ETV Bharat / bharat

ದೇಶದಲ್ಲಿ ಕೃಷಿ ರಾಸಾಯನಿಕಗಳ ಆಮದು ಕಡಿಮೆ ಮಾಡಬೇಕು: ಸಿಸಿಎಫ್‌ಐ - ಸಿಸಿಎಫ್‌ಐ

ಕಳೆದ ಎರಡು ವರ್ಷಗಳಲ್ಲಿ (2019-2020 ಮತ್ತು 2020-2021) ಕೃಷಿ ರಾಸಾಯನಿಕಗಳ ಆಮದು 9096 ಕೋಟಿ ರೂ.ಗಳಿಂದ 12418 ಕೋಟಿ ರೂ.ಗೆ ಏರಿದೆ. ಆದರೆ, ಕೃಷಿ ರಾಸಾಯನಿಕಗಳ ರಫ್ತು ದರ ಕಡಿಮೆಯಾಗಿದೆ. ಕೃಷಿ ರಾಸಾಯನಿಕಗಳ ರಫ್ತು ಎರಡು ವರ್ಷಗಳಲ್ಲಿ 23,757 ಕೋಟಿ ರೂ.ಗಳಿಂದ 26,513 ಕೋಟಿ ರೂ.ಗೆ ಏರಿದೆ. ಒಟ್ಟಾರೆ ಆಮದು ಶೇ 37ರ ದರದಲ್ಲಿ ಹೆಚ್ಚಾಗಿದೆ ಇದೇ ವೇಳೆ ರಫ್ತು ಕೇವಲ ಶೇ12ರ ದರದಲ್ಲಿ ಹೆಚ್ಚಾಗಿದೆ.

farming
farming
author img

By

Published : May 17, 2021, 8:56 PM IST

ನವದೆಹಲಿ: ಭಾರತದಲ್ಲಿ ಕೃಷಿ ರಾಸಾಯನಿಕಗಳ ಆಮದು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಕ್ರಾಪ್​ ಕೇರ್​ ಫೆಡರೇಷನ್ ಆಫ್​ ಇಂಡಿಯಾ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಪತ್ರ ಬರೆದಿದೆ.

ಕಳೆದ ಎರಡು ವರ್ಷಗಳಲ್ಲಿ (2019-2020 ಮತ್ತು 2020-2021) ಕೃಷಿ ರಾಸಾಯನಿಕಗಳ ಆಮದು 9096 ಕೋಟಿ ರೂ.ಗಳಿಂದ 12418 ಕೋಟಿ ರೂ.ಗೆ ಏರಿದೆ. ಆದರೆ ಕೃಷಿ ರಾಸಾಯನಿಕಗಳ ರಫ್ತು ದರ ಹೆಚ್ಚಳ ಕಡಿಮೆಯಾಗಿದೆ. ಕೃಷಿ ರಾಸಾಯನಿಕಗಳ ರಫ್ತು ಎರಡು ವರ್ಷಗಳಲ್ಲಿ 23,757 ಕೋಟಿ ರೂ.ಗಳಿಂದ 26,513 ಕೋಟಿ ರೂ.ಗೆ ಏರಿದೆ. ಒಟ್ಟಾರೆ ಆಮದು ಶೇ37ರಷ್ಟು ದರದಲ್ಲಿ ಹೆಚ್ಚಾಗಿದೆ ಇದೇ ವೇಳೆ ರಫ್ತು ಕೇವಲ ಶೇ 12ರಷ್ಟು ದರದಲ್ಲಿ ಹೆಚ್ಚಾಗಿದೆ.

ಈಟಿವಿ ಭಾರತ್ ಜೊತೆ ಕ್ರಾಪ್​ ಕೇರ್​ ಫೆಡರೇಶನ್ ಆಫ್​ ಇಂಡಿಯಾದ ಹಿರಿಯ ಸಲಹೆಗಾರ ಹರೀಶ್ ಮೆಹ್ತಾ ಮಾತನಾಡುತ್ತಾ, ಈ ಬೆಳವಣಿಗೆ ಭಾರತೀಯ ಕೃಷಿ ರಾಸಾಯನಿಕ ಉದ್ಯಮಕ್ಕೆ ನಿರಾಶೆ ತಂದಿದೆ ಎಂದು ಹೇಳಿದ್ರು. ದೇಶದ ಕೃಷಿ ರಾಸಾಯನಿಕಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಭಾರತೀಯ ಉದ್ಯಮ ಸಮರ್ಥವಾಗಿದೆ. ಸಿಸಿಎಫ್‌ಐ ದೇಶದ 50 ಪ್ರಮುಖ ಕೃಷಿ ರಾಸಾಯನಿಕ ಕಂಪನಿಗಳನ್ನು ಒಳಗೊಂಡಿದೆ. ಇದು ಇಂದು 130 ದೇಶಗಳಿಗೆ ಕೃಷಿ ರಾಸಾಯನಿಕಗಳನ್ನು ರಫ್ತು ಮಾಡುತ್ತದೆ. ದೇಶದ ಒಟ್ಟು ಕೃಷಿ ರಾಸಾಯನಿಕಗಳಲ್ಲಿ ಶೇ 95ರಷ್ಟು ಬೆಳೆ ಕ್ರಾಪ್​ ಕೇರ್​ ಫೆಡರೇಷನ್ ಆಫ್​ ಇಂಡಿಯಾಗೆ ಸೇರಿದ ಕಂಪನಿಗಳಿಂದ ಉತ್ಪಾದನೆಯಾಗುತ್ತದೆ ಎಂದು ಮೆಹ್ತಾ ಹೇಳಿದ್ರು.

ದೇಶದಲ್ಲಿ ಇಂದು ಕೃಷಿ ರಾಸಾಯನಿಕಗಳ ಆಮದು ವೇಗವಾಗಿ ಹೆಚ್ಚುತ್ತಿದೆ, ಇದರಿಂದಾಗಿ ವ್ಯಾಪಾರ ಕೊರತೆ ಹೆಚ್ಚಾಗುವುದಲ್ಲದೇ ದೇಶವು ವಿದೇಶಿ ವಿನಿಮಯದ ನಷ್ಟವನ್ನೂ ಅನುಭವಿಸುತ್ತದೆ. ಹೀಗಾಗಿ ಕೃಷಿ ರಾಸಾಯನಿಕಗಳ ಆಮದಿನ ಮೇಲಿನ ಸುಂಕವನ್ನು ಶೇ 30 ಕ್ಕೆ ಹೆಚ್ಚಿಸಬೇಕು ಎಂದು ಕ್ರಾಪ್​ ಕೇರ್​ ಫೆಡರೇಶನ್ ಆಫ್​ ಇಂಡಿಯಾ ಒತ್ತಾಯಿಸಿದೆ.

ಭಾರತೀಯ ಕೃಷಿ ತನ್ನನ್ನು ಸ್ವಾವಲಂಬಿಯನ್ನಾಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ನಮ್ಮ ದೇಶದ ಕೈಗಾರಿಕೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಬೇಡಿಕೆಯನ್ನು ಪೂರೈಸಬಲ್ಲವು ಎಂಬ ವಿಶ್ವಾಸವಿದೆ ಎಂದು ಹರೀಶ್ ಮೆಹ್ತಾ ಹೇಳಿದರು. ಹೀಗಾಗಿ ಭಾರತದ ಕಂಪೆನಿಗಳು ದೇಶದ ಕೃಷಿ ರಾಸಾಯನಿಕಗಳ ಒಟ್ಟು ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿರುವಾಗ, ಅವರನ್ನು ಪ್ರೋತ್ಸಾಹಿಸಬೇಕು ಎಂದ್ರು.

ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ, ಭಾರತೀಯ ರಾಸಾಯನಿಕ ಉದ್ಯಮವು ಸುಮಾರು 55,000 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ದೇಶೀಯ ಮಾರಾಟದಲ್ಲಿ ಸುಮಾರು 26,000 ಕೋಟಿ ಮತ್ತು ರಫ್ತುಗಳಿಂದ 29,000 ಕೋಟಿ ರೂ. ವ್ಯವಹಾರ ನಡೆದಿದೆ. ದೇಶದಲ್ಲಿ ಕೃಷಿ ರಾಸಾಯನಿಕಗಳ ಆಮದಿನಲ್ಲಿ ಚೀನಾ ಹೆಚ್ಚಿನ ಪಾಲು ಹೊಂದಿದೆ. ಹೆಚ್ಚುತ್ತಿರುವ ಆಮದನ್ನು ಸರ್ಕಾರ ನಿಯಂತ್ರಿಸಬೇಕಾಗಿದೆ. ನಿಯಂತ್ರಿಸಲು ಕೃಷಿ ರಾಸಾಯನಿಕಗಳ ಮೇಲಿನ ಆಮದು ಸುಂಕವನ್ನು ಶೇ10 ರಿಂದ ಶೇ30 ಕ್ಕೆ ಹೆಚ್ಚಿಸಬೇಕು ಎಂದು ಸಿಸಿಎಫ್‌ಐ ಹಲವು ವರ್ಷಗಳಿಂದ ಸೂಚಿಸುತ್ತಾ ಬಂದಿದೆ.

ಕೃಷಿ ರಾಸಾಯನಿಕಗಳ ಆಮದು ಹೆಚ್ಚಿದಂತೆ ವ್ಯಾಪಾರಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ ಮಾಲೀಕರು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಸರ್ಕಾರ ಮಾತನಾಡುವಾಗ, ಆಮದಾದ ಕೃಷಿ ರಾಸಾಯನಿಕಗಳನ್ನು ರೈತರು ದುಬಾರಿ ಬೆಲೆಗೆ ಖರೀದಿಸುತ್ತಿರುವುದನ್ನು ಸಹ ಗಮನಿಸಬೇಕು ಎಂದು ಹರೀಶ್ ಮೆಹ್ತಾ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.