ನವದೆಹಲಿ: ಯಥೇಚ್ಛ ಕೋವಿಡ್ -19 ಪ್ರಕರಣಗಳು ಕಂಡು ಬರುತ್ತಿರುವ ರಾಜ್ಯಗಳ ಪ್ರತಿನಿಧಿಗಳ ಜತೆ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಶುಕ್ರವಾರ ಸಭೆ ನಡೆಸಲಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತವು 81,466 ಹೊಸ ಕೋವಿಡ್ ಸೋಂಕು ದಾಖಲಿಸಿದೆ. ಕಳೆದ ಅಕ್ಟೋಬರ್‌ನಿಂದ ಇದು ಒಂದು ದಿದನ ಅತ್ಯಧಿಕ ಪ್ರಕರಣಗಳಾಗಿವೆ. ದೇಶದ ಸೋಂಕಿನ ಪ್ರಮಾಣ 1,23,03,131ಗೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ: ಆರು ರಾಜ್ಯಗಳಿಂದಲೇ ಗಂಡಾಂತರ
ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಪಂಜಾಬ್, ಕೇರಳ, ತಮಿಳುನಾಡು, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ವ್ಯಾಪಕವಾಗಿ ಉಲ್ಬಣಗೊಳ್ಳುತ್ತಿವೆ.
ಕೊರೊನಾ ವೈರಸ್ ಸೋಂಕು ನಿಯಂತ್ರಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಸಲಹೆ ನೀಡಿದೆ.
ಇತ್ತೀಚೆಗೆ ನೀತಿ ಆಯೋಗ ಸದಸ್ಯ (ಆರೋಗ್ಯ) ವಿ.ಕೆ. ಪೌಲ್, ದೇಶದ ಪ್ರಸ್ತುತ ಕೋವಿಡ್ ಸನ್ನಿವೇಶವು ತೀರಾ ಕೆಟ್ಟದ್ದಾಗಿದೆ. ವೈರಸ್ ಇನ್ನೂ ತುಂಬಾ ಸಕ್ರಿಯವಾಗಿ ತನ್ನ ಪ್ರವೃತ್ತಿಗಳು ತೋರಿಸುತ್ತದೆ ಎಂದರು.