ನವದೆಹಲಿ: ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (ICIJ) ಬಿಡುಗಡೆ ಮಾಡಿದ ಪಂಡೋರಾ ಪೇಪರ್ಸ್ಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ಮಾಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಸಂಬಂಧಿತ ತನಿಖಾ ಸಂಸ್ಥೆಗಳು ಈ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಲಿವೆ. ಇದಕ್ಕಾಗಿ ವಿದೇಶದ ನ್ಯಾಯಾಂಗ ವ್ಯಾಪ್ತಿಯಲ್ಲೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ತನಿಖಾ ಸಮಿತಿಯಲ್ಲಿ ಇರುವವರು..
ಸರ್ಕಾರದ ಹಲವಾರು ಏಜೆನ್ಸಿಗಳು ಭಾಗವಹಿಸಲಿರುವ ತನಿಖೆಗೆ ಸಿಬಿಡಿಟಿ (Central Board of Direct Taxes) ಅಧ್ಯಕ್ಷರು ನೇತೃತ್ವ ವಹಿಸುತ್ತಾರೆ. ಇದರ ಜೊತೆಗೆ, ಸಿಬಿಡಿಟಿ ಪ್ರತಿನಿಧಿಗಳು, ಜಾರಿ ನಿರ್ದೇಶನಾಲಯ, ಆರ್‌ಬಿಐ ಮತ್ತು ಎಫ್‌ಐಯು (Financial Intelligence Unit)ನ ಪ್ರತಿನಿಧಿಗಳು ಇರಲಿದ್ದಾರೆ.
ಪಂಡೋರಾ ಪೇಪರ್ಸ್ ಮೂಲಕ ಅಂದಾಜು 11.9 ಮಿಲಿಯನ್ ಗೌಪ್ಯ ದಾಖಲೆಗಳು ಸೋರಿಕೆಯಾಗಿದ್ದು, ಈ ದಾಖಲೆಗಳಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಸುಮಾರು 35 ಅಂತಾರಾಷ್ಟ್ರೀಯ ನಾಯಕರ ಹಣಕಾಸಿನ ಮಾಹಿತಿಗಳಿವೆ. ಅವರು ತೆರಿಗೆ ತಪ್ಪಿಸಿ ಬೇರೆ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಪಂಡೋರಾ ಪೇಪರ್ಸ್ ಸೋರಿಕೆ: ಸಚಿನ್, ಶಕೀರಾ ಸೇರಿ 91 ದೇಶಗಳ ಶ್ರೀಮಂತರ ಹಣಕಾಸು ಗುಟ್ಟು ರಟ್ಟು