ETV Bharat / bharat

ಗಡಿ ದಾಟಿ ಬಂದ ಪಾಕ್​ನ 2​ ಡ್ರೋನ್​​​ ಹಿಮ್ಮೆಟ್ಟಿಸಿದ ಬಿಎಸ್​​ಎಫ್​​ - ಅಂತಾರಾಷ್ಟ್ರೀಯ ಗಡಿ ರೇಖೆ

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಡ್ರೋನ್​ಗಳು ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದ್ದು, ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಲು ಸುಮಾರು 15 ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಎರಡೂ ಡ್ರೋನ್​ಗಳು ಪಾಕಿಸ್ತಾನದ ಗಡಿ ದಾಟಿ ವಾಪಸ್ ತೆರಳಿವೆ.

BSF opened fire on Pakistani drones in Jammu
ಗಡಿದಾಟಿ ಬಂದ 2 ಪಾಕ್​ ಡ್ರೋನ್​​​ಗಳ ಹಿಮ್ಮೆಟ್ಟಿಸಿದ ಭದ್ರತಾ ಪಡೆ
author img

By

Published : Apr 24, 2021, 6:35 PM IST

ಜಮ್ಮು (ಶ್ರೀನಗರ): ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಶನಿವಾರ ಮುಂಜಾನೆ ಪಾಕ್​ನ ಎರಡು ಡ್ರೋನ್​ಗಳು ಒಳನುಸುಳಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಡ್ರೋನ್​ಗಳು ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದ್ದು, ಡ್ರೋನ್ ಹೊಡೆದುರುಳಿಸಲು ಭದ್ರತಾ ಪಡೆ ಸಿಬ್ಬಂದಿ ಸುಮಾರು 15 ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಎರಡೂ ಡ್ರೋನ್​ಗಳು ಪಾಕಿಸ್ತಾನದ ಗಡಿ ದಾಟಿ ವಾಪಸ್ ತೆರಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನವು ಔಷಧಿ ಹಾಗೂ ಶಸ್ತ್ರಾಸ್ತ್ರ ರವಾನೆಗಾಗಿ ಡ್ರೋನ್​ಗಳನ್ನು ಬಳಸುತ್ತಿದ್ದು, ಹಲವು ಬಾರಿ ಭಾರತೀಯ ಸೇನೆ ಅವುಗಳ ಕಾರ್ಯಾಚರಣೆಗೂ ಮೊದಲೇ ಹೊಡೆದುರುಳಿಸಿವೆ.

ಇದೀಗ ಮತ್ತೆರಡು ಡ್ರೋನ್ ಹಾರಾಟ ನಡೆಸಿವೆ. ಆದರೆ ಡ್ರೋನ್​​​ಗಳು ಪಾಕ್​ ಪ್ರದೇಶಕ್ಕೆ ಮರಳಿದ್ದು, ಡ್ರೋನ್​ ಹಾರಾಟ ನಡೆಸಿದ ಸ್ಥಳದಲ್ಲಿ ಸುರಕ್ಷತಾ ದೃಷ್ಟಿಯಿಂದ ತಲಾಶ್ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.