ಹೈದರಾಬಾದ್: ಈ ಅಜ್ಜಿಗೆ ಬರೋಬ್ಬರಿ 106 ವರ್ಷ. ಶತಾಯುಷಿಯಾದರೂ ಇನ್ನೂ ಚಿರ ಯೌವನದ ಹುಡುಗಿಯ ಹಾಗೆ ಜೀವನ ದೂಡುತ್ತಿದ್ದಾಳೆ. ಆಕೆಯ ಎಲ್ಲ ಕೆಲಸಗಳನ್ನು ಆಕೆಯೇ ಮಾಡಿಕೊಂಡು ಬರುತ್ತಿದ್ದಾರೆ.
ಹೌದು, ಆರೋಗ್ಯವಂತ ಈ ವೃದ್ಧೆಯ ಹೆಸರು ವೆಂಕಟರಮಣಮ್ಮ 1914 ರಲ್ಲಿ ಜನಿಸಿದ ಇವರಿಗೆ ಹತ್ತು ಮಕ್ಕಳಿದ್ದಾರೆ. ಏಳು ಗಂಡು ಮತ್ತು ಮೂರು ಹೆಣ್ಣು ಮಕ್ಕಳು.
ಈಗ ಒಟ್ಟಾರೆ ಕುಟುಂಬದ ಸಂಖ್ಯೆ 186. ಅವರೆಲ್ಲರೂ ಸೇರಿಕೊಂಡು ಈಗ ಅವರ 100 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅವರ ಪುತ್ರರು, ಪುತ್ರಿಯರು, ಸೋದರ ಸಂಬಂಧಿಗಳು, ಸೋದರಳಿಯರು ಮತ್ತು ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಭಾಗಿಯಾಗಿ ಅಜ್ಜಿಗೆ ಶುಭ ಹಾರೈಸಿದ್ದಾರೆ.
ವೆಂಕಟರಮಣಮ್ಮ ಕರ್ನೂಲ್ ಜಿಲ್ಲೆಯ ತಾದೂರು ಮಂಡಲದ ಸಿರ್ಸವಾಡ ಕಾಲೋನಿಯಲ್ಲಿ ಭಾನುವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರು ಒಂದೇ ಕುಟುಂಬದ ನಾಲ್ಕು ತಲೆಮಾರುಗಳನ್ನು ಕಂಡಿದ್ದು, ಕುಟುಂಬದ ಸದಸ್ಯರಿಂದ ಸನ್ಮಾನಿಸಲಾಗಿದೆ. ಕುಟುಂಬದವರೆಲ್ಲರ ಜೊತೆ ಈ ಸಂಭ್ರಮ ನನಗೆ ಹೆಚ್ಚು ಸಂತಸ ತಂದಿದೆ ಎನ್ನುತ್ತಾರೆ ಈ ಅಜ್ಜಿ.