ಬೆಂಗಳೂರು: ಮಾಸ್ಕೋದಿಂದ ಅನಿಲ ಆಮದು ಕೊಳ್ಳುತ್ತಿರುವುರು ಭಾರತಕ್ಕೆ ಲಾಭಾದಾಯಕವಾಗಿದೆ. ಇದನ್ನು ಹೀಗೆಯೇ ಮುಂದುವರೆಸಲು ಇಷ್ಟಪಡುತ್ತೇನೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ. ರಷ್ಯಾ ವಿದೇಶಾಂಗ ಸಚಿವರ ಜೊತೆ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಮೂಲಕ ನವದೆಹಲಿ-ಮಾಸ್ಕೋ ಸಂಬಂಧದ ಗಟ್ಟಿತನದ ಬಗ್ಗೆ ತಿಳಿಸಿದ್ದರು.
ಪಾಶ್ಚಿಮಾತ್ಯ ದೇಶಗಳ ಆಕ್ರೋಶದ ನಡುವೆ ಭಾರತ ತೈಲ ಆಮದು ಹೆಚ್ಚಿಸಿರುವ ಕುರಿತು ಮಾತನಾಡುತ್ತಾ, ತೈಲ ಮಾರುಕಟ್ಟೆ ಮೇಲೆ ಒತ್ತಡವಿದೆ. ಆದರೆ, ಭಾರತ ವಿಶ್ವದ ಮೂರನೇ ದೊಡ್ಡ ತೈಲ ಗ್ರಾಹಕವಾಗಿದೆ. ಭಾರತದ ಆದಾಯದ ಮಟ್ಟ ತುಂಬಾ ಹೆಚ್ಚಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚು ಅನುಕೂಲಕರ ನಿಯಮಗಳಿರುವ ಪ್ರದೇಶಗಳನ್ನು ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಭಾರತ-ರಷ್ಯಾ ಸಂಬಂಧವು ನಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿದೆ. ಈ ಸಂಬಂಧ ಮುಂದುವರೆಸಲು ಇಷ್ಟಪಡುತ್ತೇವೆ ಎಂದಿದ್ದಾರೆ.
ಇದೇ ವೇಳೆ ಉಭಯ ದೇಶಗಳ ಸಹಕಾರದ ಕುರಿತು ಮಾತನಾಡುತ್ತಾ, ಭಾರತ ಮತ್ತು ರಷ್ಯಾ ಸಹಕಾರ ದೀರ್ಘವಾಗಿದ್ದು, ಸುಸ್ಥಿರವಾಗಿ ನಡೆಯುತ್ತಿರುವುದಕ್ಕೆ ಇಂದು ನಾನು ಇಲ್ಲಿರುವುದೇ ಸಾಕ್ಷಿ. ರಷ್ಯಾ ಕೂಡ ಭಾರತವನ್ನು ಉತ್ತಮ ಸ್ನೇಹಿತ ಎಂದು ಪರಿಗಣಿಸಿದೆ. ನಮ್ಮೆರಡೂ ದೇಶಗಳು ವಸ್ತುನಿಷ್ಠ ಮೌಲ್ಯಮಾಪನದ ಉತ್ತಮ ಸಂಬಂಧ ಹೊಂದಿವೆ. ನಮ್ಮ ಸಂಬಂಧ ಸಾಕಷ್ಟು ಬಲವಾಗಿದ್ದು ಸ್ಥಿರವಾದ ಬದ್ಧತೆಯನ್ನೂ ಪ್ರದರ್ಶಿಸಿವೆ ಎಂದು ವಿವರಿಸಿದರು.
ಉಕ್ರೇನ್ ಮತ್ತು ರಷ್ಯಾ ಯುದ್ದ ಜಾಗತಿಕ ಮಟ್ಟದ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಕಚ್ಛಾ ತೈಲ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ಇದನ್ನೂ ಓದಿ: ವಡೋದರಾ ಗರ್ಬಾ ಮಹೋತ್ಸವ : ವಿದೇಶಾಂಗ ಸಚಿವ ಜೈಶಂಕರ್ ಜೊತೆ 60 ವಿದೇಶಿ ರಾಯಭಾರಿಗಳು ಭಾಗಿ