ETV Bharat / bharat

ಬೆಳಗ್ಗೆ ಪಾಸಿಟಿವ್​ ಸಂಜೆ ನೆಗೆಟಿವ್​.. ಇಟಲಿಯಿಂದ ಚಂಡೀಗಢಕ್ಕೆ ಬಂದಿದ್ದ ಯುವಕನಿಗಿಲ್ಲ ಒಮಿಕ್ರಾನ್​ ಸೋಂಕು.. - ಒಮಿಕ್ರಾನ್​ ದಾಳಿಯಿಂದ ಪಾರಾದ ಚಂಡೀಗಢ

ಭಾನುವಾರ ಚಂಡೀಗಢದಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ದಾಖಲಾಗಿತ್ತು. ಸೋಂಕಿತ ವ್ಯಕ್ತಿ ಇಟಲಿಯಿಂದ ವಾಪಸಾಗಿದ್ದ. ಇದೀಗ ಮರುಪರೀಕ್ಷೆಯಲ್ಲಿ ವ್ಯಕ್ತಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ..

covid negative
ಒಮಿಕ್ರಾನ್​ ವರದಿ ನೆಗೆಟಿವ್​
author img

By

Published : Dec 12, 2021, 10:17 PM IST

ಚಂಡೀಗಢ(ಪಂಜಾಬ್​): ಚಂಡೀಗಢದ ವ್ಯಕ್ತಿಯಲ್ಲಿ ಕಂಡು ಬಂದಿದ್ದ ಒಮಿಕ್ರಾನ್ ರೂಪಾಂತರದ ಕೊರೊನಾ ವರದಿ ಇದೀಗ ನೆಗೆಟಿವ್ ಬಂದಿದೆ. ಇದರಿಂದಾಗಿ ಆರೋಗ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.

ಇಟಲಿಯಿಂದ ಬಂದಿದ್ದ 20 ವರ್ಷದ ಯುವಕನಲ್ಲಿ ಒಮಿಕ್ರಾನ್​ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೋಂಕು ದೃಢೀಕರಣಕ್ಕೆ ಜಿನೋಮಿಕ್​ ಪರೀಕ್ಷೆಗಾಗಿ ಎನ್​ಸಿಡಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ಸಂಜೆ ತಡವಾಗಿ ಬಂದ ಪರೀಕ್ಷಾ ವರದಿ ನೆಗೆಟಿವ್​ ಎಂದು ಬಂದಿದೆ.

ನವೆಂಬರ್​ 22ರಂದು ಇಟಲಿಯಿಂದ ಚಂಡೀಗಢಕ್ಕೆ ಬಂದಿದ್ದ ಯುವಕನನ್ನ ಹೋಂ ಕ್ವಾರಂಟೈನ್​ ಮಾಡಲಾಗಿತ್ತು. ಡಿಸೆಂಬರ್​ 1ರಂದು ಕೊರೊನಾ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್​ ಆಗಿತ್ತು. ಬಳಿಕ ಒಮಿಕ್ರಾನ್​ ದೃಢೀಕರಣಕ್ಕೆ ಜೀನೋಮಿಕ್​ ಪರೀಕ್ಷೆಗೆ ಮಾದರಿ ಕಳುಹಿಸಲಾಗಿತ್ತು.

ಇದನ್ನೂ ಓದಿ: Omicron: ಕೇರಳ, ಆಂಧ್ರ, ಚಂಢಿಗಡದಲ್ಲಿ ಒಮಿಕ್ರಾನ್ ಮೊದಲ ಪ್ರಕರಣ ಪತ್ತೆ.. ಭಾರತದಲ್ಲಿ ಒಟ್ಟು 38 ಹೊಸ ರೂಪಾಂತರಿ ಕೇಸ್​

ಡಿ.11ರಂದು ನಡೆಸಿದ ಪರೀಕ್ಷೆಯಲ್ಲಿ ಯುವಕನಲ್ಲಿ ಒಮಿಕ್ರಾನ್​ ರೂಪಾಂತರಿ ದೃಢಪಟ್ಟಿತ್ತು. ಇದಾದ ಬಳಿಕ ಇಂದು(ಭಾನುವಾರ) ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್​ ಬಂದಿದೆ. ಈ ಮೂಲಕ ಚಂಡೀಗಢಕ್ಕೆ ಒಮಿಕ್ರಾನ್​ ರೂಪಾಂತರಿ ಆತಂಕ ಇಲ್ಲವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.