ETV Bharat / bharat

ಇಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆ: ರಾಜ್ಯದ ಎಷ್ಟು ಸಂಸದರಿಗೆ ಅದೃಷ್ಟ?

ರಾಜ್ಯದ ಮೂವರು ಸಂಸದರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ಮೂವರೂ ನಾಯಕರು ನವದೆಹಲಿಗೆ ತೆರಳಿದ್ದು ನಿರೀಕ್ಷೆಗಳು ಹೆಚ್ಚಾಗಿವೆ. ಸದ್ಯ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣಸ್ವಾಮಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್​ಗೆ ದೆಹಲಿಯಿಂದ ದೂರವಾಣಿ ಕರೆ ಬಂದಿದ್ದು, ವರಿಷ್ಠರ ಬುಲಾವ್ ಮೇರೆಗೆ ಮೂವರೂ ಸಂಸದರು ನವದೆಹಲಿಗೆ ತೆರಳಿದ್ದಾರೆ.‌

Centre cabinet
ಸಚಿವ ಸಂಪುಟ ವಿಸ್ತರಣೆ
author img

By

Published : Jul 7, 2021, 9:50 AM IST

Updated : Jul 7, 2021, 9:57 AM IST

ನವದೆಹಲಿ: ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು ರಾಜ್ಯದ ಮೂವರು ಸಂಸದರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಬೆಳವಣಿಗೆಯ ಮುನ್ನಾ ದಿನ, ಸಹಕಾರಿ ಸಂಸ್ಥೆಗಳ ಮೂಲಕ ಸಮೃದ್ಧಿಯ ದೃಷ್ಟಿಯನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ, ಸಹಕಾರ ಸಚಿವಾಲಯ ಎಂಬ ಹೊಸ ಸಚಿವಾಲಯವನ್ನು ರಚಿಸುವುದಾಗಿ ಘೋಷಿಸಿದೆ. ಮಂಗಳವಾರ ತಡರಾತ್ರಿ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ, ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಹೊಸ ಸಚಿವಾಲಯವು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸುತ್ತದೆ ಎಂದು ಕ್ಯಾಬಿನೆಟ್ ಸಚಿವಾಲಯ ಹೇಳಿದೆ.

ಸಹಕಾರಿ ಸಂಸ್ಥೆಗಳಿಗೆ ವ್ಯವಹಾರವನ್ನು ಸುಲಭಗೊಳಿಸುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹು-ರಾಜ್ಯ ಸಹಕಾರ ಸಂಘಗಳ (ಎಂಎಸ್‌ಸಿಎಸ್) ಅಭಿವೃದ್ಧಿಗೆ ಅನುವು ಮಾಡಿಕೊಡಲು ಸಚಿವಾಲಯವು ಈ ಕೆಲಸ ಮಾಡುತ್ತದೆ ಎಂದು ಹೇಳಿದೆ. ಸಹಕಾರಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸುವ ನಿರ್ಧಾರವು ಹಣಕಾಸು ಸಚಿವರು ಮಾಡಿದ ಬಜೆಟ್ ಪ್ರಕಟಣೆಯನ್ನು ಸಹ ಪೂರೈಸುತ್ತದೆ ಎಂದು ಸರ್ಕಾರ ಹೇಳಿದೆ.

ಇಂದು ಕೇಂದ್ರ ಸಂಪುಟ ವಿಸ್ತರಣೆ: ಯಾರಿಗೆ ಸಿಗಬಹುದು 'ಸ್ಥಾನ';

ರಾಜ್ಯದ ಮೂವರು ಸಂಸದರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ಮೂವರೂ ನಾಯಕರು ನವದೆಹಲಿಗೆ ತೆರಳಿದ್ದು, ನಿರೀಕ್ಷೆಗಳು ಹೆಚ್ಚಾಗಿವೆ. ಸದ್ಯ ರಾಜ್ಯದಿಂದ ಮೂವರು ಸಂಸದರಿಗೆ ದೆಹಲಿಯಿಂದ ದೂರವಾಣಿ ಕರೆ ಬಂದಿದೆ.

  • ಆನೇಕಲ್ ನಾರಾಯಣಸ್ವಾಮಿ - ಚಿತ್ರದುರ್ಗ ಸಂಸದ
  • ರಮೇಶ್ ಜಿಗಜಿಣಗಿ - ವಿಜಯಪುರ ಸಂಸದ
  • ಡಾ. ಉಮೇಶ್ ಜಾಧವ್ - ಕಲಬುರಗಿ ಸಂಸದ

ವರಿಷ್ಠರ ಬುಲಾವ್ ಮೇರೆಗೆ ಮೂವರೂ ಸಂಸದರು ನವದೆಹಲಿಗೆ ತೆರಳಿದ್ದಾರೆ.‌

ಯಾವ ರಾಜ್ಯಕ್ಕೆ ಪ್ರಾಧಾನ್ಯತೆ ಸಾಧ್ಯತೆ:

ಉತ್ತರಪ್ರದೇಶದ ಹೊರತಾಗಿ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಿಗೆ 2022 ರ ಚುನಾವಣೆಯ ಪೂರ್ವದಲ್ಲಿ ಆದ್ಯತೆ ನೀಡುವ ನಿರೀಕ್ಷೆಯಿದೆ. ಇದು ವಿಶೇಷವಾಗಿ ಉತ್ತರ ಪ್ರದೇಶದಿಂದ ಹೆಚ್ಚಿನ ಸಾಮಾಜಿಕ ಗುಂಪುಗಳಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಸಂಪುಟದಲ್ಲಿ ಯುಪಿಯ 9 ಜನರಲ್ಲಿ ನಾಲ್ವರನ್ನು ತೆಗೆಯುವ ಅಥವಾ ಬೇರೆ ಇಲಾಖೆಗಳಿಗೆ ವರ್ಗಾಯಿಸುವ ಸಾಧ್ಯತೆಯಿದೆ. ರೀಟಾ ಬಹುಗುಣ ಜೋಶಿ ಅವರಿಗೆ ಅವಕಾಶ ಸಿಕ್ಕರೆ ಅದೇ ಸಾಮಾಜಿಕ ವರ್ಗಕ್ಕೆ ಸೇರಿದ ಕೌಶಲ್ಯ ಅಭಿವೃದ್ಧಿ ಸಚಿವ ಮಹೇಂದ್ರನಾಥ ಪಾಂಡೆ ಅವರನ್ನು ವಜಾಗೊಳಿಸಬಹುದು ಎಂಬ ವದಂತಿ ಇದೆ. ಜೋಶಿಯೊಂದಿಗೆ ಅಜಯ್ ಮಿಶ್ರಾ, ಸಕಲ್‌ದೀಪ್ ರಾಜ್‌ಭರ್, ಪಂಕಜ್ ಚೌಧರಿ, ರಾಮ್‌ಶಂಕರ್ ಕ್ಯಾಥೇರಿಯಾ, ವರುಣ್ ಗಾಂಧಿ, ರಾಜ್‌ವೀರ್ ಸಿಂಗ್ ಮತ್ತು ಅಪ್ನಾಡಲ್ ನಾಯಕ ಅನುಪ್ರಿಯಾ ಪಟೇಲ್ ಅವರ ಹೆಸರುಗಳು ಯುಪಿಯಿಂದ ಅವಕಾಶ ಪಡೆಯುವ ಸಾಧ್ಯತೆಗಳಿವೆ.

ಇತರ ರಾಜ್ಯಗಳ ಸಂಸದರಿಗೂ ಬುಲಾವ್​:

  • ಮಹಾರಾಷ್ಟ್ರ: ಮರಾಠಾ ನಾಯಕ ನಾರಾಯಣ್ ರಾಣೆ, ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಪುತ್ರಿ ಪ್ರೀತಂ ಮುಂಡೆ, ಹೀನಾ ಗವಿತ್
  • ಹರಿಯಾಣ: ಬ್ರಿಜೇಂದ್ರ ಸಿಂಗ್​
  • ಮಧ್ಯಪ್ರದೇಶ: ರಾಕೇಶ್​ ಸಿಂಗ್​
  • ಒಡಿಶಾ: ಅಶ್ವಿನಿ ವೈಷ್ಣವ್​
  • ರಾಜಸ್ಥಾನ: ರಾಹುಲ್ ಕಸ್ವಾ
  • ಉತ್ತರಾಖಂಡ: ತಿರಥ್​ ಸಿಂಗ್​ ರಾವತ್​
  • ತಮಿಳುನಾಡು: ಮಿತ್ರಪಕ್ಷ ಎಐಎಡಿಎಂಕೆ ಸದಸ್ಯರಿಗೆ ಅವಕಾಶ ನೀಡಬಹುದು

ಸದ್ಯಕ್ಕೆ ಈ ಎಲ್ಲಾ ಸಂಸದರಿಗೆ ಕರೆ ಬಂದಿದೆ. ಆದರೆ ಕೊನೆ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದರೂ ಆಗಬಹುದು. ದೂರವಾಣಿ ಕರೆ ಬಂದಿರುವ ಮೂವರೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಸುರೇಶ್ ಅಂಗಡಿ ನಿಧನದಿಂದ ತೆರವಾದ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಲಾಗುತ್ತದೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಲಿಂಗಾಯತ ಕೋಟಾದಲ್ಲಿ ಆಕಾಂಕ್ಷಿಗಳಾಗಿದ್ದ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಬೀದರ್ ಸಂಸದ ಭಗವಂತ ಕೂಬಾ ಸೇರಿದಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್, ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮೈಸೂರು ಸಂಸದ ಪ್ರತಾಪ್ ಸಿಂಹ ಯಾವುದೇ ಆಕಾಂಕ್ಷಿಗಳಿಗೂ ಇನ್ನೂ ಕರೆ ಬಂದಿಲ್ಲ. ಹಾಗಾಗಿ ಸಚಿವ ಸ್ಥಾನದ ರೇಸ್​ನಿಂದ ಇವರೆಲ್ಲಾ ಬಹುತೇಕ ಹೊರಬಿದ್ದಂತಾಗಿದೆ ಎನ್ನಲಾಗುತ್ತಿದೆ. ಆದರೆ ದೂರವಾಣಿ ಕರೆ ಬಾರದೆ ಇದ್ದರೂ ಸಂಸದೆ ಶೋಭಾ ಕರಂದ್ಲಾಜೆ ದೆಹಲಿಗೆ ತೆರಳಿ ಕುತೂಹಲ ಮೂಡಿಸಿದ್ದಾರೆ.

Last Updated : Jul 7, 2021, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.