ETV Bharat / bharat

13 ಕೋಟಿ ರೂ. ಮೌಲ್ಯದ ಹಾವಿನ ವಿಷ ವಶಕ್ಕೆ ಪಡೆದ ಬಿಎಸ್‌ಎಫ್‌

author img

By

Published : May 1, 2023, 6:40 PM IST

ಪಶ್ಚಿಮ ಬಂಗಾಳದ ಬಲೂರ್‌ಘಾಟ್‌ನಲ್ಲಿ 13 ಕೋಟಿ ರೂ. ಮೌಲ್ಯದ ಹಾವಿನ ವಿಷವನ್ನು ಬಿಎಸ್‌ಎಫ್‌ನ 137 ಬೆಟಾಲಿಯನ್ ಯೋಧರು ಪತ್ತೆ ಹಚ್ಚಿದರು, ಬಳಿಕ ವಶಕ್ಕೆ ಪಡೆದುಕೊಂಡರು.

BSF seized with snake venom
ನಾಗರ ಹಾವಿನ ವಿಷ ವಶಕ್ಕೆ ಪಡೆದ ಬಿಎಸ್‌ಎಫ್‌

ಬಲೂರ್‌ಘಾಟ್ (ಪಶ್ಚಿಮ ಬಂಗಾಳ): ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸೋಮವಾರ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 137 ಬೆಟಾಲಿಯನ್ ಯೋಧರ ತಂಡವು ದ್ರವ ರೂಪದಲ್ಲಿರುವ ಹಾವಿನ ವಿಷ ತುಂಬಿದ ಗಾಜಿನ ಜಾರ್​ಅನ್ನು ವಶಪಡಿಸಿಕೊಂಡಿದೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಹಿಲ್ಲಿಯ ಗೋಶ್‌ಪುರ ಬಿಒಪಿಯ ಪಹಾನ್ ಪಾರಾ ಗಡಿಯಲ್ಲಿ ಹಾವಿನ ವಿಷದ ಜಾರ್ ಬಿಎಸ್​ಎಫ್​ ಪತ್ತೆ ಹಚ್ಚಿದೆ. ಈ ವಿಷದ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 13 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಪ್ರಕರಣ: ಆರೋಪಿ ಗುಡ್ಡು ಮುಸ್ಲಿಂ ಮನೆ ಧ್ವಂಸಗೊಳಿಸಲು ಪೊಲೀಸರಿಂದ ಸಿದ್ಧತೆ

ಇಬ್ಬರು ಕಳ್ಳಸಾಗಣೆದಾರರು ಪರಾರಿ: ಇಬ್ಬರು ಕಳ್ಳಸಾಗಣೆದಾರರು ಹಾವಿನ ವಿಷವಿರುವ ಗಾಜಿನ ಜಾರ್ ಅನ್ನು ಗಡಿಯ ಮೂಲಕ ಬಾಂಗ್ಲಾದೇಶಕ್ಕೆ ಸಾಗಿಸುವ ಬಗ್ಗೆ ಗುಪ್ತಚರ ಇಲಾಖೆಯ ರಹಸ್ಯ ಮೂಲಗಳಿಂದ ಮಾಹಿತಿ ಬಂದಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ. ಅದರಂತೆ ಸೋಮವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಿಎಸ್‌ಎಫ್‌ ತಂಡ ಗಡಿಭಾಗದ ಭಾರತದ ವ್ಯಾಪ್ತಿಗೆ ಬರುವ ಗ್ರಾಮ ಪಹನ್‌ಪಾರಾ ಪ್ರದೇಶದಲ್ಲಿ ರಹಸ್ಯವಾಗಿ ಕಾಯಲು ಆರಂಭಿಸಿತು.

ಇದನ್ನೂ ಓದಿ: ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನು 3 ಕಿ.ಮೀ​ ಎಳೆದೊಯ್ದ ಚಾಲಕ!​

ಸ್ವಲ್ಪ ಸಮಯದ ನಂತರ, ಬಾಂಗ್ಲಾದೇಶದಿಂದ ಇಬ್ಬರು ಕಳ್ಳಸಾಗಣೆದಾರರು ಗಡಿಯ ಕಡೆಗೆ ಬಂದರು. ಅವರು ಭಾರತದ ಭೂ ಪ್ರದೇಶವನ್ನು ಪ್ರವೇಶಿಸಿದ ತಕ್ಷಣ, ಬಿಎಸ್ಎಫ್ ಯೋಧರು ಅವರನ್ನು ನಿಲ್ಲಿಸಲು ಹೇಳಿದರು. ಆದರೆ, ಇಬ್ಬರು ಬಾಂಗ್ಲಾದೇಶದ ಕಡೆಗೆ ಓಡಲಾರಂಭಿಸಿದರು. ಅವರನ್ನು ತಡೆಯಲು ಬಿಎಸ್ಎಫ್ ಸಿಬ್ಬಂದಿ ಒಂದು ಸುತ್ತಿನ ಗುಂಡು ಹಾರಿಸಿದರು.

ಇದನ್ನೂ ಓದಿ: 20 ಗಂಟೆ ಅವಶೇಷಗಳಡಿ ಸಿಲುಕಿದ ವ್ಯಕ್ತಿಯ ಪ್ರಾಣ ಕಾಪಾಡಿದ ಸಿಬ್ಬಂದಿ; ಜನ್ಮದಿನದಂದೇ ಸಿಕ್ತು ಮರು ಹುಟ್ಟು!

ಬಿಎಸ್​ಎಫ್​ ಹೇಳಿದ್ದೇನು?: ಇಬ್ಬರು ಕಳ್ಳಸಾಗಣೆದಾರರನ್ನು ಹಿಡಿಯಲು ಸಾಧ್ಯವಾಗಿಲ್ಲ. ಅದರ ನಂತರ, ಗಡಿ ಕಾವಲುಗಾರರು ಕಳ್ಳಸಾಗಣೆದಾರರು ಬಿಟ್ಟುಹೋದ ಸರಕುಗಳನ್ನು ಹುಡುಕಲು ಪ್ರಾರಂಭಿಸಿದ ವೇಳೆ, ಹಾವಿನ ವಿಷವಿರುವ ಗಾಜಿನ ಜಾರ್​ ಪತ್ತೆಯಾಗಿದೆ, ಬಳಿಕ ಅದನ್ನು ವಶಪಡಿಸಿಕೊಂಡೆವು. ಅದರ ಮೇಲೆ "ಮೇಡ್ ಇನ್ ಫ್ರಾನ್ಸ್" ಎಂದು ಬರೆಯಲಾಗಿದೆ. ಅದರಲ್ಲಿ ಸ್ವಲ್ಪ ದ್ರವ ರೂಪದವಿದೆ. ಪತ್ತೆಯಾದ ದ್ರವವು ನಾಗರ ಹಾವಿನ ವಿಷವಾಗಿದೆ ಎಂದು ಬಿಎಸ್​ಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಲಸ ಮುಗಿಸಿಕೊಂಡು ಮನೆಗೆ ಹೋಗ್ತಿದ್ದ ಮಹಿಳೆ ಮೇಲೆ ಆಟೋ ಚಾಲಕರಿಂದ ಗ್ಯಾಂಗ್​ ರೇಪ್​

ಬಿಎಸ್​ಎಫ್​ನ 137ನೇ ಬೆಟಾಲಿಯನ್ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಪತ್ತೆಯಾದ ಹಾವಿನ ವಿಷದ ಜಾರ್​ಅನ್ನು ಸೋಮವಾರ ಮಧ್ಯಾಹ್ನ ಬಾಳೂರುಘಟ್ಟ ವ್ಯಾಪ್ತಿಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಜಾರ್‌ನಲ್ಲಿರುವ ದ್ರವವು ಪ್ರಾಥಮಿಕ ತನಿಖೆಯಲ್ಲಿ ವಿಷ ಎಂದು ಕಂಡುಬಂದರೂ ಕೂಡ, ಅದನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸದ್ದು ಮಾಡಬೇಡ ಎಂದಿದ್ದಕ್ಕೆ ಗುಂಡು ಹಾರಿಸಿ ಕೊಂದೇ ಬಿಟ್ಟ!: ಟೆಕ್ಸಾಸ್​​ನಲ್ಲಿ ಐವರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.