ಹರಿಯಾಣ : ಎರಡು ಮುಗ್ದ ಮನಸುಗಳ ನಡುವೆ ಹೆಣೆಯುವ ಅಂತರಾಳದ ಬಂಧವೇ ಪ್ರೇಮ. ಪ್ರತಿಯೊಬ್ಬ ಪ್ರೇಮಿಯ ಹೃದಯದಲ್ಲಿ ಪ್ರೀತಿಯ ಸಂಕೇತವೇ ಆದಿಲ್ ಶಾ ನಿರ್ಮಿಸಿದ ತಾಜಮಹಲ್. ಆದರೆ, ನಾವು ನಿಮಿಗಿಂದು ಹರಿಯಾಣದಲ್ಲಿರುವ ತಾಜಹಲ್ ಬಗ್ಗೆ ಹೇಳುತ್ತೇವೆ.
ಕುರುಕ್ಷೇತ್ರ ಜಿಲ್ಲೆಯ ಥನೇಸರ್ ನಗರದ ಶೇಖ್ ಚಿಲ್ಲಿ ಸಮಾಧಿಗೆ ಕರೆದೊಯ್ಯುತ್ತೇವೆ. ಈ ಸಮಾಧಿಯನ್ನು 'ಹರಿಯಾಣದ ತಾಜಹಲ್' ಎಂದೇ ಕರೆಯುತ್ತಾರೆ. ತಾಜಮಹಲ್ ನಿರ್ಮಿಸುವಾಗಲೇ ಇದನ್ನು ಸಹ ನಿರ್ಮಿಸಲಾಗಿದೆಯಂತೆ.
ಕುರುಕ್ಷೇತ್ರ ಮಹಾಭಾರತ, ಶಕ್ತಿಪೀಠ ಮತ್ತು ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಮಾತ್ರವಲ್ಲದೆ ಶೇಖ್ ಚಿಲ್ಲಿ ಸಮಾಧಿಗೆ ಸಹ ಹೆಸರುವಾಸಿಯಾಗಿದೆ. ಸೂಫಿ ಸಂತ ಶೇಖ್ ಚಿಲ್ಲಿ ಓರ್ವ ಶಿಕ್ಷಕ. ಅವರ ಹೆಸರು ಶೇಖ್ ಚಿಲ್ಲಿ ಅಲ್ಲದೇ 'ಶೇಖ್ ಚಹೇಲಿ' ಎಂದು ಸಹ ಹೇಳಲಾಗಿದೆ.
ಶೇಖ್ ಚಿಲ್ಲಿಯ ಸಮಾಧಿಯನ್ನು ಕುರುಕ್ಷೇತ್ರದ ಹೊರವಲಯದಲ್ಲಿರುವ ಗುಡ್ಡದಲ್ಲಿ ನಿರ್ಮಿಸಲಾಗಿದೆ. ಇದು ಸುಂದರವಾದ ಮೊಘಲ್ ವಾಸ್ತುಶಿಲ್ಪದ ಸಮಾಧಿ. ಇದರ ಮುಖ್ಯ ಕಟ್ಟಡವು ಅಮೃತಶಿಲೆಯಿಂದ ಮಾಡಲ್ಪಟ್ಟಿದೆ.
ಇದರ ಮೇಲೆ ಗುಮ್ಮಟವಿದೆ ಮತ್ತು ಅದರ ಸುಂದರವಾದ ವಾಸ್ತುಶಿಲ್ಪದ ಕಾರಣ, ಉತ್ತರ ಭಾರತದ ತಾಜಮಹಲ್ ನಂತರ ಎರಡನೇ ಸ್ಥಾನವನ್ನು ಈ ಸ್ಥಳಕ್ಕೆ ನೀಡಲಾಗಿದೆ. ಅದರ ಪಕ್ಕದಲ್ಲಿಯೇ, ಶೇಖ್ ಚಿಲ್ಲಿ ಹೆಂಡತಿಯ ಸಮಾಧಿ ಇದೆ. ಅದನ್ನು ಮರಳುಗಲ್ಲು ಬಳಸಿ ನಿರ್ಮಿಸಲಾಗಿದೆ ಮತ್ತು ಅದರ ಮೇಲೆ ಹೂವಿನ ವಿನ್ಯಾಸ ಹೊಂದಿದೆ.
ಅದರ ಹಿಂದೆಯೇ, ಶೇಖ್ ಜಲಾಲುದ್ದೀನ್ ಥನೇಸರಿಯ ಸಮಾಧಿಯೂ ಇದೆ. ಶೇಖ್ ಜಲಾಲುದ್ದೀನ್ ಕುರುಕ್ಷೇತ್ರದ ಪ್ರಸಿದ್ಧ ಸಂತ. ಅಕ್ಬರ್ ಹೆಸರಿಗೆ ಪೂರ್ವಪ್ರತ್ಯಯವಾಗಿ 'ಜಲಾಲುದ್ದೀನ್' ಎಂಬ ಹೆಸರನ್ನು ಬಳಸಲಾಗುತ್ತದೆ. ಅಕ್ಬರ್ ಎರಡು ಬಾರಿ ಶೇಖ್ ಜಲಾಲುದ್ದೀನ್ ಥನೇಸರಿಯ ಸಮಾಧಿಗೆ ಭೇಟಿ ನೀಡಿದ್ದನೆಂದು ನಂಬಲಾಗಿದೆ.