ETV Bharat / bharat

Punjab Polls: ಪಂಜಾಬ್​ನಲ್ಲಿ ಬಿಎಸ್​ಪಿ ವರಿಷ್ಠೆ ಮಾಯಾವತಿ ಚುನಾವಣಾ ರ‍್ಯಾಲಿ - ನವಾನ್‌ಶಹರ್‌ನಲ್ಲಿ ಬಿಎಸ್​ಪಿ ವರಿಷ್ಠೆ ಮಾಯಾವತಿ ರ‍್ಯಾಲಿ

ತಮ್ಮ ತವರು ರಾಜ್ಯ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸದ ಮಾಯಾವತಿ ನವಾನ್‌ಶಹರ್‌ನ ಅಕಾಲಿದಳ-ಬಿಎಸ್‌ಪಿ ಅಭ್ಯರ್ಥಿ ನಚತರ್‌ ಪಾಲ್‌ ಪರವಾಗಿ ಮಂಗಳವಾರ ರ‍್ಯಾಲಿ ನಡೆಸಲಿದ್ದಾರೆ.

Mayawati
ಮಾಯಾವತಿ
author img

By

Published : Feb 8, 2022, 10:24 AM IST

ಚಂಡೀಗಢ(ಪಂಜಾಬ್): ವಿಧಾನಸಭಾ ಚುಣಾವಣೆ ಘೋಷಣೆಯಾದ ನಂತರವೂ ಮೌನವಾಗಿದ್ದ ಬಿಎಸ್​ಪಿ ವರಿಷ್ಠೆ ಮಾಯಾವತಿ ಪಂಜಾಬ್​ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಪಂಜಾಬ್​ನಲ್ಲಿ ಬಿಎಸ್​ಪಿ ಹೆಚ್ಚು ಕ್ಷೇತ್ರಗಳನ್ನು ಗಳಿಸಲು ಯತ್ನ ನಡೆಸಿದ್ದಾರೆ.

ತಮ್ಮ ತವರು ರಾಜ್ಯ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸದೇ ಮೌನವಾಗಿದ್ದ ಮಾಯಾವತಿ ನವಾನ್‌ಶಹರ್‌ನ ಅಕಾಲಿದಳ-ಬಿಎಸ್‌ಪಿ ಅಭ್ಯರ್ಥಿ ನಚತರ್‌ ಪಾಲ್‌ ಪರವಾಗಿ ಮಂಗಳವಾರ ರ‍್ಯಾಲಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 100 ವರ್ಷ ಕಳೆದ್ರೂ ಕಾಂಗ್ರೆಸ್​ ಅಧಿಕಾರಕ್ಕೆ ಬರಲ್ಲ, ಸಂಸತ್​ನಲ್ಲಿ ಪ್ರಧಾನಿ ಮೋದಿ ಲೇವಡಿ

ಇಷ್ಟು ಮಾತ್ರವಲ್ಲದೇ ಬಂಗಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಖ್ವಿದರ್ ಸುಖಿ ಮತ್ತು ಬಾಲಾಚೌರ್‌ನ ಅಭ್ಯರ್ಥಿ ಸುನಿತಾ ಚೌಧರಿ ಪರವಾಗಿಯೂ ಚುನಾವಣಾ ಪ್ರಚಾರ ನಡೆಸಲಿದ್ದು, ಈ ಪ್ರಚಾರ ಕಾರ್ಯಕ್ರಮದಲ್ಲಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಬಾದಲ್ ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಭಾಗಿಯಾಗಲಿದ್ದಾರೆ.

ಕೊರೊನಾ ಮಾರ್ಗಸೂಚಿಗಳ ಕಾರಣದಿಂದಾಗಿ ಚುನಾವಣಾ ರ‍್ಯಾಲಿಗಳನ್ನು ನಡೆಸಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಕಾರ್ಯಕರ್ತರ ಬದಲಿಗೆ ಕೇವಲ ರಾಜಕೀಯ ಪಕ್ಷಗಳ ನಾಯಕರು ಮಾತ್ರವೇ ಈ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.