ಹೈದರಾಬಾದ್: ಭಾರತ್ ಬಯೋಟೆಕ್‌ನ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಅವಧಿಯನ್ನು ತಯಾರಿಕೆಯ ದಿನಾಂಕದಿಂದ 12 ತಿಂಗಳವರೆಗೆ ವಿಸ್ತರಿಸಲು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಅನುಮೋದಿಸಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
ಕೋವ್ಯಾಕ್ಸಿನ್ ಗುಣಮಟ್ಟವನ್ನು ನಿರ್ದಿಷ್ಟ ಅವಧಿ(ಶೆಲ್ಫ್-ಲೈಫ್) ವಿಸ್ತರಣೆಯ ಈ ಅನುಮೋದನೆಯು ಹೆಚ್ಚುವರಿ ಸ್ಥಿರತೆಯ ಡೇಟಾ ಲಭ್ಯತೆಯನ್ನು ಆಧರಿಸಿದೆ. ಇದನ್ನು ಸಿಡಿಎಸ್‌ಸಿಒಗೆ ಸಲ್ಲಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್‌ನ ಶೆಲ್ಫ್-ಲೈಫ್ ಅನ್ನು 6 ರಿಂದ 24 ತಿಂಗಳವರೆಗೆ ವಿಸ್ತರಿಸಬೇಕೆಂದು ಭಾರತದ ಔಷಧ ನಿಯಂತ್ರಕರಿಗೆ ಪತ್ರ ಬರೆಯಲಾಗಿತ್ತು.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ಗೆ ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿದಾಗ ಆರು ತಿಂಗಳ ಶೆಲ್ಫ್-ಲೈಫ್‌ನೊಂದಿಗೆ ಕೋವಾಕ್ಸಿನ್ ಮಾರಾಟ ಮತ್ತು ವಿತರಣೆಗೆ ಈ ಮೊದಲು ಅನುಮತಿ ನೀಡಲಾಗಿತ್ತು.
2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿದಾಗ ಶೆಲ್ಫ್-ಲೈಫ್ ಅನ್ನು ಆರು ತಿಂಗಳಿಂದ 24 ತಿಂಗಳವರೆಗೆ ವಿಸ್ತರಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹಾಗೂ ಭಾರತ್ ಬಯೋಟೆಕ್ ಜಂಟಿಯಾಗಿ ಕೋವ್ಯಾಕ್ಸಿನ್ ಲಸಿಕೆಯನ್ನುಅಭಿವೃದ್ಧಿಪಡಿಸಿದೆ.