ಮಯೂರ್‌ಭಂಜ್(ಒಡಿಶಾ): ಮಯೂರ್‌ಭಂಜ್ ಜಿಲ್ಲೆಯ ರಸ್ಗೋಬಿಂದ್‌ಪುರ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಆನೆಯೊಂದು ಪ್ರಯಾಣಿಕರ ಬಸ್ಸನ್ನು ತಳ್ಳುತ್ತಿರುವುದು ಕಂಡುಬಂದಿದೆ.
ತಾರಿಣಿ ಎಂಬ ಖಾಸಗಿ ಬಸ್ ಪ್ರಯಾಣಿಕರೊಂದಿಗೆ ಬಾಳೆಸೋರು ಒಲಮರದಿಂದ ರಸಗೋಬಿಂದಪುರಕ್ಕೆ ಬರುತ್ತಿತ್ತು. ಬಸ್ಸಿನಲ್ಲಿ ಸುಮಾರು 20 ರಿಂದ 25 ಪ್ರಯಾಣಿಕರಿದ್ದರು. ಈ ವೇಳೆ ಆನೆ ಬಸ್ ತಳ್ಳಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಇದನ್ನು ಕಂಡ ಸ್ಥಳೀಯರು ಕಿರುಚಾಡಿ ಆನೆಯನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಹಾಗೆ ಕೆಲವರು ಆ ಭಯಾನಕ ಘಟನೆಯನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದು ಆನಂದಿಸಿದ್ದಾರೆ.
ಆನೆ ದಾಳಿಯಿಂದ ಬಸ್ನಲ್ಲಿದ್ದವರಿಗೆ ಯಾವುದೇ ರೀತಿ ಪ್ರಾಣಾಪಾಯ ಆಗಿಲ್ಲ. ಆದರೆ ಬಸ್‌ನ ಕೆಲವು ಕಿಟಕಿಯ ಗಾಜುಗಳು ಒಡೆದಿವೆ.