ETV Bharat / bharat

ಅಲೆಕ್ಸಾ ಮೂಲಕ ಜೋರು ಸಂಗೀತ ಕೇಳಿದ್ದಕ್ಕೆ ಕೇಸ್​.. ಇದನ್ನು ಒಪ್ಪಲಾಗದು ಎಂದ ಕೋರ್ಟ್​ - case of listening to loud music through Alexa

ಅಮೆಜಾನ್ ಅಲೆಕ್ಸಾ ಮೂಲಕ ಸಂಗೀತ ಕೇಳಿದ್ದಕ್ಕೆ ಹೋಟೆಲ್​ ಉದ್ಯಮಿಯೊಬ್ಬರು ಅತಿಥಿಯ ಮೇಲೆ ಕೇಸ್​ ದಾಖಲಿಸಿ, ಶೋಕಾಸ್​ ನೋಟಿಸ್​ ಜಾರಿ ಮಾಡಿಸಿದ್ದರು. ಇದರ ವಿರುದ್ಧದ ಅರ್ಜಿ ವಿಚಾರಣೆ ನಡೆಸಿದ ಗೋವಾ ಕೋರ್ಟ್​, ಇದೊಂದು ನಿರರ್ಥಕ ಕೇಸ್​ ಎಂದು ಪ್ರಕರಣವನ್ನು ವಜಾ ಮಾಡಿ, ದಂಡ ವಿಧಿಸಿದೆ.

cannot-blame-alexa-for-loud-music-says-goa-hc
ಅಲೆಕ್ಸಾ ಮೂಲಕ ಜೋರು ಸಂಗೀತ ಕೇಳಿದ್ದಕ್ಕೆ ಕೇಸ್​
author img

By

Published : Aug 30, 2022, 11:41 AM IST

ಪಣಜಿ(ಗೋವಾ): ವರ್ಚುಯಲ್​ ಅಸಿಸ್ಟೆಂಟ್​ ಟೆಕ್ನಾಲಜಿ ಅಮೆಜಾನ್​ ಅಲೆಕ್ಸಾ ಮೂಲಕ ಜೋರು ಸಂಗೀತ ಹಾಕಿ ಕಿರಿಕಿರಿ ಉಂಟು ಮಾಡಿದ್ದಲ್ಲದೇ, ಶಬ್ದಮಾಲಿನ್ಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೋಟೆಲ್​ ಉದ್ಯಮಿಯೊಬ್ಬ ನೀಡಿದ ದೂರನ್ನು ಗೋವಾ ಹೈಕೋರ್ಟ್​ ತಿರಸ್ಕರಿಸಿದೆ. ಜೊತೆಗೆ ಹೆಚ್ಚಿನ ಧ್ವನಿಮಾಡಿದ ಕಾರಣಕ್ಕಾಗಿ ಅಲೆಕ್ಸಾವನ್ನು ನಿಂದಿಸಲಾಗದು ಎಂದು ಹೇಳಿ ಹೋಟೆಲ್​ ಉದ್ಯಮಿಗೆ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಅಲೆಕ್ಸಾ ಮೂಲಕ ಸಂಗೀತ ಕೇಳಿದ್ದಕ್ಕೆ ಹೋಟೆಲ್​ ಉದ್ಯಮಿಯೊಬ್ಬ ವ್ಯಕ್ತಿಯೊಬ್ಬರ ಮೇಲೆ ದೂರು ನೀಡಿ ಸಂಬಂಧಿತ ಪ್ರಾಧಿಕಾರದಿಂದ ಶೋಕಾಸ್​ ನೋಟಿಸ್​ ಜಾರಿ ಮಾಡಿಸಿದ್ದ. ಇದರ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ ತನ್ನಿಂದ ಯಾವುದೇ ಪ್ರಮಾದವಾಗಿಲ್ಲ. ತಪ್ಪಾಗಿ ನೋಟಿಸ್​ ನೀಡಲಾಗಿದೆ. ಇದನ್ನು ಇತ್ಯರ್ಥ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಕೋರ್ಟ್​ ನೋಟಿಸ್​ ಅನ್ನು ರದ್ದು ಮಾಡಿ, ಹೋಟೆಲ್​ ಉದ್ಯಮಿಗೇ ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ಎಂ ಎಸ್​ ಸೋನಕ್​ ಮತ್ತು ಆರ್​ ಎನ್​ ಲಡ್ಡಾ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿ, ಅಲೆಕ್ಸಾ ವರ್ಚುಯಲ್​ ಅಸಿಸ್ಟೆಂಟ್​ ಟೆಕ್ನಾಲಜಿಯಾಗಿದೆ. ಅದನ್ನು ಬಳಸಿ ಸಂಗೀತ ಆಲಿಸುವುದು ಸಹಜ. ಅದನ್ನು ಕೇಳುವವರ ಮೇಲೆ ಮತ್ತು ಅದಕ್ಕೂ ಹೆಚ್ಚಾಗಿ ಅಲೆಕ್ಸಾ ಮೇಲೆ ದೂರಲಾಗದು ಎಂದಿದೆ.

ಶಬ್ದಮಾಲಿನ್ಯದ ಮೇಲೆ ನಿಗಾ ಇಡುವುದು ತುಂಬಾ ಕಷ್ಟದ ಕೆಲಸ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿದಾರರ ವಿರುದ್ಧ ಹಲವು ದೂರುಗಳನ್ನು ಸಲ್ಲಿಸಲಾಗಿದೆ. ಆದರೆ, ಶಬ್ದ ಮಾಲಿನ್ಯ ನಿಯಂತ್ರಣ ಕಾಯಿದೆ - 200 ರ ಪ್ರಕಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆ ತೀರ್ಪಿನ ಅನ್ವಯ ಇಂತಹ ಕ್ಷುಲ್ಲಕ ವಾದಕ್ಕೆ ಬಳಸಲಾಗದು. ಇದೊಂದು ನಿರಾಶಾದಾಯಕ ಪ್ರಕರಣವಾಗಿದೆ. ಇಂತಹ ಪ್ರಕರಣದಲ್ಲಿ ಶೋಕಾಸ್ ನೋಟಿಸ್‌ ಜಾರಿ ಮಾಡಿರುವುದು ಅಧಿಕಾರದ ವ್ಯಾಪ್ತಿಯನ್ನು ಮೀರಿದಂತಾಗಿದೆ ಎಂದು ಪೀಠ ಹೇಳಿದೆ.

ಇನ್ನು ತಮಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದಕ್ಕೆ ಉತ್ತರ ನೀಡಿರುವ ಅರ್ಜಿದಾರರು, ತಾವು ಯಾವುದೇ ಧ್ವನಿವರ್ಧಕ ಬಳಸಿಲ್ಲ. ಅಲೆಕ್ಸಾ ಮೂಲಕ ಸಂಗೀತವನ್ನು ಆಲಿಸಿದ್ದಕ್ಕೆ ನೋಟಿಸ್‌ ನೀಡಲಾಗಿದೆ ಎಂದಿದ್ದಾರೆ.

ಓದಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ ಸಾಧ್ಯತೆ.. ಭಿನ್ನಮತೀಯ ನಾಯಕನಿಗೆ ಸಿಗುತ್ತಾ ಚಾನ್ಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.