ್ 1 ಬರ್ತಿದೆ.. ಬ್ಯಾಂಕಿಂಗ್, ಅಂಚೆ ಕಚೇರಿ, ಟ್ಯಾಕ್ಸ್​ ನಿಯಮಗಳಲ್ಲಿ ಬದಲಾವಣೆಗಳಿಗೆ ಸಿದ್ಧರಾಗಿ..
author img

By

Published : Mar 28, 2022, 10:22 AM IST

ನವದೆಹಲಿ: ಹೊಸ ಹಣಕಾಸು ವರ್ಷವು ಏಪ್ರಿಲ್ 1ರಿಂದ ಪ್ರಾರಂಭವಾಗುತ್ತಿದೆ. ಹಣಕಾಸು ವರ್ಷ ಆರಂಭವಾಗುತ್ತಿದ್ದಂತೆ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಆ ಬದಲಾವಣೆಗಳು ಸಾಮಾನ್ಯರ ಜನಜೀವನದ ಮೇಲೆಯೂ ಪರಿಣಾಮ ಬೀರುತ್ತವೆ. ಅಂತಹ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಅತ್ಯಗತ್ಯ. ಯಾವ ಯಾವ ಬದಲಾವಣೆಗಳು ಆಗುತ್ತವೆ ಎಂದು ತಿಳಿದುಕೊಂಡಿದ್ದರೆ, ಮುಂದಾಗುವ ಸಮಸ್ಯೆಗಳನ್ನು ಅಥವಾ ಗೊಂದಲಗಳನ್ನು ಸಮರ್ಥವಾಗಿ ನಾವು ಎದುರಿಸಬಹುದು. ಅಂಚೆ ಕಚೇರಿಗಳು, ಬ್ಯಾಂಕುಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳು ಹಲವಾರು ಇರಲಿವೆ.

  • ಅಂಚೆ ಕಚೇರಿಯ ಯೋಜನೆಯಲ್ಲಿ ಬದಲಾವಣೆ: ಏಪ್ರಿಲ್ 1ರಿಂದ ಅಂಚೆ ಕಚೇರಿಯ ಕೆಲವು ಯೋಜನೆಗಳ ನಿಯಮಗಳನ್ನು ಬದಲಾಯಿಸಲಾಗುತ್ತಿದೆ. ಏಪ್ರಿಲ್ 1ರಿಂದ ಅನ್ವಯವಾಗುವ ನಿಯಮಗಳ ಅಡಿಯಲ್ಲಿ, ಈಗ ಗ್ರಾಹಕರು ಟೈಮ್ ಡೆಪಾಸಿಟ್ ಅಕೌಂಟ್, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಮಾಸಿಕ ಆದಾಯಯೋಜನೆಯಲ್ಲಿ ಹೂಡಿಕೆ ಮಾಡಲು ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ. ಈ ಮೂಲಕ ಸಣ್ಣ ಉಳಿತಾಯ ಖಾತೆಯಲ್ಲಿ (Small Savings Account) ಠೇವಣಿ ಇಡುವ ಮೊತ್ತಕ್ಕೆ ಬರುತ್ತಿದ್ದ ಬಡ್ಡಿಯನ್ನು ಈಗ ಅಂಚೆ ಕಚೇರಿಯ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇದರೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆಯನ್ನು ಅಂಚೆ ಕಚೇರಿಯ ಸಣ್ಣ ಉಳಿತಾಯ ಖಾತೆಯೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
    CHANGES FROM 1 APRIL 2022 in banking, post office and mutual investment
    ಅಂಚೆ ಕಚೇರಿ ಯೋಜನೆಗಳಲ್ಲಿ ಬದಲಾವಣೆ
  • ಆಕ್ಸಿಸ್ ಬ್ಯಾಂಕ್​ನ ಬ್ಯಾಲೆನ್ಸ್​ ಮಿತಿ ಹೆಚ್ಚಳ: ಆಕ್ಸಿಸ್ ಬ್ಯಾಂಕ್​ನ ಉಳಿತಾಯ ಖಾತೆಯ ಸರಾಸರಿ ಮಾಸಿಕ ಬ್ಯಾಲೆನ್ಸ್ ಮಿತಿಯನ್ನು 10,000 ರೂಪಾಯಿಯಿಂದ 12,000 ರೂಪಾಯಿಗೆ ಹೆಚ್ಚಿಸಿದೆ. ಬ್ಯಾಂಕಿನ ಈ ನಿಯಮಗಳು ಏಪ್ರಿಲ್ 1ರಿಂದ ಅನ್ವಯವಾಗುತ್ತವೆ.

    ಆ್ಯಕ್ಸಿಸ್ ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ
  • ಪಿಎನ್​ಬಿಯಲ್ಲಿ ಹೊಸ ವ್ಯವಸ್ಥೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಏಪ್ರಿಲ್ 4ರಿಂದ ಧನಾತ್ಮಕ ಪಾವತಿ ವ್ಯವಸ್ಥೆಯನ್ನು (Positive Pay System) ಅನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ ಯಾವುದೇ ಪರಿಶೀಲನೆ ಇಲ್ಲದೆ ದೊಡ್ಡ ಮೊತ್ತದ ಚೆಕ್ ಪಾವತಿ ಸಾಧ್ಯವಾಗುವುದಿಲ್ಲ. 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್‌ಗಳಿಗೆ ಈ ನಿಯಮ ಕಡ್ಡಾಯವಾಗಿದೆ. ಪಿಎನ್​ಬಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ನಿಯಮದ ಬಗ್ಗೆ ಮಾಹಿತಿಯನ್ನು ನೀಡಿದೆ.

    ಪಿಎನ್​ಬಿ ನಿಯಮಗಳಲ್ಲಿ ಬದಲಾವಣೆ
  • ಕ್ರಿಪ್ಟೋಕರೆನ್ಸಿ ಮೇಲೆ ತೆರಿಗೆ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್​​ನಲ್ಲಿ ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ ವಿಧಿಸುವುದಾಗಿ ಮಾಹಿತಿ ನೀಡಿತ್ತು. ಈ ಮಾಹಿತಿಯಂತೆ ಏಪ್ರಿಲ್ 1ರಿಂದ, ಕೇಂದ್ರ ಸರ್ಕಾರವು ವರ್ಚುಯಲ್ ಡಿಜಿಟಲ್ ಸ್ವತ್ತುಗಳು (VDA) ಅಥವಾ ಕ್ರಿಪ್ಟೋಕರೆನ್ಸಿ ಮೇಲೆ ಶೇಕಡಾ 30ರಷ್ಟು ತೆರಿಗೆ ವಿಧಿಸುತ್ತದೆ. ಇದಲ್ಲದೆ, ಕ್ರಿಪ್ಟೋ ಕರೆನ್ಸಿ ಅಥವಾ ಆಸ್ತಿಯನ್ನು ಮಾರಾಟ ಮಾಡಿದಾಗ, ಅದರ ಮಾರಾಟದಲ್ಲಿ ಶೇಕಡಾ 1ರಷ್ಟು ಟಿಡಿಎಸ್​​ ಅನ್ನು ಕಡಿತಗೊಳಿಸುವುದಾಗಿ ಹೇಳಿದೆ.

    ಕ್ರಿಪ್ಟೋಕರೆನ್ಸಿ ಮೇಲೆ ತೆರಿಗೆ
  • ಮನೆ ಖರೀದಿಸುವವರಿಗೆ ಶಾಕ್: ಏಪ್ರಿಲ್ 1ರಿಂದ ಮನೆ ಖರೀದಿ ದುಬಾರಿಯಾಗಲಿದೆ. ಮೊದಲ ಬಾರಿಗೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಮನೆ ಖರೀದಿಸುವವರಿಗೆ ಸೆಕ್ಷನ್ 80EEA ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ನೀಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಲಿದೆ. ಈ ಮೂಲಕ ಮನೆ ಖರೀದಿ ಮಾಡುವವರಿಗೆ ಕಷ್ಟವಾಗಲಿದೆ.

    ಮನೆ ಕೊಳ್ಳುವವರಿಗೆ ಶಾಕ್​
  • ಔಷಧ ದುಬಾರಿಯಾಗಲಿದೆ: ಪೇನ್ ಕಿಲ್ಲರ್, ಆ್ಯಂಟಿಬಯೋಟಿಕ್ ಸೇರಿದಂತೆ ಹಲವು ಔಷಧಗಳ ಬೆಲೆ ಶೇಕಡಾ 10ಕ್ಕೂ ಹೆಚ್ಚು ಏರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದ ನಂತರ 800ಕ್ಕೂ ಹೆಚ್ಚು ಔಷಧಗಳ ಬೆಲೆ ಏರಿಕೆಯಾಗಲಿದೆ.

    ಔಷಧಗಳ ಬೆಲೆ ಏರಿಕೆ
  • ಗ್ಯಾಸ್ ಸಿಲಿಂಡರ್‌ಗಳು ದುಬಾರಿಯಾಗಬಹುದು: ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೆಯ ದಿನದಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಏಪ್ರಿಲ್ 1ರಂದು ಸರ್ಕಾರವು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

    ಗ್ಯಾಸ್ ಬೆಲೆ ಏರಿಕೆ ಸಾಧ್ಯತೆ
  • ಪ್ಯಾನ್-ಆಧಾರ್ ಲಿಂಕ್ ಮಾಡುವುದು: ನೀವು ಮಾರ್ಚ್ 31ರೊಳಗೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್​​ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಅದಕ್ಕಾಗಿ ನಿಮಗೆ ದಂಡವನ್ನು ವಿಧಿಸಲಾಗುತ್ತದೆ. ಆದರೆ, ದಂಡದ ಮೊತ್ತ ಎಷ್ಟು ಎಂಬುದನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.

    ಆಧಾರ್, ಪ್ಯಾನ್ ಲಿಂಕ್ ಮಾಡದಿದ್ರೆ ದಂಡ
  • ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯಲ್ಲಿ ಬದಲಾವಣೆ: ಏಪ್ರಿಲ್ 1ರಿಂದ, ಮ್ಯೂಚುಯಲ್ ಫಂಡ್‌ಗಳಲ್ಲಿನ ಹೂಡಿಕೆ ಮಾಡಲು ಚೆಕ್, ಬ್ಯಾಂಕ್ ಡ್ರಾಫ್ಟ್ ಅಥವಾ ಇತರ ಯಾವುದೇ ಭೌತಿಕ ಮಾಧ್ಯಮದ ಮೂಲಕ ಸಾಧ್ಯವಾಗುವುದಿಲ್ಲ. ಮ್ಯೂಚುಯಲ್ ಫಂಡ್ ವಹಿವಾಟು ನಡೆಸುವ MF ಯುಟಿಲಿಟೀಸ್ (MFU) ಮಾರ್ಚ್ 31 ಚೆಕ್-ಡಿಡಿ ಇತ್ಯಾದಿಗಳ ಮೂಲಕ ಪಾವತಿ ಮಾಡುವ ಸೌಲಭ್ಯವನ್ನು ನಿಲ್ಲಿಸಲಿದೆ. ನೀವು ಹೂಡಿಕೆಗೆ ನೆಟ್​ಬ್ಯಾಂಕಿಂಗ್ ಅಥವಾಯುಪಿಐ ಅನ್ನು ಮಾತ್ರ ಬಳಸಬೇಕಾಗುತ್ತದೆ.

    ಮ್ಯೂಚುವಲ್ ಫಂಡ್ ನಿಯಮಗಳಲ್ಲಿ ಬದಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.