ETV Bharat / bharat

ಸೆ.30ಕ್ಕೆ ಬಂಗಾಳ ಉಪ ಚುನಾವಣೆ: ಭವಾನಿಪುರದಲ್ಲಿ ಗೆದ್ದಿಲ್ಲ ಅಂದ್ರೆ ಸಿಎಂ ಸ್ಥಾನದಿಂದ ದೀದಿ ಔಟ್​.. - Bhabanipur

ಪಶ್ಚಿಮ ಬಂಗಾಳದ ಏಳು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮಮತಾ ಬ್ಯಾನರ್ಜಿಗೆ ಅಗ್ನಿ ಪರೀಕ್ಷೆಗೆ ಎದುರಾಗಿದೆ.

Bypolls to 7 West Bengal seats to be held on Sept 30
ಭವಾನಿಪುರದಲ್ಲಿ ಗೆದ್ದಿಲ್ಲ ಅಂದ್ರೆ ಸಿಎಂ ಸ್ಥಾನದಿಂದ ದೀದಿ ಔಟ್
author img

By

Published : Sep 4, 2021, 3:11 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸೆಪ್ಟೆಂಬರ್ 30 ರಂದು ಪಶ್ಚಿಮ ಬಂಗಾಳದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ.

ಏಳು ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿರುವ ಭವಾನಿಪುರವೂ ಸೇರಿದೆ. ಈ ಕ್ಷೇತ್ರದಲ್ಲಿ ಅವರು ಗೆದ್ದಿಲ್ಲ ಅಂದರೆ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ. ಇದೇ ಕಾರಣಕ್ಕೆ ಇಷ್ಟು ದಿನಗಳ ವರೆಗೆ ಚುನಾವಣೆಗಳನ್ನು ಬೇಗನೆ ಮುಗಿಸುವಂತೆ ಟಿಎಂಸಿ ಹಾಗೂ ಕೋವಿಡ್​ ಕಾರಣದಿಂದ ಎಲೆಕ್ಷನ್​ ಮುಂದೂಡುವಂತೆ ಬಿಜೆಪಿ ಒತ್ತಾಯಿಸುತ್ತಾ ಬಂದಿತ್ತು. ಆದರೆ, ಈಗ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಕಣಕ್ಕೆ ಇಳಿದಿದ್ದ ಮಮತಾ ಬ್ಯಾನರ್ಜಿ ಅವರು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದರು. ಆದರೆ, ಅವರ ಪಕ್ಷಕ್ಕೆ ಬಹುಮತ ಬಂದ ಹಿನ್ನೆಲೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದರು.

ಸೋತರೆ ರಾಜೀನಾಮೆ..

ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್​ ಇಲ್ಲ. ಭಾರತ ಸಂವಿಧಾನದ 164ನೇ ವಿಧಿಯಡಿ, ರಾಜ್ಯದ ಶಾಸಕಾಂಗದ ಸದಸ್ಯರಲ್ಲದ ಸಚಿವರು 6 ತಿಂಗಳ ಅವಧಿಯೊಳಗೆ ತಮ್ಮ ಸದಸ್ಯತ್ವವನ್ನು ಸಾಬೀತು ಮಾಡಬಹುದಾಗಿದೆ. ಇದೇ ನಿಯಮ ಸಿಎಂ ಅಭ್ಯರ್ಥಿಗೂ ಅನ್ವಯವಾಗಲಿದೆ. ಹೀಗಾಗಿ ಆರು ತಿಂಗಳೊಳಗೆ ಯಾವುದಾದರೂ ಸ್ಥಾನವನ್ನು ಖಾಲಿಗೊಳಿಸಿ ಅಥವಾ ಖಾಲಿಯಾಗಿರುವ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕಾಂಗದ ಸದಸ್ಯತ್ವ ಪಡೆಯಬಹುದಾಗಿದೆ.

ಹೀಗಾಗಿ ತಮ್ಮ ಮುಖ್ಯಮುಂತ್ರಿ ಸ್ಥಾನವನ್ನ ಭದ್ರಗೊಳಿಸಿಕೊಳ್ಳಬೇಕಾದರೆ 7 ಕ್ಷೇತ್ರಗಳ ಪೈಕಿ ದೀದಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸಲೇ ಬೇಕು. ಭವಾನಿಪುರ ಕ್ಷೇತ್ರದಿಂದಲೇ ಮಮತಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಒಂದು ವೇಳೆ ಇಲ್ಲಿ ಸೋತರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.