ETV Bharat / bharat

ಮತದಾರರ ಪಟ್ಟಿಯಲ್ಲಿನ ಅಕ್ರಮ: ಸಿಇಸಿಗೆ ಚಂದ್ರಬಾಬು ನಾಯ್ಡು, ಪವನ್​ ಕಲ್ಯಾಣ್​ ದೂರು

ಕೇಂದ್ರ ಚುನಾವಣಾ ಆಯೋಗ ನಡೆಸಿದ ರಾಜಕೀಯ ಪಕ್ಷಗಳ ಸಭೆಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ದೂರು ನೀಡಿದ್ದಾರೆ.

ಪವನ್​ ಕಲ್ಯಾಣ್​ ಮತ್ತು ಚಂದ್ರಬಾಬು ನಾಯ್ಡು
ಪವನ್​ ಕಲ್ಯಾಣ್​ ಮತ್ತು ಚಂದ್ರಬಾಬು ನಾಯ್ಡು
author img

By ETV Bharat Karnataka Team

Published : Jan 9, 2024, 7:00 PM IST

ವಿಜಯವಾಡ (ಆಂಧ್ರ ಪ್ರದೇಶ) : ಮತದಾರರ ಪಟ್ಟಿಯಲ್ಲಿನ ಅವ್ಯವಹಾರ ಹಾಗೂ ಆಡಳಿತ ಪಕ್ಷದ ಅವ್ಯವಸ್ಥೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ (ಸಿಇಸಿ)ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್​ ದೂರು ಸಲ್ಲಿಸಿದರು. ಇಂದು ವಿಜಯವಾಡದಲ್ಲಿ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ನಡೆಸಿದ ಸಭೆಯಲ್ಲಿ ದೂರಿದರು.

ಕೇಂದ್ರ ಚುನಾವಣಾ ಆಯೋಗವು ಆಂಧ್ರ ಪ್ರದೇಶ ರಾಜ್ಯದ ಪ್ರವಾಸ ಕೈಗೊಂಡಿದೆ. ಹೀಗಾಗಿ ಇಂದು ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿತು. ವಿಜಯವಾಡದಲ್ಲಿ ನಡೆದ ಈ ಸಭೆಯಲ್ಲಿ ಸಿಇಸಿ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರು ಭಾಗವಹಿಸಿದ್ದರು. ಸಭೆಯಲ್ಲಿ ಸಿಇಸಿ ರಾಜ್ಯದಲ್ಲಿ ಚುನಾವಣಾ ಸಿದ್ಧತೆ ಮತ್ತು ಮತದಾರರ ಅಂತಿಮ ಪಟ್ಟಿಯ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಸಿಇಸಿಗೆ ಚಂದ್ರಬಾಬು ಮತ್ತು ಪವನ್ ದೂರು ನೀಡಿದ್ದಾರೆ.

ಸಭೆಯಲ್ಲಿ ಚಂದ್ರಬಾಬು, ಪವನ್ ಕಲ್ಯಾಣ್, ಆಡಳಿತಾರೂಢ ವೈಎಸ್‌ಆರ್‌ಸಿಪಿ ಪರವಾಗಿ ಪಕ್ಷದ ಸಂಸದ ವಿಜಯ ಸಾಯಿ ರೆಡ್ಡಿ ಸೇರಿದಂತೆ ಸಿಪಿಎಂ, ಬಿಜೆಪಿ, ಬಿಎಸ್‌ಪಿ ಮತ್ತು ಎಎಪಿ ನಾಯಕರು ಭಾಗವಹಿಸಿದ್ದರು. ಸಿಇಸಿ ಜೊತೆ ಸಭೆ ನಡೆಸಿದ ನಂತರ ಚಂದ್ರಬಾಬು ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡಿದರು. ಮತದಾರರ ಪಟ್ಟಿಯಲ್ಲಿನ ಅವ್ಯವಹಾರಗಳ ಬಗ್ಗೆ ಸಿಇಸಿಗೆ ದೂರು ನೀಡಿದ್ದೇನೆ. ರಾಜ್ಯದಲ್ಲಿ ಹಿಂದೆಂದೂ ಕಾಣದ ಅವ್ಯವಸ್ಥೆ ಇದೆ. ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಅಕ್ರಮ ಪ್ರಕರಣ ದಾಖಲಿಸುವ ಮೂಲಕ ಪ್ರಜಾಪ್ರಭುತ್ವವನ್ನೇ ಅಣಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಲ್ಲಿರುವ ಬಂಡಾಯ ನೋಡಿ ನಕಲಿ ಮತಗಳನ್ನು ಸೇರಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಟಿಡಿಪಿ, ಜನಸೇನಾ ಮುಖಂಡರು, ಕಾರ್ಯಕರ್ತರ ಮೇಲೆ 6 ರಿಂದ 7 ಸಾವಿರ ಅಕ್ರಮ ಪ್ರಕರಣ ದಾಖಲಾಗಿದ್ದು, ಪುಂಗನೂರು ಪ್ರಕರಣವೊಂದರಲ್ಲಿಯೇ 200ಕ್ಕೂ ಹೆಚ್ಚು ಮಂದಿ ಜೈಲಿಗೆ ಹೋಗಿದ್ದಾರೆ. ಚುನಾವಣೆಯಲ್ಲಿ ಯಾರ ಮೇಲೂ ಕೆಲಸ ಮಾಡದಂತೆ ಅಕ್ರಮ ಪ್ರಕರಣಗಳನ್ನು ಹಾಕಲಾಗಿದೆ. ಈ ಬಗ್ಗೆ ಸಿಇಸಿಗೆ ಮಾಹಿತಿ ನೀಡಲಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಿಇಸಿ ಹೇಳಿದೆ. ಅಗತ್ಯ ಬಿದ್ದರೆ ಕೇಂದ್ರ ಪೊಲೀಸ್ ವೀಕ್ಷಕರನ್ನು ಕಳುಹಿಸಿ ವಿಶೇಷ ಸೆಲ್ ಸ್ಥಾಪಿಸಲಾಗುವುದು. ಪ್ರಜಾಪ್ರಭುತ್ವ ರಕ್ಷಣೆಗೆ ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ. ಒಂದು ನಕಲಿ ಮತ ಹಾಕುವುದಕ್ಕೆ ಬಿಡುವುದಿಲ್ಲ. ಇಂತಹ ಕೃತ್ಯಗಳು ನಡೆದರೆ ಚುನಾವಣಾ ಆಯೋಗದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಚಂದ್ರಬಾಬು ತಿಳಿಸಿದರು.

ಪವನ್ ಕಲ್ಯಾನ್​ ಹೇಳಿದ್ದೇನು? : ಆಂಧ್ರ ಪ್ರದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಯಬೇಕು ಎಂದು ಸಿಇಸಿ ನಿರ್ಧರಿಸಿದೆ. ಅದರಂತೆ ಸೆಸ್ಕ್ ತಂಡ ವಿಜಯವಾಡಕ್ಕೆ ಬಂದು ಸಭೆ ಏರ್ಪಡಿಸಿದೆ. ಚಂದ್ರಗಿರಿ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತಗಳು ದಾಖಲಾಗಿದ್ದು, ಕೆಲವು ಮತಗಳು ಅನುಮೋದನೆಗೊಂಡಿವೆ. ಪ್ರತಿ ಕ್ಷೇತ್ರದಲ್ಲೂ ಕಳ್ಳ ಮತಗಳು ದಾಖಲಾಗುತ್ತಿರುವ ಬಗ್ಗೆ ಸೆಸ್ಕ್​ಗೆ ದೂರು ನೀಡಲಾಗಿದೆ. ವೈಸಿಪಿ ಅಧಿಕಾರಕ್ಕೆ ಬಂದ ನಂತರ ಅಕ್ರಮ ಚಟುವಟಿಕೆ ಪ್ರಕರಣಗಳು ಹೆಚ್ಚಿವೆ. ಹಾಗಾಗಿ ಕಳ್ಳ ಮತಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಇಸಿಗೆ ದೂರು ನೀಡಿದ್ದೇವೆ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್​ ಮಾಹಿತಿ ನೀಡಿದರು.

ಇದನ್ನೂ ಓದಿ : ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದ್ದನ್ನು ನೆನಪಿಡಿ: ಮಹಾರಾಷ್ಟ್ರ ಸರ್ಕಾರಕ್ಕೆ ಪವಾರ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.