ETV Bharat / bharat

ಭತ್ತದ ಗದ್ದೆಯಲ್ಲಿ 12 ಕೋಟಿ ರೂ. ಬೆಲೆಯ ಹಾವಿನ ವಿಷ ಪತ್ತೆ! - ದಕ್ಷಿಣ ದಿನಾಜಪುರ

ದಕ್ಷಿಣ ದಿನಾಜಪುರದ ಕುಮಾರಗಂಜ್​ನಲ್ಲಿರುವ ಭತ್ತದ ಗದ್ದೆಯಲ್ಲಿ ಹಾವಿನ ವಿಷ ತುಂಬಿದ್ದ ಗಾಜಿನ ಜಾರ್ ಅನ್ನು ಮರೆಮಾಚಲಾಗಿತ್ತು. ಶನಿವಾರ ಗಸ್ತು ತಿರುಗುತ್ತಿದ್ದ ಬಿಒಪಿಯ 61 ಬೆಟಾಲಿಯನ್​ನ ಯೋಧರು ವಶಪಡಿಸಿಕೊಂಡಿದ್ದಾರೆ.

snake venom
snake venom
author img

By

Published : Oct 24, 2021, 7:03 PM IST

(ದಕ್ಷಿಣ ದಿನಾಜಪುರ) ಪಶ್ಚಿಮ ಬಂಗಾಳ: ಗಡಿ ಭದ್ರತಾ ಸಿಬ್ಬಂದಿ(ಬಿಎಎಸ್​​ಎಫ್) ಭರ್ಜರಿ ಕಾರ್ಯಾಚರಣೆ ನಡೆಸಿ 12 ಕೋಟಿ ರೂ.ಮೌಲ್ಯದ ಹಾವಿನ ವಿಷ ವಶಪಡಿಸಿಕೊಂಡಿದೆ.

ದಕ್ಷಿಣ ದಿನಾಜಪುರದ ಕುಮಾರಗಂಜ್​ನಲ್ಲಿರುವ ಭತ್ತದ ಗದ್ದೆಯಲ್ಲಿ ಹಾವಿನ ವಿಷ ತುಂಬಿದ್ದ ಗಾಜಿನ ಜಾರ್ ಅನ್ನು ಮರೆಮಾಚಲಾಗಿತ್ತು. ಶನಿವಾರ ಗಸ್ತು ತಿರುಗುತ್ತಿದ್ದ ಬಿಒಪಿಯ 61 ಬೆಟಾಲಿಯನ್​ನ ಯೋಧರು ಇದನ್ನು ವಶಪಡಿಸಿಕೊಂಡಿದ್ದಾರೆ.

ಬಳಿಕ ಅದನ್ನು ಬಳುರ್ಗಾಟ್ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಆದಾಗ್ಯೂ, ಈವರೆಗೆ ಯಾರನ್ನೂ ಬಂಧಿಸಿಲ್ಲ. ಗಾಜಿನ ಜಾರ್ ಮೇಲೆ 'ಮೇಡ್ ಇನ್ ಫ್ರಾನ್ಸ್' ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಆರಂಭವಾಗಿದೆ.

ಇದನ್ನೂ ಓದಿ: ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಬೆಟ್ಟಿಂಗ್ ಬುಕ್ಕಿಗಳ ಮೇಲೆ ಖಾಕಿ ಹದ್ದಿನ ಕಣ್ಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.