ETV Bharat / bharat

ಮಹಿಳೆ ಮೇಲೆ ಅತ್ಯಾಚಾರ ಆರೋಪ : ಇಬ್ಬರು ಸಿಪಿಎಂ ನಾಯಕರ ವಿರುದ್ಧ ಕೇಸ್ ದಾಖಲು - sexually abuse

ಮಹಿಳೆಯನ್ನು ಬೆದರಿಸಿ ಅತ್ಯಾಚಾರವೆಸಗಿದ ಆರೋಪದಲ್ಲಿ ಕೋಝಿಕೋಡಿನ ಇಬ್ಬರು ಸಿಪಿಎಂ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ.

Case against two CPM leaders for sexually abusing a housewife in Kozhikode
ಸಿಪಿಎಂ ನಾಯಕರಿಂದ ಅತ್ಯಾಚಾರ
author img

By

Published : Jun 27, 2021, 2:18 PM IST

ಕೋಝಿಕೋಡ್ : ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ವಡಗರ ಸಿಪಿಎಂ ನಾಯಕರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸಿಪಿಎಂ ಮುಳ್ಳಿಯೇರಿ ಬ್ರಾಂಚ್ ಪುಲ್ಲುಲಾ ಪರಂಬಾತ್ ಬಾಬುರಾಜ್ ಮತ್ತು ಡಿವೈಎಫ್​ಐ ಪದಿಯರಕ್ಕರ ಪ್ರದೇಶ ಕಾರ್ಯದರ್ಶಿ ತೆಕ್ಕೆ ಪರಂಬತ್ ಲಿಜೇಶ್ ಆರೋಪಿಗಳಾಗಿದ್ದಾರೆ.

ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಬಾಬುರಾಜ್, ನಾನು ಒಂಟಿಯಾಗಿದ್ದಾಗ ರಾತ್ರಿ 11 ಗಂಟೆಯ ಸುಮಾರಿಗೆ ಮನೆಯೊಳಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ವಿಷಯವನ್ನು ನನ್ನ ಪತಿ ಮತ್ತು ಸ್ಥಳೀಯರಿಗೆ ತಿಳಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿ, ನನ್ನ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ ಮಹಿಳೆ ಆರೋಪಿಸಿದ್ದಾರೆ.

ಇದಾದ ಬಳಿಕ, ಡಿವೈಎಫ್​ಐ ನಾಯಕ ಲಿಜೇಶ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಸಿಪಿಎಂ ಬ್ರಾಂಚ್ ಕಾರ್ಯರ್ಶಿ ನನ್ನ ಮೇಲೆ ದೌರ್ಜನ್ಯ ನಡೆಸಿದ ವಿಷಯವನ್ನು ಹೇಳಿ ನನ್ನನ್ನು ಹೆದರಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.

ಬಳಿಕ ನಾನು ನಡೆದ ವಿಷಯವನ್ನು ನನ್ನ ಪತಿಗೆ ತಿಳಿಸಿ ವಡಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಇಬ್ಬರೂ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ನಾಯಕರನ್ನು ಸಿಪಿಎಂ ಪಕ್ಷ ಉಚ್ಚಾಟನೆ ಮಾಡಿದೆ.

ಓದಿ : ನಾಗಮಂಗಲದಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಅರ್ಚಕನ ಮೇಲೆ ಮಾರಣಾಂತಿಕ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.