ETV Bharat / bharat

ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ - ಪುದುಚೇರಿ ಇತ್ತೀಚಿನ ಸುದ್ದಿ

ರಾಜಕೀಯ ಬಿಕ್ಕಟ್ಟಿನಿಂದಾಗಿ ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಹೀಗಾಗಿ ಇಂದಿನಿಂದಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳ್ಳಲಿದೆ.

Prakash Javadekar
Prakash Javadekar
author img

By

Published : Feb 24, 2021, 4:47 PM IST

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಬಹುಮತ ಸಾಬೀತು ಪಡಿಸಲು ವಿಫಲವಾಗಿದ್ದರಿಂದ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್​​ ಸರ್ಕಾರ ಪುದುಚೇರಿಯಲ್ಲಿ ಪತನಗೊಂಡಿದ್ದು, ಇದೀಗ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒಪ್ಪಿಗೆ ನೀಡಿದ್ದು, ಇಂದಿನಿಂದಲೇ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ. ಈ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡಲು ಮುಂದೆ ಬರದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

  • In Puducherry, the CM has resigned and nobody has claimed to form the govt & therefore the LG has recommended suspending the 14th Assembly. Now, our approval will be sent to the President. After his approval, the Assembly will stand dissolved: Union Minister Prakash Javadekar pic.twitter.com/xKtVimaeW4

    — ANI (@ANI) February 24, 2021 " class="align-text-top noRightClick twitterSection" data=" ">

ಓದಿ: ಕರ್ನಾಟಕ, ಮಧ್ಯಪ್ರದೇಶ ಆಯ್ತು, ಇದೀಗ 'ಕೈ' ತಪ್ಪಿದ ಪುದುಚೇರಿ!

ಪುದುಚೇರಿಯಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದ ಕಾರಣ ಫೆ. 22ರೊಳಗೆ ಬಹುಮತ ಸಾಬೀತುಪಡಿಸುವಂತೆ ಲೆಫ್ಟಿನೆಂಟ್​ ಗವರ್ನರ್​ ತಮಿಳ್​​ಸಾಯಿ ಸೌಂದರ್​ರಾಜನ್​ ಆದೇಶ ನೀಡಿದ್ದರು. ವಿಶ್ವಾಸಮತಯಾಚನೆಯಲ್ಲಿ ಪುದುಚೇರಿ ಸಿಎಂ ವಿ. ನಾರಾಯಣಸ್ವಾಮಿ ವಿಫಲವಾಗಿದ್ದು, ರಾಜೀನಾಮೆ ನೀಡಿದ್ದರು.

2016ರಲ್ಲಿ ನಡೆದ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ 15 ಕಾಂಗ್ರೆಸ್ ಶಾಸಕರು ಗೆಲುವು ದಾಖಲು ಮಾಡಿದ್ದರು. ಇದಾದ ಬಳಿಕ ಅನೇಕ ಶಾಸಕರು, ಸಚಿವರು ರಾಜೀನಾಮೆ ನೀಡಿರುವ ಕಾರಣ ಸರ್ಕಾರ ಅಲ್ಪ ಮತಕ್ಕೆ ಕುಸಿತಗೊಂಡಿತ್ತು. 33 ಶಾಸಕರನ್ನು ಹೊಂದಿರುವ ಪುದುಚೇರಿ ವಿಧಾನಸಭೆಯಲ್ಲಿ ಪ್ರತಿಪಕ್ಷ 14 ಹಾಗೂ ಆಡಳಿತ ಪಕ್ಷ 12 ಸದಸ್ಯರ ಬಲ ಹೊಂದಿದ್ದವು. ಇದೇ ಕಾರಣಕ್ಕಾಗಿ ಬಹುಮತ ಸಾಬೀತುಪಡಿಸುವಂತೆ ನೂತನ ಲೆಪ್ಟಿನೆಂಟ್​ ಗವರ್ನರ್ ಆದೇಶ ನೀಡಿದ್ದರು. ವಿಧಾನಸಭೆ ಅವಧಿ ಮುಕ್ತಾಯಗೊಳ್ಳಲು ಆರು ತಿಂಗಳ ಬಾಕಿ ಇರುವ ಕಾರಣ ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡಲು ಮುಂದೆ ಬಂದಿಲ್ಲ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.