ETV Bharat / bharat

ತೆಲಂಗಾಣದಲ್ಲಿ ಬಿಆರ್​ಎಸ್​ ಹಿನ್ನಡೆ ಬಗ್ಗೆ ನಿರಾಶೆ; ಕಾಂಗ್ರೆಸ್​ಗೆ ಅಭಿನಂದಿಸಿದ ಕೆಟಿಆರ್​

author img

By ETV Bharat Karnataka Team

Published : Dec 3, 2023, 5:46 PM IST

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ.

brs-leader-ktr-expresses-disappointment-over-his-party-performance-congratulates-congress
ತೆಲಂಗಾಣ ಚುನಾವಣೆ : ಪಕ್ಷದ ಪ್ರದರ್ಶನದ ಬಗ್ಗೆ ನಿರಾಸೆ , ಕಾಂಗ್ರೆಸ್​ಗೆ ಅಭಿನಂದನೆ ಸಲ್ಲಿಸಿದ ಕೆಟಿಆರ್​

ಹೈದರಾಬಾದ್​ (ತೆಲಂಗಾಣ) : ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತಾರೂಢ ಬಿಆರ್​ಎಸ್​( ಭಾರತ್​ ರಾಷ್ಟ್ರ ಸಮಿತಿ)ಗೆ ತೀವ್ರ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಬಿಆರ್​ಎಸ್​ ನಾಯಕ ಕೆ ಟಿ ರಾಮರಾವ್​ ತಮ್ಮ ಪಕ್ಷದ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ಕೆಟಿಆರ್​, ಬಿಆರ್‌ಎಸ್ ಪಕ್ಷಕ್ಕೆ ಸತತ ಎರಡು ಅವಧಿಯ ಸರ್ಕಾರವನ್ನು ನೀಡಿದ್ದಕ್ಕಾಗಿ ತೆಲಂಗಾಣ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂದಿನ ಫಲಿತಾಂಶದಿಂದ ಬೇಸರವಾಗಿಲ್ಲ. ಆದರೆ ಈ ಫಲಿತಾಂಶವನ್ನು ನಿರೀಕ್ಷಿಸಿಲ್ಲದಿದ್ದುದರಿಂದ ಖಂಡಿತವಾಗಿಯೂ ನಿರಾಶೆಯಾಗಿದೆ. ನಾವು ಇದನ್ನು ಪರಿಗಣಿಸಿ ಮತ್ತೆ ಪುಟಿದೇಳುತ್ತೇವೆ. ಜನಾದೇಶವನ್ನು ಪಡೆದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ನಿಮಗೆ ಶುಭವಾಗಲಿ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಕಾಂಗ್ರೆಸ್​ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಆರ್​ಎಸ್​ 40ಕ್ಕೆ ಕುಸಿದಿದೆ. ಬಿಜೆಪಿ 8 ಸ್ಥಾನ, ಎಐಎಂಐಎಂ 7 ಸ್ಥಾನ, ಸಿಪಿಐ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್​ ಕಾರ್ಯಕರ್ತರಿಂದ ಸಂಭ್ರಮಾಚರಣೆ : ಕಾಂಗ್ರೆಸ್​ ಭರ್ಜರಿ ಗೆಲುವು ಸಾಧಿಸಿರುವ ಬೆನ್ನಲ್ಲೇ ಹೈದರಾಬಾದ್​ನ ಕಾಂಗ್ರೆಸ್ ಕಚೇರಿಗೆ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಆಗಮಿಸಿದರು. ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ರೇವಂತ್​ ರೆಡ್ಡಿ ಪರ ಘೋಷಣೆ ಕೂಗಿದರು. ಕಾಂಗ್ರೆಸ್​ ಗೆಲುವು ಖಚಿತವಾಗುತ್ತಲೇ ರೇವಂತ್​ ರೆಡ್ಡಿ ರೋಡ್​ ಶೋ ನಡೆಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಜಯಘೋಷ ಕೂಗಿದರು. ರೋಡ್​ ಶೋ ಸಂದರ್ಭ ಅಪಾರ ಸಂಖ್ಯೆಯ ಕಾರ್ಯಕರ್ತರು ನೆರೆದಿದ್ದರು. ಇದಕ್ಕೂ ಮುನ್ನ ತೆಲಂಗಾಣ ಡಿಜಿಪಿ ಅಂಜನಿಕುಮಾರ್​ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಹೈದರಾಬಾದ್​ನಲ್ಲಿರುವ ರೇವಂತ್​ ರೆಡ್ಡಿ ಮನೆಗೆ ಭೇಟಿ ನೀಡಿ, ಅಭಿನಂದಿಸಿದ್ದರು.

ಹೈದರಾಬಾದ್​ನಲ್ಲಿರುವ ಕಾಂಗ್ರೆಸ್​ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಈ ವೇಳೆ ಕಾರ್ಯಕರ್ತರು ಬೈ ಬೈ ಕೆಸಿಆರ್​ ಎಂದು ಘೋಷಣೆ ಕೂಗಿದರು. ಜೊತೆಗೆ ಕಾರ್ಯಕರ್ತರು ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂಧಿ, ಸಂಸದ ರಾಹುಲ್​ ಗಾಂಧಿ, ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಪೋಸ್ಟರ್​​ಗೆ ಹಾಲಿನ ಅಭಿಷೇಕ ಮಾಡಿ ಗೆಲುವನ್ನು ಸಂಭ್ರಮಿಸಿದ್ದಾರೆ.

ಕಾಂಗ್ರೆಸ್ ತೆಲಂಗಾಣದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದಕ್ಕೆ ಕಾಂಗ್ರೆಸ್​ ಸಂಸದ ಉತ್ತಮ್​ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಕಳೆದ 2014 ಮತ್ತು 2018ರ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು, ನಾವು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ತೆಲಂಗಾಣದಲ್ಲಿ ಸರ್ಕಾರ ರಚನೆ ಮಾಡಲಿದೆ. ತೆಲಂಗಾಣದ ಜನರು ಗಾಂಧಿ ಕುಟುಂಬವನ್ನು ಪ್ರೀತಿಸುವುದರಿಂದ ಕಾಂಗ್ರೆಸ್​ ಗೆದ್ದಿದೆ. ಗಾಂಧಿ ಕುಟುಂಬಕ್ಕೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನಮಾನವನ್ನು ಜನರು ನೀಡಿದ್ದಾರೆ. 2014 ಮತ್ತು 2018ರಲ್ಲಿ ನಾವು ತಪ್ಪುಗಳನ್ನು ಮಾಡಿದ್ದೆವು. ಈ ಬಾರಿ ಆ ತಪ್ಪುಗಳನ್ನು ಸರಿಪಡಿಸಿ ಗೆಲುವು ಸಾಧಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ತೆಲಂಗಾಣ ಅಚ್ಚರಿ ಫಲಿತಾಂಶ: ಹಾಲಿ ಸಿಎಂ ಕೆಸಿಆರ್​, ಸಿಎಂ ಆಕಾಂಕ್ಷಿ ರೇವಂತ್ ವಿರುದ್ಧ ಬಿಜೆಪಿಗೆ ಗೆಲುವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.