ETV Bharat / bharat

ಗುರುಗ್ರಾಮ್​ದಲ್ಲಿ ನಿರ್ಮಾಣ ಹಂತದ ಫ್ಲೈಓವರ್‌ ಕುಸಿತ: ಸಿಸಿಟಿವಿ ವಿಡಿಯೋ - ಇಬ್ಬರು ಫ್ಲೈಓವರ್ ಮೇಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯ

ಗುರುಗ್ರಾಮ್​ನಲ್ಲಿ ಫ್ಲೈಓವರ್ ಕುಸಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಹೊರಬಂದಿದೆ. ಇದರಲ್ಲಿ ಇಬ್ಬರು ಫ್ಲೈಓವರ್ ಮೇಲೆ ನಡೆದುಕೊಂಡು ಹೋಗುತ್ತಿರುವುದು ಮತ್ತು ಬೈಕ್ ಸವಾರ ಕೂಡ ಅಪಘಾತದಿಂದ ಪಾರಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

cctv-footage-of-the-flyover
ಗುರುಗ್ರಾಮ್‌ನಲ್ಲಿ ಫ್ಲೈಓವರ್ ಬೀಳುವ ಪ್ರಕರಣ
author img

By

Published : Mar 28, 2021, 4:09 PM IST

ಗುರುಗ್ರಾಮ್ (ಹರಿಯಾಣ): ದೌಲತಾಬಾದ್‌ನಲ್ಲಿ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ ಬಿದ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಲ್ಲಿ ಫ್ಲೈಓವರ್‌ನ ಕೆಲವು ಭಾಗಗಳು ಹೇಗೆ ಕುಸಿದಿವೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

ಫ್ಲೈಓವರ್​ನ ಮೇಲೆ ಇಬ್ಬರು ಚಲಿಸುತ್ತಿರುತ್ತಾರೆ. ಕೆಲವೇ ಕ್ಷಣಗಳಲ್ಲಿ ಫ್ಲೈಓವರ್​ನ ಚಪ್ಪಡಿ ಬೀಳುವುದನ್ನು ನಾವು ಸ್ಪಷ್ಟವಾಗಿ ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್​ ಸವಾರ ಕೂಡ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡಿದ್ದಾನೆ. ಈ ಒಂದು ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುಗ್ರಾಮ್‌ದಲ್ಲಿ ಫ್ಲೈಓವರ್ ಬೀಳುತ್ತಿರುವ ದೃಶ್ಯ

ಓದಿ:ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಅನಿಲ್ ದೇಶ್​​ಮುಖ್ ವಿರುದ್ಧದ ಆರೋಪಗಳ ತನಿಖೆ : ಸಿಎಂ ಠಾಕ್ರೆ ನಿರ್ಧಾರ

ಇಂದು ಬೆಳಗ್ಗೆ 7: 30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಈವರೆಗೆ ಮೂವರು ಗಾಯಗೊಂಡಿದ್ದಾರೆ, ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಜನರು ಹೇಳುವ ಪ್ರಕಾರ, ಈ ಫ್ಲೈಓವರ್‌ನ ಕೆಲವು ಭಾಗ ಬಿದ್ದಾಗ, ತುಂಬಾ ದೊಡ್ಡ ಶಬ್ದ ಕೇಳಿಬಂತು. ಆಗ ನಾವೆಲ್ಲಾ ಭಯಭೀತರಾದೆವು ಎಂದಿದ್ದಾರೆ.

ಆದರೆ ಗುರುಗ್ರಾಮ್‌ದಲ್ಲಿ ಫ್ಲೈಓವರ್ ಬೀಳುವ ಪ್ರಕರಣ ಇದೇ ಮೊದಲೇನಲ್ಲ. ಡಿ.17, 2018 ರಂದು ಇದೇ ರೀತಿ ಸೇತುವೆಯೊಂದು ಹಾನಿಗೊಳಗಾಗಿತ್ತು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಇದಾದ ನಂತರ, ಪ್ಲಾಸ್ಟರ್ ತುಂಡೊಂದು 2019 ರ ಜುಲೈ 18 ರಂದು ಸೇತುವೆಯ ಕೆಳಗಿನಿಂದ ಬಿದ್ದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.