ETV Bharat / bharat

10ನೇ ತರಗತಿ ಅಂಕಪಟ್ಟಿ: ಸಿಬಿಎಸ್‌ಇ ಶಾಲೆಗಳಿಗೆ ನೀಡಿದ್ದ ಗಡುವು ಜೂನ್ 30 ರವರೆಗೆ ವಿಸ್ತರಣೆ - ಸಿಬಿಎಸ್‌ಇ

ಶಾಲೆಗಳು 10 ನೇ ತರಗತಿಯ ವಿದ್ಯಾರ್ಥಿಗಳ ಅಂಕಪಟ್ಟಿ ತಯಾರಿಸಿ ಮಂಡಳಿಗೆ ಸಲ್ಲಿಸಲು ನೀಡಿದ್ದ ಗಡುವನ್ನು ಸಿಬಿಎಸ್​​ಸಿ ಜೂನ್ 30 ರವರೆಗೆ ವಿಸ್ತರಿಸಿದೆ.

cbsc
cbsc
author img

By

Published : May 18, 2021, 10:25 PM IST

ನವದೆಹಲಿ: ಸಿಬಿಎಸ್‌ಇ ಶಾಲೆಗಳು 10 ನೇ ತರಗತಿಯ ವಿದ್ಯಾರ್ಥಿಗಳ ಅಂಕಪಟ್ಟಿ ತಯಾರಿಸಿ ಮಂಡಳಿಗೆ ಸಲ್ಲಿಸಲು ನೀಡಿದ್ದ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಸಿಬಿಎಸ್​ಸಿ ಮೌಲ್ಯಾಂಕನದ ಎಲ್ಲಾ ಪ್ರಕ್ರಿಯೆಗಳು ಜೂನ್​ 11 ರೊಳಗೆ ಪೂರ್ಣಗೊಳಿಸಿ ಜೂನ್​ 20 ರಂದು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ, ವಿವಿಧ ರಾಜ್ಯಗಳಲ್ಲಿ ಕೊರೊನಾ ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಈ ಹಿಂದೆ ಕೇಂದ್ರ ಶಿಕ್ಷಣ ಸಚಿವಾಲಯವು ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ್ದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.