ETV Bharat / bharat

ತಡರಾತ್ರಿ ಕಟ್ಟಡ ಕುಸಿತ: ಆರು ಮಂದಿಗೆ ಗಾಯ

ಮುಂಬೈ ಉಪನಗರ ಅಂಧೇರಿಯಲ್ಲಿ ಕಟ್ಟಡ ಕುಸಿದು ದುರ್ಘಟನೆ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ಅವಶೇಷಗಳ ತೆರವು ಕಾರ್ಯ ಮಾಡಿದ್ದಾರೆ.

Building collapses in Mumbai
ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿದರು
author img

By

Published : Jul 28, 2021, 10:21 AM IST

ಮುಂಬೈ : ಉಪನಗರ ಅಂಧೇರಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಭಾಗಶಃ ಕುಸಿದ ಪರಿಣಾಮ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಜುಲೈ 27 ರ ಮಧ್ಯರಾತ್ರಿ 12:30 ಸುಮಾರಿಗೆ ಜುಹು ಗಲ್ಲಿಯ ಸಲಾಮಿ ಹೋಟೆಲ್ ಬಳಿಯ ಮೆಹ್ತಾ ಬಾಬು ಚಾಲ್‌ ಸಮೀಪ ದುರ್ಘಟನೆ ಸಂಭವಿಸಿದೆ. ಕಟ್ಟಡದಲ್ಲಿ ವಾಸವಿದ್ದ ಹಿರಿಯ ನಾಗರಿಕ, ರಕ್ಷಣಾ ತಂಡದ ಸಿಬ್ಬಂದಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿದರು

ಓದಿ : ಬಾರಾಬಂಕಿ ಅಪಘಾತದಲ್ಲಿ 18 ಮಂದಿ ಸಾವು: ಪರಿಹಾರ ಘೋಷಿಸಿದ ಪಿಎಂ ಮೋದಿ

ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಣೆ ಮಾಡಲಾಗಿದೆ. ಗಾಯಳುಗಳನ್ನು ಸಮೀಪದ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಅಗ್ನಿಶಾಮಕ ದಳದ ಸಿಬ್ಬಂದಿ ವಿಶ್ವ ರಾಹಟೆ (51) ಅವರನ್ನು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸ್ತುತ, ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.