ETV Bharat / bharat

ಯುಪಿಎಸ್​ಸಿ ಪರೀಕ್ಷಾ ವಂಚಿತರಿಗೆ ಮತ್ತೊಂದು ಅವಕಾಶ ನೀಡಲು ಸರ್ಕಾರ ಸಮ್ಮತಿ - ಸುಪ್ರಿಂ ಕೋರ್ಟ್​

2020ರ ಅಕ್ಟೋಬರ್​ನಲ್ಲಿ ನಡೆದ ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಇದೀಗ ಮತ್ತೊಂದು ಅವಕಾಶ ನೀಡಲಾಗಿದೆ.

UPSC Exam
ಕೇಂದ್ರ ಲೋಕ ಸೇವಾ ಆಯೋಗ
author img

By

Published : Feb 5, 2021, 4:06 PM IST

ನವದೆಹಲಿ: ಕೋವಿಡ್​ನಿಂದಾಗಿ ಕಳೆದ ಬಾರಿ ನಡೆದ ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ಕಲ್ಪಿಸಿಕೊಡುವುದಾಗಿ ಸುಪ್ರಿಂ ಕೋರ್ಟ್​ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.

2020ರ ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆ ಕೊರೊನಾ ಲಾಕ್​ಡೌನ್​ನಿಂದಾಗಿ ಅಕ್ಟೋಬರ್​ 4ರಂದು ನಡೆದಿತ್ತು. ಸಾಂಕ್ರಾಮಿಕದಿಂದಾಗಿ ಅನೇಕ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇನ್ನೊಮ್ಮೆ ಪರೀಕ್ಷೆಗೆ ಅವಕಾಶ ನೀಡುವಂತೆ ಕೋರಿ ರಚನಾ ಸಿಂಗ್​ ಎಂಬ ಅಭ್ಯರ್ಥಿಯೊಬ್ಬರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಅಂಗೈಗಳನ್ನೇ ಹಾಸಿಗೆ ಮಾಡಿ ನಿವೃತ್ತ ಯೋಧನನ್ನು ಬರಮಾಡಿಕೊಂಡ ಗ್ರಾಮಸ್ಥರು

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ)ಕ್ಕೆ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸೂಚಿಸಿತ್ತು. ಇದಕ್ಕೆ ಇಂದು ಕೇಂದ್ರ ಸರ್ಕಾರ ಮತ್ತು ಆಯೋಗವು ಸಮ್ಮತಿ ನೀಡಿದ್ದು, ಪರೀಕ್ಷೆಯಿಂದ ವಂಚಿತರಾದ ಆಕಾಂಕ್ಷಿಗಳು ಮತ್ತೆ ಎಕ್ಸಾಂ ಬರೆಯಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.