ETV Bharat / bharat

ಶಾಸಕನ ಹೆಲಿಕಾಪ್ಟರ್​ ಶಬ್ದಕ್ಕೆ ಹೆದರಿ ಎಮ್ಮೆ ಹೃದಯಾಘಾತದಿಂದ ಸಾವು.. ದೂರು ನೀಡಿದ ರೈತ

ದೊಡ್ಡ ಸದ್ದು ಮಾಡುತ್ತಾ ಮನೆಯ ಮೇಲೆ ಹೆಲಿಕಾಪ್ಟರ್​ ಹಾರಿ ಹೋಗಿದ್ದಕ್ಕೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಮೃತಪಟ್ಟಿದೆ ಎಂದು ರೈತನೊಬ್ಬ ಶಾಸಕ ಮತ್ತು ಪೈಲಟ್​ ಮೇಲೆ ದೂರು ನೀಡಿದ ವಿಚಿತ್ ಘಟನೆ ರಾಜಸ್ತಾನದಲ್ಲಿ ನಡೆದಿದೆ.

buffalo-died-due-to-loud-sound-of-helicopter
ಎಮ್ಮೆ ಸಾವಿಗೆ ಹೆಲಿಕಾಪ್ಟರ್​ ಸದ್ದು ಕಾರಣ
author img

By

Published : Nov 13, 2022, 11:08 PM IST

ಬೆಹ್ರೋರ್ (ರಾಜಸ್ಥಾನ): ಏನೋ ಮಾಡಲು ಹೋಗಿ ಏನೋ ಆಯ್ತು ಎಂಬಂತಿದೆ ಈ ಪ್ರಸಂಗ. ಶಾಸಕರೊಬ್ಬರು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ತಮ್ಮ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಹೆಲಿಕಾಪ್ಟರ್​ನಿಂದ ಪುಷ್ಪವೃಷ್ಟಿ ಮಾಡಿಸುತ್ತಿದ್ದಾರೆ. ಈ ವೇಳೆ ಕಾಪ್ಟರ್ ಸದ್ದಿಗೆ ಎಮ್ಮೆ ಸತ್ತಿದೆ ಎಂದು ಗ್ರಾಮದ ವ್ಯಕ್ತಿಯೊಬ್ಬರು ಶಾಸಕ ಮತ್ತು ಪೈಲಟ್​ ಮೇಲೆ ದೂರು ನೀಡಿದ್ದಾರೆ.

ಈ ವಿಚಿತ್ರ ದೂರು ದಾಖಲಾಗಿದ್ದು ರಾಜಸ್ಥಾನದ ಬೆಹ್ರೋರ್​ ಜಿಲ್ಲೆಯಲ್ಲಿ. ಮನೆಯ ಮೇಲೆ ಕಾಪ್ಟರ್ ಹಾರಿದಾಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಶಬ್ದಕ್ಕೆ ಹೆದರಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದೆಯಂತೆ. ತಮಗೆ ಪರಿಹಾರ ಕೊಡಿಸಬೇಕು ಎಂದು ಎಮ್ಮೆ ಮಾಲೀಕ ಆಗ್ರಹಿಸಿದ್ದಾರೆ.

ಪೈಲಟ್​ ನಿರ್ಲಕ್ಷ್ಯವಂತೆ: ಗ್ರಾಮದಲ್ಲಿ ಪುಷ್ಪವೃಷ್ಟಿಗೆಂದು 10 ಮೀಟರ್​ ಎತ್ತರದಲ್ಲಿ ಹೆಲಿಕಾಪ್ಟರ್​ ಹಾರಿಸಲಾಗಿದೆ. ಇಷ್ಟು ಕಡಿಮೆ ಎತ್ತರದಲ್ಲಿ ಹಾರಿಸಿದ್ದಕ್ಕೆ ದೊಡ್ಡ ಸದ್ದಿನಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಎಮ್ಮೆ ಪ್ರಾಣ ಕಳೆದುಕೊಂಡಿದೆ. ಇದಕ್ಕೆ ಪೈಲಟ್​ ನಿರ್ಲಕ್ಷ್ಯವೇ ಕಾರಣವಾಗಿದೆ. ಎಮ್ಮೆಯನ್ನು ಕೊಡಿಸಿ ಇಲ್ಲವೇ, ಹಣ ನೀಡಿ ಎಂದು ಆ ರೈತ ಬೇಡಿಕೆ ಮಂಡಿಸಿದ್ದಾನೆ.

ಈ ಬಗ್ಗೆ ದೂರು ಪಡೆದಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಎಮ್ಮೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ. ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಜಾಲತಾಣಗಳಲ್ಲಿ ಆಯುಧದೊಂದಿಗೆ ಫೋಟೋ ಹಾಕುವಂತಿಲ್ಲ: ಬಂದೂಕು ಸಂಸ್ಕೃತಿಗೆ ಕಡಿವಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.