ETV Bharat / bharat

ಜಾನುವಾರು ಕಳ್ಳಸಾಗಣೆ ಕೇಸ್​: ಪಶ್ಚಿಮಬಂಗಾಳದಲ್ಲಿ ಟಿಎಂಸಿ ನಾಯಕನ ಬಂಧಿಸಿದ ಸಿಬಿಐ - ಜಾನುವಾರು ಕಳ್ಳಸಾಗಣೆ ಪ್ರಕರಣದ ಕುರಿತು ಸಿಬಿಐ ತನಿಖೆ

ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಪ್ರಬಲ ನಾಯಕ ಅನುಬ್ರತಾ ಮಂಡಲ್​ರನ್ನು ಜಾನುವಾರು ಕಳ್ಳಸಾಗಣೆ ಆರೋಪದ ಮೇಲೆ ಸಿಬಿಐ ಬಂಧಿಸಿದೆ.

cbi-officials-arrested-tmc-leader-in-west-bengal
ಜಾನುವಾರು ಕಳ್ಳಸಾಗಣೆ ಕೇಸ್
author img

By

Published : Aug 11, 2022, 11:19 AM IST

Updated : Aug 11, 2022, 11:29 AM IST

ಕೋಲ್ಕತ್ತಾ: ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಪ್ರಬಲ ನಾಯಕ ಅನುಬ್ರತಾ ಮಂಡಲ್​ರನ್ನು ಜಾನುವಾರು ಕಳ್ಳಸಾಗಣೆ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ ಬಂಧಿಸಿದೆ. ಸಶಸ್ತ್ರ ಪಡೆಗಳ ಸಮೇತ ಅನುಬ್ರತಾ ಮಂಡಲ್​ರ ಮನೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ವಿರೋಧದ ಮಧ್ಯೆ ವಶಕ್ಕೆ ಪಡೆದರು.

ಪಶ್ಚಿಮ ಬಂಗಾಳದಲ್ಲಿ ಜಾನುವಾರು ಕಳ್ಳಸಾಗಣೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಸಿಬಿಐ ಸತತ ಹತ್ತು ಸಮನ್ಸ್‌ಗಳನ್ನು ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಇದನ್ನು ನಿರ್ಲಕ್ಷಿಸಿದ್ದ ಕಾಂಗ್ರೆಸ್​ ನಾಯಕನನ್ನು ಸಿಬಿಐ ಇದೀಗ ಬಂಧಿಸಿದೆ.

ಸಶಸ್ತ್ರ ಪಡೆಗಳ ಬೆಂಗಾವಲಿನಲ್ಲಿ ಗುರುವಾರ ಬೆಳಗ್ಗೆ ಕಾಂಗ್ರೆಸ್​ ನಾಯಕನ ಮನೆಯ ಎರಡು ತಂಡಗಳಾಗಿ ಅಧಿಕಾರಿಗಳು ದಾಳಿ ಮಾಡಿದರು. ಬಳಿಕ ಅವರನ್ನು ನಿವಾಸದಲ್ಲಿಯೇ ಬಂಧಿಸಲಾಯಿತು.

2020 ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ ನಂತರ ಮೊಂಡಲ್ ಅವರ ಹೆಸರು ಜಾನುವಾರು ಕಳ್ಳಸಾಗಣೆ ಹಗರಣದ ಪ್ರಕರಣದಲ್ಲಿ ಕಾಣಿಸಿಕೊಂಡಿತ್ತು. 2015 ಮತ್ತು 2017 ರ ನಡುವೆ, ಗಡಿಯುದ್ದಕ್ಕೂ ಕಳ್ಳಸಾಗಣೆ ಮಾಡುತ್ತಿದ್ದರಿಂದ 20,000 ದನಗಳ ತಲೆಗಳನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ ಎಂದು ಸಿಬಿಐ ಹೇಳಿದೆ.

ಓದಿ: ಪ್ರವೀಣ್‌ ಹತ್ಯೆ ಮಾಡಿದ ಪ್ರಮುಖ ಆರೋಪಿಗಳು ಪೊಲೀಸ್‌ ಬಲೆಗೆ?: ದಿಢೀರ್ ಸುದ್ದಿಗೋಷ್ಠಿ ಕರೆದ ಎಸ್​ಪಿ

Last Updated : Aug 11, 2022, 11:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.