ಭುವನೇಶ್ವರ: ದಿಢೀರ್ ಬೆಳವಣಿಗೆವೊಂದರಲ್ಲಿ ಒಡಿಶಾದ ಆಡಳಿತಾರೂಢ ಬಿಜು ಜನತಾದಳ ಸಚಿವ ಸಂಪುಟದ ಎಲ್ಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ನಾಳೆ ಹೊಸದಾಗಿ ಸಚಿವ ಸಂಪುಟ ರಚನೆಯಾಗಲಿದ್ದು, ಮಧ್ಯಾಹ್ನ 12ಗಂಟೆಗೆ ನೂತನ ಸಚಿವರು ಪದಗ್ರಹಣ ಮಾಡಲಿದ್ದಾರೆಂದು ವರದಿಯಾಗಿದೆ.
ಒಡಿಶಾ ಸ್ಪೀಕರ್ ಸೂರ್ಜ್ಯ ನಾರಾಯಣ ಪಾತ್ರ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರ ಬೆನ್ನಲ್ಲೇ ಸಚಿವ ಸಂಪುಟದ ಎಲ್ಲರೂ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. 2024ರ ವಿಧಾನಸಭೆಗೆ ತಯಾರಿ ನಡೆಸಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ಕಂಡು ಬಂದಿದೆ.
-
Cabinet reshuffle in Odisha | All the Ministers in the state cabinet have resigned, new Ministers will take oath tomorrow at 12pm: Official Sources pic.twitter.com/4OoYlFAH41
— ANI (@ANI) June 4, 2022 " class="align-text-top noRightClick twitterSection" data="
">Cabinet reshuffle in Odisha | All the Ministers in the state cabinet have resigned, new Ministers will take oath tomorrow at 12pm: Official Sources pic.twitter.com/4OoYlFAH41
— ANI (@ANI) June 4, 2022Cabinet reshuffle in Odisha | All the Ministers in the state cabinet have resigned, new Ministers will take oath tomorrow at 12pm: Official Sources pic.twitter.com/4OoYlFAH41
— ANI (@ANI) June 4, 2022
ಇದನ್ನೂ ಓದಿ: ಮಾದರಿ ನಿರ್ಧಾರ: ಮಗನನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದಲ್ಲೇ ಹೊಸದಾಗಿ ಸಚಿವ ಸಂಪುಟ ರಚನೆಯಾಗಲಿದೆ. ಈ ವೇಳೆ ಹೊಸದಾಗಿ 20 ಸಚಿವರು ಪದಗ್ರಹಣ ಮಾಡುವ ಸಾಧ್ಯತೆ ಇದೆ. ಕಳೆದ ಮೇ 29ಕ್ಕೆ ಬಿಜೆಡಿ ಸರ್ಕಾರ ಮೂರು ವರ್ಷ ಪೂರೈಕೆ ಮಾಡಿದ್ದು, ಇದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ಕಂಡು ಬಂದಿದೆ. ಒಡಿಶಾ ವಿಧಾನಸಭೆ ಬಜೆಟ್ ಅಧಿವೇಶನ ಜೂನ್ 22ರಿಂದ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ಜೂನ್ 20ರಿಂದ ನವೀನ್ ಪಟ್ನಾಯಕ್ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.