ETV Bharat / bharat

ಹಜ್​ ಯಾತ್ರೆಯಲ್ಲಿ ವಿಐಪಿ ಕೋಟಾ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧಾರ: ಸ್ಮೃತಿ ಇರಾನಿ

ಹಜ್​ ಯಾತ್ರೆಯ ವಿಐಪಿ (ಗಣ್ಯರು) ಕೋಟಾ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂಬ ಮಹತ್ವದ ವಿಚಾರವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಬುಧವಾರ ತಿಳಿಸಿದ್ದಾರೆ.

ಹಜ್​ ಯಾತ್ರೆ ವಿಐಪಿ ಕೋಟಾ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧಾರ; ಸ್ಮೃತಿ ಇರಾನಿ
central-government-decision-to-stop-hajj-yatra-vip-quota-smriti-irani
author img

By

Published : Jan 12, 2023, 10:25 AM IST

ನವದೆಹಲಿ: ಸೌದಿ ಅರೇಬಿಯಾ ಸರ್ಕಾರವು ಹಜ್ ಯಾತ್ರಿಕರ ಸಂಖ್ಯೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ವಿಐಪಿ ಹಜ್​ ಕೋಟಾ ತೆಗೆದು ಹಾಕಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಜ್ ಯಾತ್ರೆಗೆ ಬರಬಹುದೆಂದು ಸೋಮವಾರ ಸೌದಿ ಸರ್ಕಾರ ತಿಳಿಸಿತ್ತು. ಏತನ್ಮಧ್ಯೆ, ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಭಾಗವಾಗಿ ಕೇಂದ್ರ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಈ ವಿವೇಚನಾರಹಿತ ಕೋಟಾವನ್ನು ಪರಿಚಯಿಸಲಾಗಿತ್ತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಹಜ್ ಸಮಿತಿ ಮತ್ತು ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಎಲ್ಲರಿಗೂ ವಿಶೇಷ ಕೋಟಾವನ್ನು ನಿಗದಿಪಡಿಸಲಾಗಿತ್ತು ಎಂದು ಕೇಂದ್ರ ಹೇಳಿದೆ. ಈ ಸಂಬಂಧ ಮಾತನಾಡಿರುವ ಸಚಿವರು, ಹಜ್ ಸಮಿತಿ ಮತ್ತು ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಎಲ್ಲರಿಗೂ ವಿಶೇಷ ಕೋಟಾವನ್ನು ನಿಗದಿಪಡಿಸಲಾಗಿತ್ತು. ಈ ಕೋಟಾವನ್ನು ಕೊನೆಗೊಳಿಸುವಂತೆ ಹಜ್ ಸಮಿತಿಯನ್ನು ಒತ್ತಾಯಿಸಲಾಗಿದೆ. ವಿವಿಧ ರಾಜ್ಯಗಳ ಎಲ್ಲಾ ಹಜ್ ಸಮಿತಿಗಳು ಇದನ್ನು ಬೆಂಬಲಿಸಿವೆ. ಈ ವಿಐಪಿ ಸಂಸ್ಕೃತಿಯನ್ನು ಹಜ್ ಪ್ರಕ್ರಿಯೆಯಲ್ಲಿ ಕೊನೆಗೊಳಿಸಲಾಗಿದೆ ಎಂದು ತಿಳಿಸಿದರು.

ಕೋಟಾದಡಿ 500 ಸೀಟು ಮೀಸಲು: 2012ರಲ್ಲಿ ವಿಐಪಿ ಕೋಟಾವನ್ನು ಪ್ರಾರಂಭಿಸಲಾಗಿತ್ತು. ವಿಶೇಷ ಕೋಟಾದ ಅಡಿಯಲ್ಲಿ ಸುಮಾರು 500 ಸೀಟುಗಳಿದ್ದವು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಅಲ್ಪ ಸಂಖ್ಯಾತ ಸಚಿವರು ಮತ್ತು ಹಜ್​ ಕಮಿಟಿಯಡಿ ಕೋಟಾದಡಿ 500 ಜನರು ಹಜ್​ ಯಾತ್ರೆ ನಡೆಸಬಹುದಿತ್ತು. ರಾಷ್ಟ್ರಪತಿ ಕೋಟಾದಲ್ಲಿ 100, ಉಪರಾಷ್ಟ್ರಪತಿ ಕೋಟಾದಲ್ಲಿ 75, ಪಿಎಂ ಕೋಟಾದಲ್ಲಿ 75 ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೋಟಾದಲ್ಲಿ 50 ಸೀಟುಗಳಿದ್ದವು. ಭಾರತದ ಹಜ್ ಸಮಿತಿಯ 200 ಸ್ಥಾನಗಳನ್ನೂ ಇದು ಹೊಂದಿತ್ತು. ಈ ವಿಐಪಿ ಕೋಟಾ ರದ್ದು ಮಾಡಿದ ಹಿನ್ನೆಲೆಯಲ್ಲಿ ಈಗ ಹಜ್​ ಯಾತ್ರೆ ನಡೆಸುವವರು ಹಜ್​ ಸಮಿತಿ ಮತ್ತು ಖಾಸಗಿ ಟೂರ್​ ಅಪರೇಟರ್​ ಅಡಿ ಯಾತ್ರೆ ನಡೆಸಬಹುದಾಗಿದೆ.

ಹಜ್​ ಪ್ರಕ್ರಿಯೆಯಲ್ಲಿನ ಈ ವಿಐಪಿ ಸಂಸ್ಕೃತಿ ನಿಲ್ಲಬೇಕು. ಹಜ್​ ಸಮಿತಿ ಕೂಡಾ ಈ ಕೋಟಾವನ್ನು ಅಂತ್ಯಗೊಳಿಸುವಂತೆ ಒತ್ತಾಯಿಸಿದೆ. ರಾಜ್ಯದ ಎಲ್ಲಾ ಹಜ್​ ಸಮಿತಿ ಇದಕ್ಕೆ ಬೆಂಬಲ ನೀಡಿದೆ. ಎಲ್ಲ ಇಲಾಖೆಯಲ್ಲಿ ಈ ರೀತಿಯ ವಿಶೇಷ ವರ್ಗದಲ್ಲಿನ ವಿಐಪಿ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವೂ ಆಗಿದೆ. ಪ್ರಧಾನಿಯವರ ಆಶಯಗಳನ್ನು ಪ್ರತಿಬಿಂಬಿಸುವ ಸಮಗ್ರ ಹಜ್ ನೀತಿಯನ್ನು ಭವಿಷ್ಯದಲ್ಲಿ ಘೋಷಿಸಲಾಗುವುದು ಎಂದು ಅವರು ಸಚಿವೆ ಇರಾನಿ ಹೇಳಿದ್ದಾರೆ.

2023ರಲ್ಲಿ ಭಾರತದ 1,75,000 ಭಾರತೀಯ ಯಾತ್ರಿಗಳು ಹಜ್​ ಯಾತ್ರೆ ನಡೆಸಲಿದ್ದಾರೆ. ಈ ಸಂಬಂಧ ಸೌದಿ ಅರೇಬಿಯಾ ಮತ್ತು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದೇ ಮೊದಲ ಬಾರಿಗೆ ಭಾರತದಿಂದ ಸುಮಾರು 2 ಲಕ್ಷ ಯಾತ್ರಿಕರು ಯಾತ್ರೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದು, ಇತರರ ಬಗ್ಗೆ ಅಪಪ್ರಚಾರ ಬೇಡ: ಅಮಿತ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.