ETV Bharat / bharat

ಪಿಯುಸಿ ಪಾಸ್‌ ಆಗಿದ್ದೀರಾ? CRPFನಲ್ಲಿದೆ ಉದ್ಯೋಗ: ವೇತನ, ಪರೀಕ್ಷೆಯ ವಿವರ ಇಲ್ಲಿದೆ - ಕೇಂದ್ರಿಯ ಮೀಸಲು ಪೊಲೀಸ್​ ಪಡೆ

CRPF ನಲ್ಲಿ ಸಹಾಯಕ ಸಬ್​ ಇನ್ಸ್‌​ಪೆಕ್ಟರ್​​ ಮತ್ತು ಹೆಡ್​ ಕಾನ್ಸ್​​ಟೇಬಲ್​ ಸೇರಿದಂತೆ ಒಟ್ಟು 251 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Central Government jobs CRPF latest Recruitment notification

author img

By

Published : May 9, 2023, 12:17 PM IST

ಕೇಂದ್ರ ಸರ್ಕಾರಿ ನೌಕರಿಗೆ ತಯಾರಿ ನಡೆಸುತ್ತಿರುವವರಿಗೆ ಸಿಆರ್​ಪಿಎಫ್​ ಸಂತಸ ಸುದ್ದಿ ನೀಡಿದೆ. ಇತ್ತೀಚೆಗಷ್ಟೇ 9 ಸಾವಿರ ಹುದ್ದೆಗಳ ನೇಮಕಾತಿ ನಡೆಸಿದ ಕೇಂದ್ರಿಯ ಮೀಸಲು ಪೊಲೀಸ್​ ಪಡೆ ಮತ್ತೀಗ ಹೊಸ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ CRPFನಲ್ಲಿ ಖಾಲಿ ಇರುವ 251 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಹಾಯಕ ಸಬ್​ ಇನ್ಸ್‌​ಪೆಕ್ಟರ್​​ ಮತ್ತು ಹೆಡ್​ ಕಾನ್ಸ್​​ಟೇಬಲ್​ ಸೇರಿದಂತೆ ಒಟ್ಟು 251 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಧಿಕೃತ ಅಧಿಸೂಚನೆ
ಅಧಿಕೃತ ಅಧಿಸೂಚನೆ

ಹುದ್ದೆಗಳ ವಿವರ: 27 ಸಹಾಯಕ ಸಬ್​ ಇನ್ಸ್​​ಪೆಕ್ಟರ್​ (ಸ್ಟೆನೊ), 224 ಹೆಡ್​ ಕಾನ್ಸ್​ಟೇಬಲ್​​ (ಸಚಿವಾಲಯ) ಹುದ್ದೆಗಳು.

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಅಥವಾ ಪಿಯುಸಿ (ಪ್ಲಸ್ 2) ಉತ್ತೀರ್ಣರಾಗಿರಬೇಕು. ಕಂಪ್ಯೂಟರ್​ ಆಧಾರಿತ ಪರೀಕ್ಷೆ ಮತ್ತು ಕೌಶಲ್ಯ ಹಾಗೂ ದೈಹಿಕ ಸಾಮರ್ಥ್ಯ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಹಾಯಕ ಸಬ್​ ಇನ್ಸ್​​ಪೆಕ್ಟರ್​ (ಸ್ಟೆನೊ)ಗೆ 29,200-92,300 ಮತ್ತು ಹೆಡ್​ ಕಾನ್ಸ್​ಟೇಬಲ್​​ (ಸಚಿವಾಲಯ) 25,500-81,100 ರೂ ವೇತನ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳು ಗರಿಷ್ಟ 40 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.

ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆ ಮೇ 10ರಿಂದ ಆರಂಭವಾಗಲಿದ್ದು ಮೇ 31 ಕಡೇಯ ದಿನ. ಜುಲೈ 15ಕ್ಕೆ ಕಂಪ್ಯೂಟರ್​ ಆಧಾರಿತ ಪರೀಕ್ಷೆಯ ಪ್ರವೇಶ ಪ್ರತಿ ಬಿಡುಗಡೆಯಾಗಲಿದೆ. ತಾತ್ಕಾಲಿಕ ಪರೀಕ್ಷಾ ದಿನಾಂಕವನ್ನು ಜುಲೈ 22ರಿಂದ 28ರೊಳಗೆ ನಡೆಸುವ ಸಾಧ್ಯತೆ ಇದೆ.

ರಾಯ್​ಪುರ, ಜಮ್ಮು, ಪ್ರಯಾಗ್​ ರಾಜ್​, ದೆಹಲಿ, ಬಿಲಸ್​ಪುರ್​​, ಶ್ರೀನಗರ, ಹೈದರಾಬಾದ್​, ಕೋಲ್ಕತ್ತಾ, ಗುವಾಹಟಿ, ಗಾಂಧಿನಗರ, ಚೆನ್ನೈ, ಅಜ್ಮೇರ್​​, ಇಂಫಾಲ ಮತ್ತು ಪಾಟ್ನಾದ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಇರಲಿದೆ. ಜನರಲ್​ ಅಪ್ಟಿಟ್ಯೂಡ್​​, ಜನರಲ್​ ಇಂಟೆಲಿಜೆನ್ಸ್​, ಕ್ವಾಂಟಿಟೇಟಿವ್​ ಅಪ್ಟಿಟ್ಯೂಡ್​ ಮಾದರಿಯ ಪ್ರಶ್ನೆಗಳಿರಲಿವೆ. 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿ 90 ನಿಮಿಷ. ಸಂಪೂರ್ಣ ವಿವರ ಸೇರಿದಂತೆ ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಸಿಆರ್​ಪಿಎಫ್​​​ ಜಾಲತಾಣ crpf.gov.ink ಕ್ಕೆ ಭೇಟಿ ನೀಡಿ.

ಇದನ್ನೂ ಓದಿ: ಬ್ಯಾಂಕ್​ ಆಫ್​ ಬರೋಡಾದಲ್ಲಿ ಉದ್ಯೋಗಾವಕಾಶ; 157 ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.