ಕೊಟ್ಟಾಯಂ( ಕೇರಳ) : ಐದು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಕೇರಳದ ಸಿರೋ-ಮಲಬಾರ್ ಚರ್ಚ್‌ನ ಅಡಿಯಲ್ಲಿರುವ ಕ್ಯಾಥೊಲಿಕ್ ಚರ್ಚ್ ಕಲ್ಯಾಣ ಯೋಜನೆಯೊಂದನ್ನು ಪ್ರಕಟಿಸಿದೆ.
ಈ ಯೋಜನೆಯ ಪ್ರಕಾರ 2000 ರ ನಂತರ ವಿವಾಹವಾದ ಮತ್ತು ಐದು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಮಾಸಿಕ 1,500 ರೂ. ನೀಡುವುದಾಗಿದೆ.
ಚರ್ಚ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದು ದೊಡ್ಡ ಕುಟುಂಬಗಳಿಗೆ ವಿಶೇಷವಾಗಿ ಕೋವಿಡ್ -19 ರ ನಂತರದ ಸನ್ನಿವೇಶದಲ್ಲಿ ನೆರವು ನೀಡುವುದು ಮುಖ್ಯವಾಗಿದೆ. ನಾವು ಶೀಘ್ರದಲ್ಲೇ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೇವೆ. ಹಾಗೆ ಆಗಸ್ಟ್‌ನಿಂದ ನೆರವು ನೀಡಲು ಮುಂದಾಗುತ್ತೇವೆ ಎಂದು ಫ್ಯಾಮಿಲಿ ಅಪೋಸ್ಟೊಲೇಟ್ ಮುಖ್ಯಸ್ಥರಾಗಿರುವ ಫ್ರಾ. ಜೋಸೆಫ್ ಕುಟ್ಟಿಯಾಂಕಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Exclusive ಸಿಹಿ ಮಾತಿನ ಚಂದುಳ್ಳಿ ಚೆಲುವೆ ಆಗ್ತಾಳೆ ಬೆತ್ತಲೆ; ಮರುಳಾದ್ರೆ ನಿಮ್ಮ ಬಾಳು ಕತ್ತಲೆ!
ಕ್ರಿಶ್ಚಿಯನ್ ಸಮುದಾಯದ ಜನಸಂಖ್ಯೆಯು ರಾಜ್ಯದಲ್ಲಿ ಕಡಿಮೆಯಾಗುತ್ತಿದೆ ಎಂಬುದು ವಾಸ್ತವ. ನಮ್ಮ ಬೆಳವಣಿಗೆಯ ದರ ಕಡಿಮೆ. ಅದೂ ಒಂದು ಕಾರಣ ಆದರೆ, ಕೊರೊನಾದಿಂದ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ನೆರವು ನೀಡುವುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
ಕೇರಳ ರಾಜ್ಯ ರಚನೆಯ ಸಮಯದಲ್ಲಿ ಕ್ರಿಶ್ಚಿಯನ್ನರು ರಾಜ್ಯದ ಎರಡನೇ ಅತಿದೊಡ್ಡ ಸಮುದಾಯವಾಗಿದ್ದರು. ಆದರೆ ಈಗ, ಸಮುದಾಯವು ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 18.38 ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಶ್ಚಿಯನ್ ಸಮುದಾಯದಲ್ಲಿ ಜನನ ಪ್ರಮಾಣವು ಪ್ರತಿಶತ 14 ಕ್ಕೆ ಇಳಿದಿದೆ ಎಂದು ಇದೇ ವೇಳೆ ಫ್ರಾ. ಜೋಸೆಫ್ ಮಾಹಿತಿ ನೀಡಿದರು.