ETV Bharat / bharat

ಕಂದಕಕ್ಕೆ ಉರುಳಿದ ಮದುವೆ ದಿಬ್ಬಣದ ಬಸ್​ : ಐವರು ದುರ್ಮರಣ - ಈಟಿವಿ ಭಾರತ ಕನ್ನಡ

ಮದುವೆ ಸಮಾರಂಭ ಮುಗಿಸಿ ವಾಪಸ್ಸಾಗುತ್ತಿದ್ದ ದಿಬ್ಬಣದ ಬಸ್​ ಕಂದಕಕ್ಕೆ ಉರುಳಿ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

bus-falls-into-ditch-in-up-five-dead
ಕಂದಕಕ್ಕೆ ಉರುಳಿದ ಮದುವೆ ದಿಬ್ಬಣದ ಬಸ್​ : ಐವರ ದುರ್ಮರಣ
author img

By

Published : May 7, 2023, 4:34 PM IST

ಜಲೌನ್​ (ಉತ್ತರ ಪ್ರದೇಶ): ಮದುವೆ ಸಮಾರಂಭ ಮುಗಿಸಿ ವಾಪಸಾಗುತ್ತಿದ್ದ ದಿಬ್ಬಣದ ಬಸ್​ ಕಂದಕಕ್ಕೆ ಉರುಳಿ ಐವರು ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಜಲೌನ್​ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಸಂಜೆ ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದವರ ಬಸ್ಸು ಇಲ್ಲಿನ ಗೋಪಾಲಪುರ್​​ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ. ಅಪಘಾತದಲ್ಲಿ ಕುಲದೀಪ್​ (36), ರಘುನಂದನ್ ​(46), ಸಿರೋಬನ್ ​(65), ಕರಣ್​ ಸಿಂಗ್ ​(34), ವಿಕಾಸ್​ (32) ಎಂಬುವರು ಮೃತಪಟ್ಟಿದ್ದಾರೆ.

ಇಲ್ಲಿನ ಮಾವಾಯಿ ಗ್ರಾಮದಿಂದ ಧೂತ ಉಮ್ರಿ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆಂದು ಜನರು ತೆರಳಿದ್ದರು. ಬಳಿಕ ಶನಿವಾರ ರಾತ್ರಿ ಮದುವೆ ಸಂಭ್ರಮಗಳನ್ನು ಮುಗಿಸಿ ವಾಪಸಾಗುತ್ತಿದ್ದಾಗ ರಾತ್ರಿ 2 ಗಂಟೆ ಸುಮಾರಿಗೆ ಬಸ್​ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋದ ಬಸ್​ ಚಾಲಕನು ನೇರ ಹೋಗಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಬಸ್​ ಕಂದಕಕ್ಕೆ ಉರುಳಿದೆ. ಸುಮಾರು 40 ಪ್ರಯಾಣಿಕರು ಬಸ್​ನಲ್ಲಿದ್ದರು. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಬಸ್​ ಚಾಲಕ ಸೇರಿದಂತೆ ಒಟ್ಟು ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಒರೈನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್​ ವರಿಷ್ಠಾಧಿಕಾರಿ ಇರಾಜ್​ ರಾಜ, ಭಿಂದ್​ ಉರೈ ಹೆದ್ದಾರಿಯಲ್ಲಿ ಬಸ್​ ಅಪಘಾತ ಸಂಭವಿಸಿದೆ. ಚಾಲಕ ವೇಗವಾಗಿ ಬಸ್​ ಚಾಲನೆ ಮಾಡಿರುವುದರಿಂದ ಬಸ್​ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ. ಬಸ್ಸಿನಲ್ಲಿ ಸುಮಾರು 40 ಜನರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಐವರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಹೇಳಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮೇಲ್ಛಾವಣಿ ಕಿತ್ತುಹೋಗಿದೆ. ಮಾಧವ್​ಘರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ : 'ಇಸ್ಲಾಂಗೆ ಮತಾಂತರ ಆಗದಿದ್ದರೆ ವಿಡಿಯೋ ವೈರಲ್ ಮಾಡುವೆ': ಸಿಖ್​ ಮಹಿಳೆಗೆ ಬೆದರಿಕೆ, ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.