ಚೆನ್ನೈ: ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೂ ಚೆನ್ನೈನಿಂದ ಇತರೆ ನಗರಗಳಿಗೆ ತೆರಳುವ ಪ್ರಯಾಣಿಕರ ಅಲ್ಪಾವಧಿಯ ವಿಶ್ರಾಂತಿಗಾಗಿ ಅಲ್ಟ್ರಾ-ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕ್ಯಾಪ್ಸುಲ್ ಹಾಸಿಗೆಗಳನ್ನು ಚೆನ್ನೈ ವಿಮಾನ ನಿಲ್ದಾಣದ ನಿರ್ದೇಶಕ ಶರತ್ ಕುಮಾರ್ ಬುಧವಾರ (ಆ. 17) ಉದ್ಘಾಟಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶರತ್‌ಕುಮಾರ್, ಪ್ರಸ್ತುತ 4 ಹಾಸಿಗೆಯ ಕ್ಯಾಪ್ಸುಲ್ ಹೋಟೆಲ್ ಅನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ. ಅಲ್ಪಾವಧಿ ವಿಶ್ರಾಂತಿಗಾಗಿ ಹಾಸಿಗೆ ಸೌಲಭ್ಯದ ಅಗತ್ಯವಿರುವ ಪ್ರಯಾಣಿಕರು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಪ್ರತಿ ಗಂಟೆಗೆ 250 ರೂ. ಶುಲ್ಕ ವಿಧಿಸಲಾಗುತ್ತದೆ. ಒಂದು ಬೆಡ್‌ನಲ್ಲಿ ಒಬ್ಬ ಪ್ರಯಾಣಿಕ ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂದು ಮಗು ವಿಶ್ರಾಂತಿ ಪಡೆಯಲು ಅನುಮತಿ ನೀಡಲಾಗಿದೆ ಎಂದರು.
ಚೆನ್ನೈ ವಿಮಾನ ನಿಲ್ದಾಣದ ಸ್ಲೀಪಿಂಗ್ ಸೌಲಭ್ಯವನ್ನು ಗಂಟೆಗೊಮ್ಮೆ ಪಡೆಯಬಹುದು. ಇದರಲ್ಲಿ ಓದುವ ದೀಪಗಳು, ಚಾರ್ಜಿಂಗ್ ಸ್ಟೇಷನ್, ಯುಎಸ್‌ಬಿ ಚಾರ್ಜರ್, ಲಗೇಜ್ ಸ್ಪೇಸ್, ಆಂಬಿಯೆಂಟ್ ಲೈಟ್, ಬ್ಲೋವರ್ ಕಂಟ್ರೋಲ್ ನಂತಹ ಸೌಕರ್ಯಗಳನ್ನು ಹೊಂದಿದೆ. ಪ್ರಯಾಣಿಕರು ತಮ್ಮ ವಿಮಾನ ಟಿಕೆಟ್, ಬೋರ್ಡಿಂಗ್ ಪಾಸ್, PNR ಸಂಖ್ಯೆಯನ್ನು ಬಳಸಿಕೊಂಡು ಬುಕ್ ಮಾಡಬಹುದು. ವಿಮಾನ ರಹಿತ ಪ್ರಯಾಣಿಕರಿಗೆ ಇಲ್ಲಿ ಆಸನಗಳನ್ನು ನೀಡಲಾಗುವುದಿಲ್ಲ. ಪ್ರಯಾಣಿಕರ ಪ್ರತಿಕ್ರಿಯೆಗೆ ಅನುಗುಣವಾಗಿ ಹಾಸಿಗೆಗಳನ್ನು ಹೆಚ್ಚಿಸಲಾಗುವುದು ಎಂದರು.
ಇದನ್ನೂ ಓದಿ: ಆ. 30 ರಂದು ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ ಅತಿ ದೊಡ್ಡ ಪ್ರಯಾಣಿಕರ ವಿಮಾನ ಏರ್ ಬಸ್ A 380