ETV Bharat / bharat

10 ತಿಂಗಳಲ್ಲಿ ದಾಖಲೆಯ 69 ಪಾಕ್​ ಡ್ರೋನ್​ ಬಿಎಸ್​ಎಫ್​ ವಶ: ಇದರಲ್ಲಿ ಚೀನಾ ನಿರ್ಮಿತವೇ ಹೆಚ್ಚು

author img

By ETV Bharat Karnataka Team

Published : Nov 23, 2023, 8:27 PM IST

ಪಾಕಿಸ್ತಾನದಿಂದ ಅಕ್ರಮವಾಗಿ ಈ ವರ್ಷದ 10 ತಿಂಗಳಲ್ಲಿ ಒಟ್ಟು 69 ಡ್ರೋನ್​ ಹಾರಿ ಬಂದಿದ್ದು, ಎಲ್ಲವನ್ನು ಹೊಡೆದುರುಳಿ ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್​ಎಫ್​ ತಿಳಿಸಿದೆ.

ಡ್ರೋನ್​ ಬಿಎಸ್​ಎಫ್​ ವಶ
ಡ್ರೋನ್​ ಬಿಎಸ್​ಎಫ್​ ವಶ

ನವದೆಹಲಿ: ಮಾದಕವಸ್ತು, ಬಂದೂಕುಗಳನ್ನು ಹೊತ್ತು ಅಕ್ರಮವಾಗಿ ಭಾರತದ ಗಡಿ ದಾಟಿ ಬಂದ 69 ಪಾಕಿಸ್ತಾನಿ ಡ್ರೋನ್‌ಗಳನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಕಳೆದ 10 ತಿಂಗಳಲ್ಲಿ ವಶಪಡಿಸಿಕೊಂಡಿದೆ. ಇವುಗಳಲ್ಲಿ ಹೆಚ್ಚಿನವು ಚೀನಾ ನಿರ್ಮಿತವಾಗಿವೆ ಎಂದು ಗಡಿ ಭದ್ರತಾ ಪಡೆ ಗುರುವಾರ ತಿಳಿಸಿದೆ.

ಅಂಕಿಅಂಶಗಳ ಪ್ರಕಾರ, ಪಂಜಾಬ್, ರಾಜಸ್ಥಾನ ಮತ್ತು ಜಮ್ಮು ಗಡಿಗಳಲ್ಲಿ ಈ ಡ್ರೋನ್​ಗಳು ಹಾರಿಬಂದಿದ್ದವು. ಈ ವರ್ಷದ ಜನವರಿ 1 ರಿಂದ ಅಕ್ಟೋಬರ್ 31 ರ ನಡುವೆ ಒಟ್ಟು 69 ಡ್ರೋನ್‌ಗಳು ಬಿಎಸ್‌ಎಫ್ ವಶಕ್ಕೆ ಸಿಕ್ಕಿವೆ. ಇದರಲ್ಲಿ 60 ಪಂಜಾಬ್ ಗಡಿಯಲ್ಲಿ ಮತ್ತು 9ಅನ್ನು ರಾಜಸ್ಥಾನ ಗಡಿಯಿಂದ ಜಪ್ತಿ ಮಾಡಲಾಗಿದೆ.

ಪಂಜಾಬ್‌ನಿಂದ 19 ಮತ್ತು ರಾಜಸ್ಥಾನ ಗಡಿಯಲ್ಲಿ ಎರಡು ಸೇರಿದಂತೆ ಅಕ್ಟೋಬರ್‌ನಲ್ಲಿ ತಿಂಗಳೊಂದರಲ್ಲಿ ಗರಿಷ್ಠ ಅಂದರೆ 21 ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್‌ನಲ್ಲಿ 11, ಮೇ ತಿಂಗಳಲ್ಲಿ ಏಳು, ಫೆಬ್ರವರಿ, ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ ಆರು, ಆಗಸ್ಟ್​ನಲ್ಲಿ ಐದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ತಲಾ ಮೂರು, ಜನವರಿಯಲ್ಲಿ ಒಂದು ಡ್ರೋನ್​ ಸಿಕ್ಕಿವೆ. ವಿಶೇಷವಾಗಿ ಜನವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜಸ್ಥಾನ ಗಡಿಯಲ್ಲಿ ಯಾವುದೇ ಡ್ರೋನ್ ಕಂಡುಬಂದಿರಲಿಲ್ಲ.

ಇದರ ಜೊತೆಗೆ 2020 ರ ಜನವರಿ 1 ರಿಂದ ಈ ವರ್ಷದ ಅಕ್ಟೋಬರ್ 31 ರವರೆಗೆ ಲೆಕ್ಕ ಹಾಕಿದಲ್ಲಿ ಒಟ್ಟು 93 ಡ್ರೋನ್‌ಗಳು ಸಿಕ್ಕಿವೆ. ಇದರಲ್ಲಿ ಒಂದು ಡ್ರೋನ್ ಅನ್ನು 2020 ರ ಜೂನ್ ತಿಂಗಳಲ್ಲಿ ಮತ್ತು 2021 ರ ಡಿಸೆಂಬರ್​ನಲ್ಲಿ ಜಮ್ಮು ಗಡಿಯಿಂದ ವಶಪಡಿಸಿಕೊಳ್ಳಲಾಗಿದೆ.

ಈ ವರ್ಷವೇ ಹೆಚ್ಚು: ಕಳೆದ ಮೂರು ವರ್ಷಗಳಲ್ಲಿ 2023 ರಲ್ಲಿ ಅತಿ ಹೆಚ್ಚು ಡ್ರೋನ್​ಗಳು ಶತ್ರು ರಾಷ್ಟ್ರದಿಂದ ಹಾರಿಬಂದಿವೆ. 2022 ರಲ್ಲಿ ಪಂಜಾಬ್ ಗಡಿಯಿಂದ 22 ಡ್ರೋನ್​ಗಳು ಬಂದ ಬಳಿಕ ಇವುಗಳ ಸಂಖ್ಯೆ ಹಠಾತ್​ ಏರಿಕೆ ಕಂಡವು. ಪಾಕಿಸ್ತಾನದಲ್ಲಿರುವ ಕಳ್ಳಸಾಗಣೆದಾರರು ಈ ಡ್ರೋನ್‌ಗಳನ್ನು ಹೆರಾಯಿನ್, ಕೊಕೇನ್​ನಂತರ ನಿಷಿದ್ಧ ಮಾದಕವಸ್ತುವನ್ನು ಸಾಗಿಸಲು ಬಳಸುತ್ತಿದ್ದರು. ಇವುಗಳಲ್ಲಿ 500 ಗ್ರಾಂನಿಂದ 1 ಕೆಜಿವರೆಗೆ ತುಂಬಿ ರಾತ್ರಿ ವೇಳೆ ಹಾರಿ ಬಿಡುತ್ತಿದ್ದರು ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದರು.

ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾರಿಬರುತ್ತಿರುವ ಡ್ರೋನ್​ಗಳ ಮೇಲೆ ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿವೆ. ಡ್ರೋನ್​ ಕಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸುತ್ತಿವೆ. ಅವುಗಳನ್ನು ಕಳ್ಳಸಾಗಣೆದಾರರು ಮರಳಿ ಪಡೆಯುವ ಮೊದಲೇ ಗಡಿ ಬೇಲಿಯಲ್ಲಿ ಜಪ್ತಿ ಮಾಡಲಾಗುತ್ತಿದೆ. ಇದರಿಂದ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: ಆಲ್ಟ್​ಮ್ಯಾನ್ ವಜಾಕ್ಕೆ ಕಾರಣವಾಗಿತ್ತಾ ಓಪನ್ ಎಐನ ರಹಸ್ಯ ಪ್ರಾಜೆಕ್ಟ್​ 'ಕ್ಯೂ-ಸ್ಟಾರ್'?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.