ETV Bharat / bharat

ನಿರ್ಮಾಣ ಹಂತದ ಶಾಪಿಂಗ್ ಮಾಲ್ ಕಟ್ಟಡ ಕುಸಿದು ದುರಂತ: 5 ಜನ ದುರ್ಮರಣ - ಪುಣೆಯಲ್ಲಿ ಕಟ್ಟಡ ಕುಸಿದು ದುರಂತ

ಯರವಾಡ ಶಾಸ್ತ್ರೀ ನಗರದಲ್ಲಿ ನಿರ್ಮಾಣ ಹಂತದ ಶಾಪಿಂಗ್ ಮಾಲ್ ಕಟ್ಟಡ ಕುಸಿದು ದುರಂತ ಸಂಭವಿಸಿದೆ.

pune building collapse
pune building collapse
author img

By

Published : Feb 4, 2022, 1:02 AM IST

Updated : Feb 4, 2022, 5:50 AM IST

ಪುಣೆ: ನಿರ್ಮಾಣ ಹಂತದ ಶಾಪಿಂಗ್ ಮಾಲ್ ಕಟ್ಟಡ ಕುಸಿದು 5 ಜನ ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಪುಣೆಯ ಯರವಾಡ ಶಾಸ್ತ್ರೀ ನಗರದಲ್ಲಿ ತಡರಾತ್ರಿ ದುರಂತ ಸಂಭವಿಸಿದೆ.

ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು.

ಕಟ್ಟಡ ನಿರ್ಮಾಣದ ವೇಳೆ ಸ್ಟೀಲ್ ಕುಸಿದು ದುರಂತ ಸಂಭವಿಸಿದೆ. ಮೃತ ಕಾರ್ಮಿಕರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ದುರಂತಕ್ಕೆ ಖಚಿತ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಮಾಡುವುದಾಗಿ ಪುಣೆ ಡಿಸಿಪಿ ರೋಹಿದಾಸ್ ಪವಾರ್ ತಿಳಿಸಿದ್ದಾರೆ.

(ಇದನ್ನೂ ಓದಿ: ಅಮೆರಿಕ ಸೇನೆಯಿಂದ ಐಸಿಸ್ ನಾಯಕನ ಹತ್ಯೆ: ಶ್ವೇತಭವನ ಟ್ವೀಟ್​)

Last Updated : Feb 4, 2022, 5:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.