ETV Bharat / bharat

ಜನವರಿ 31 ರಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭ: ವರದಿ - ಸಚಿವೆ ನಿರ್ಮಲಾ ಸೀತಾರಾಮನ್

Budget Session 2024: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ ಎಂದು ವರದಿಯಾಗಿದೆ.

budget-session-2024-nirmala-sitharaman-to-present-interim-budget-on-february-1-report
ಜನವರಿ 31ರಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭ: ವರದಿ
author img

By ETV Bharat Karnataka Team

Published : Jan 11, 2024, 3:35 PM IST

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದ್ದು, ಫೆಬ್ರವರಿ 9ರವರೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಅಧಿವೇಶನ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್​ ಮಂಡಿಸಲಿದ್ದಾರೆ ಎಂದೂ ವರದಿಯಾಗಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 4ರಿಂದ ಡಿಸೆಂಬರ್ 21ರವರೆಗೆ ನಡೆದಿತ್ತು. ಇದು ಹಲವು ಪ್ರಸಂಗಗಳಿಗೆ ಸಾಕ್ಷಿಯಾಗಿತ್ತು. ವಸಾಹತುಶಾಹಿ ಕಾಲದ ಮೂರು ಕಾನೂನುಗಳ ಬದಲಾವಣೆ, ಇಬ್ಬರು ದುಷ್ಕರ್ಮಿಗಳು ಲೋಕಸಭೆ ಕಲಾಪಕ್ಕೆ ನುಗ್ಗಿದ್ದು, 140ಕ್ಕೂ ಹೆಚ್ಚು ಸಂಸದರ ಅಮಾನತು ಇತರ ಘಟನಾವಳಿಗಳು ಜರುಗಿದ್ದವು.

ಡಿ.21ರಂದು ರಾಜ್ಯಸಭೆ ಅನಿರ್ದಿಷ್ಟಾವಧಿಗೆ ಮುಂದೂಡುವಾಗ ಸಭಾಪತಿ ಜಗದೀಪ್ ಧನಕರ್, ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಸದನವು ನಿಗದಿತ ಸಮಯದ ಸುಮಾರು 22 ಗಂಟೆಗಳ ಕಾಲ ವ್ಯರ್ಥವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಸಭಾಪತಿ ಪ್ರಕಾರ, ಸದನವು ಈ ಬಾರಿಯ ಕಲಾಪದಲ್ಲಿ 65 ಗಂಟೆಗಳ ಕಾಲ ಚರ್ಚೆ ನಡೆದಿತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ಕಡೆಯಿಂದ 2,300 ಪ್ರಶ್ನೆಗಳನ್ನು ಕೇಳಲಾಗಿತ್ತು ಮತ್ತು 4,300 ವಿಷಯಗಳನ್ನು ಮಂಡಿಸಲಾಗಿತ್ತು.

ಇದೇ ವೇಳೆ, ಮೇಲ್ಮನೆಯಲ್ಲಿ ಅಶಿಸ್ತಿನ ನಡವಳಿಕೆ ಮತ್ತು ದುರ್ನಡತೆ ಆರೋಪದ ಮೇಲೆ 46 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಸಬಂಧಿಸಿದ ಮಸೂದೆಗಳು, ಚುನಾವಣಾ ಆಯುಕ್ತರ ನೇಮಕಾತಿ, ಟೆಲಿಕಾಂ ವಲಯ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಸೇರಿದಂತೆ ಒಟ್ಟು 17 ಮಸೂದೆಗಳನ್ನು ರಾಜ್ಯಸಭೆ ಅಂಗೀಕರಿಸಿತ್ತು.

ಮತ್ತೊಂದೆಡೆ, ಲೋಕಸಭೆಯು ಭಾರಿ ಭದ್ರತಾ ಉಲ್ಲಂಘನೆ ಘಟನೆಗೆ ಸಾಕ್ಷಿಯಾಗಿತ್ತು. 2001ರ ಸಂಸತ್ತಿನ ದಾಳಿಯ ಕರಾಳ ದಿನವಾಗಿದ್ದ ಡಿಸೆಂಬರ್ 13ರಂದು ಇಬ್ಬರು ದುಷ್ಕರ್ಮಿಗಳು ಕಲಾಪದೊಳಗೆ ನುಗ್ಗಿದ್ದರು. ಇದಕ್ಕೂ ಮೊದಲ ವಾರದವರೆಗೆ ಸದನ ಬಹುತೇಕ ಶಾಂತಿಯುತವಾಗಿ ನಡೆದಿತ್ತು. ಆದರೆ, ಭದ್ರತಾ ಉಲ್ಲಂಘನೆ ಪ್ರಕರಣದ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಆಗ ಅಶಿಸ್ತಿನ ವರ್ತನೆ ಆರೋಪದ ಸುಮಾರು 100 ಸಂಸದರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು.

ಅಲ್ಲದೇ, ಲೋಕಸಭೆಯಲ್ಲಿ ಕಾಸಿಗಾಗಿ ಪ್ರಶ್ನೆ ಕೇಳಿದ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಭಾಟಿಸಲಾಗಿತ್ತು. ಲೋಕಸಭೆಯು ಭಾರತೀಯ ದಂಡ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ, ಅಪರಾಧ ಪ್ರಕ್ರಿಯಾ ಸಂಹಿತೆ, ಪ್ರೆಸ್ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆಯಂತಹ ಕೆಲವು ಪ್ರಮುಖ ಮಸೂದೆಗಳನ್ನು ಅನುಮೋದನೆ ನೀಡಿತ್ತು.

ಇದನ್ನೂ ಓದಿ: ಸಂಸತ್​ ಭದ್ರತೆ ಉಲ್ಲಂಘನೆ ಕೇಸ್: ಆರೋಪಿಗಳಿಗೆ ನಾರ್ಕೊ, ಪಾಲಿಗ್ರಾಫ್​​ ಪರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.