ಡೆಹ್ರಾಡೂನ್ (ಉತ್ತರಾಖಂಡ್): ಯುವತಿಯೊಬ್ಬಳು ನಾಯಿಗೆ ಬಿಯರ್ ಕುಡಿಸುತ್ತಿರುವ ಘಟನೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ನಲ್ಲಿ ಬೆಳಕಿಗೆ ಬಂದಿದೆ. ಇದರ ವಿಡಿಯೋ ವೈರಲ್ ಕೂಡ ಆಗಿದ್ದು, ಇದು ಡೆಹ್ರಾಡೂನ್ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಪೊಲೀಸರು ಯುವತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನತೆಗೆ ಸಾಮಾಜಿಕ ಜಾಲತಾಣಗಳ ಗೀಳು ಹೆಚ್ಚಾಗಿದೆ. ಯುವಕ, ಯುವತಿಯವರು ಸೇರಿ ಬಹುತೇಕರು ಸೋಷಿಯಲ್ ಮೀಡಿಯಾಗಳಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಹಲವರು ತಮ್ಮ ಪೋಸ್ಟ್ಗಳಿಗೆ ಹೆಚ್ಚು ಲೈಕ್ಸ್ ಮತ್ತು ವಿವ್ಯೂಸ್ ಪಡೆಯಲು ಹೊಸ-ಹೊಸ ಪ್ರಯತ್ನಿಸುತ್ತಾರೆ. ಆದಾಗ್ಯೂ, ಕೆಲವರು ಹೊಸತನದ ಪ್ರಯತ್ನದಲ್ಲಿ ಅನೇಕ ಬಾರಿ ಎಲ್ಲೆ ಮೀರಿದ ವರ್ತನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಮಾನವೀಯತೆಯನ್ನೇ ಮರೆತು ಬಿಡುವ ಹಂತಕ್ಕೂ ತಲುಪಿ ಬಿಡುತ್ತಿದ್ದಾರೆ.
ಡೆಹ್ರಾಡೂನ್‌ನ ಯುವತಿಯ ಕೂಡ ಇದೇ ರೀತಿ ಮಾಡಿದ್ದಾಳೆ. ತನ್ನ ಮುದ್ದಿನ ನಾಯಿಗೆ ಬಿಯರ್ ಕುಡಿಯಲು ನೀಡಿದ್ದು, ಇದರ ವಿಡಿಯೋವನ್ನು ಮಾಡಿದ್ದಾಳೆ. ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾಳೆ. ಇದರಿಂದ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದು ಪೊಲೀಸರ ಗಮನಕ್ಕೂ ಬಂದಿದೆ. ಆದ್ದರಿಂದ ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಆಕೆಗೆ ಸಂಕಷ್ಟ ಶುರುವಾಗಿದೆ.
ನಾಯಿಗೆ ಬಿಯರ್ ನೀಡಿದ ವಿಡಿಯೋ ಬೆಳಕಿಗೆ ಕೂಡಲೇ ಆರೋಪಿ ಯುವತಿ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ, ಆ ಯುವತಿಯನ್ನು ಪತ್ತೆ ಹಚ್ಚಿ, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ದಲೀಪ್ ಸಿಂಗ್ ಕುನ್ವಾರ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಪ್ರಾಣಿಗಳಿಗೆ ಹಾನಿ ಮಾಡುವ ಅಥವಾ ಕಾನೂನಿಗೆ ವಿರುದ್ಧವಾದ ಯಾವುದೇ ವಿಡಿಯೋಗಳನ್ನು ಮಾಡಬಾರದು. ಅಂತಹ ವಿಡಿಯೋಗಳು ಪೊಲೀಸರ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಎಸ್‌ಪಿ ಕುನ್ವಾರ್ ಹೇಳಿದ್ದಾರೆ.
ಇದನ್ನೂ ಓದಿ: ಇಲಿ ಬಾಲಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ ವ್ಯಕ್ತಿ: ಪ್ರಾಣಿ ಹಿಂಸೆ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ
ಕೆಲ ತಿಂಗಳು ಹಿಂದೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಇಲಿ ಬಾಲಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದು ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಇಲ್ಲಿನ ಪನ್ವಾಡಿಯ ಪ್ರದೇಶದ ನಿವಾಸಿಯೊಬ್ಬರು ಇಲಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಅದನ್ನು ಚರಂಡಿ ಎಸೆದಿದ್ದಾರೆ. ಈ ಘಟನೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಪ್ರಾಣಿ ಪ್ರೇಮಿ ವಿಕೇಂದ್ರ ಶರ್ಮಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.